Breaking News

34 ನೆಕ್ಕಿಲಾಡಿ ನಿವಾಸಿ, ಆರೆಸ್ಸೆಸ್ ಕಾರ್ಯಕರ್ತ ಯು. ಭಾಸ್ಕರ ಆಚಾರ್ಯ ನಿಧನ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: 34 ನೆಕ್ಕಿಲಾಡಿ ನಿವಾಸಿ, ಆರೆಸ್ಸೆಸ್ ಕಾರ್ಯಕರ್ತ ಯು. ಭಾಸ್ಕರ ಆಚಾರ್ಯ (61 ವರ್ಷ) ಮಂಗಳವಾರ ನಸುಕಿನ ಜಾವ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರೀಯ ಕಾರ್ಯಕರ್ತನಾಗಿದ್ದ ಇವರು, ಉಪ್ಪಿನಂಗಡಿ ಸಿಎ ಬ್ಯಾಂಕ್ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರಲ್ಲದೆ. ಹಲವು ಸಂಘ- ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಒಮ್ಮೆ ಚೇತರಿಸಿಕೊಂಡಿದ್ದರಾದರೂ, ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇವರು ನೆಕ್ಕಿಲಾಡಿ ಗ್ರಾ.ಪಂ. ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಮೃತರು ಪತ್ನಿ, ಮಕ್ಕಳಾದ ಶಿಲ್ಪಾ, ರಾಜೇಶ್ ಮತ್ತು ಶ್ರುತಿರವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.