ಜಗತ್ತಿನಾದ್ಯಂತ ಕಾಡುತ್ತಿರುವ ಮಾರಕ ಕೊರೊನಾ ವೈರಸ್ ಶಮನಕ್ಕಾಗಿ ಮಾ.18ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಧನ್ವಂತರಿ ಯಾಗ

Puttur_Advt_NewsUnder_1
Puttur_Advt_NewsUnder_1
  • ವಿವಿಧ ರೋಗಗಳ ಪರಿಹಾರಕ್ಕೆ ಧನ್ವಂತರಿ ಯಾಗ
  • 10 ದ್ರವ್ಯಗಳಿಂದ 10 ಸಹಸ್ರ ಆಹುತಿ
  • 1 ಲಕ್ಷ ಧನ್ವಂತರಿ ಜಪ

ಪುತ್ತೂರು: ಜಗತ್ತಿನಾದ್ಯಂತ ಕಾಡುತ್ತಿರುವ ಮಾರಕ ಕೊರೊನಾ ವೈರಸ್ ರೋಗದ ಶಮನಕ್ಕಾಗಿ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾ.18ರಂದು ಬೆಳಗ್ಗೆ ಆದಿತ್ಯಾದಿ ನವಗ್ರಹ ಶಾಂತಿ ಮತ್ತು ಮಹಾ ಧನ್ವಂತರಿ ಯಾಗ ಜರುಗಲಿದೆ.  ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕುಮಾರ್ ಕೆದಿಲಾಯ, ಅರ್ಚಕರಾದ ಜಯರಾಮ ಜೋಯಿಸ, ಉದಯ ಭಟ್‌ರವರ ನೇತೃತ್ವದಲ್ಲಿ ನಡೆಯುವ ಈ ಯಾಗದಲ್ಲಿ ವೇದ ಸಂವರ್ಧನಾ ಪ್ರತಿಷ್ಠಾನ, ಶಿವಳ್ಳಿ ಸಂಪದ, ಕೂಟಮಹಾಜಗತ್ತು ಮತ್ತು ಎಲ್ಲಾ ಬ್ರಾಹ್ಮಣ ವೈದಿಕರಿಂದ 1ಲಕ್ಷ ಜಪ, ಧನ್ವಂತರಿ ಯಜ್ಞ ಮತ್ತು ನವಗ್ರಹ ಯಜ್ಞ ನಡೆಯಲಿದೆ. ಯಾಗಕ್ಕೆ ಅಮೃತಬಳ್ಳಿ, ಗರಿಕೆಹುಲ್ಲು, ತುಪ್ಪ, ದ್ರವ್ಯಗಳನ್ನು ಯಥಾ ಶಕ್ತಿ ತರುವಂತೆ ಅರ್ಚಕ ವೃಂದ ವಿನಂತಿಸಿದೆ.

ಲೋಕ ಕಲ್ಯಾಣಾರ್ಥಕ್ಕಾಗಿ ಈ ಯಾಗ ದುಷ್ಟಾರಿಷ್ಟೇ

ಸಮಯಾತೇ ಕರ್ತವ್ಯಂ ಗ್ರಹಶಾಂತಿಕಂ |

ದೇಶದಲ್ಲಿ, ರಾಜ್ಯದಲ್ಲಿ, ಪ್ರಪಂಚದಲ್ಲಿ ನಾನಾವಿಧ ಕಷ್ಟಗಳು ತೊಂದರೆಗಳು, ಅನಾರೋಗ್ಯ, ದುರ್ಮರಣಗಳು ಉಂಟಾದಾಗ ಆದಿತ್ಯಾದಿ ನವಗ್ರಹ ಆರಾಧನೆ ಮಾಡಬೇಕು ಎಂಬುದಾಗಿ ಶಾಸ್ತ್ರಗಳು ತಿಳಿಸ್ತಾ ಇವೆ. ಹಾಗೆಯೇ ಮನುಷ್ಯರಿಗೆ, ಪ್ರಾಣಿಗಳಿಗೆ, ದನಕರುಗಗಳಿಗೆ ಪ್ರತ್ಯಕ್ಷ ರೋಗಗಳು, ಅಪ್ರತ್ಯಕ್ಷ (ಮದ್ದು ಇಲ್ಲದ) ರೋಗಗಳು ಬಂದು ದುರ್ಮರಣಗಳು ಬಂದಾಗ ಮಾನಸಿಕ, ಕಾಯಿಕ, ದೈಹಿಕ ವಿವಿಧ ರೋಗಗಳ ಪರಿಹಾರಾರ್ಥಕ್ಕಾಗಿ ಧನ್ವಂತರಿ ಮಹಾ ಯಜ್ಞವನ್ನು ಮಾಡಬೇಕೆಂಬುದಾಗಿ ಶಾಸ್ತ್ರ ವಚನ. ಈಗ ಬಂದಿರುವ ಕರೋನಾ ಎಂಬಂತಹ ಮಹಾ ಖಾಯಿಲೆ ಸೇರಿದಂತೆ ಕಾಲರಾ ಹಕ್ಕಿಜ್ವರ, ಇಲಿಜ್ವರ, ಡೆಂಘೇ ಜ್ವರ ಇತ್ಯಾದಿ ಖಾಯಿಲೆಗೆ ಸರಿಯಾದ ಜೌಷಧಿ ಇಲ್ಲದೇ ಜನರು ಮರಣ ಹೊಂದುತ್ತಿದ್ದಾರೆ. ಅಂತಹ ಮಹಾರೋಗಾದಿಗಳು ಬರದೇ ಇರಲು ಧನ್ವಂತರಿ ರೂಪಿ ಮಹಾವಿಷ್ಣುವಿನ ಅನುಗ್ರಹ ಪ್ರಾಪ್ತಿಯಾಗಿ ಇಡೀ ಲೋಕಕ್ಕೆ ಸುಭಿಕ್ಷೆಯಾಗಲಿ ಎಂದು ದೇವನಲ್ಲಿ ಪ್ರಾರ್ಥಿಸೋಣ. ಭಕ್ತಾದಿಗಳಿಗೆ ಬಂದು ಭಾಗವಹಿಸುವ ಅವಕಾಶವಿದೆ.

ಕಾಂಕ್ಷಂತಿ ಯೇ ಮನುಷ್ಯಾಃ ವೈ ಆಯುರಾರೋಗ್ಯ ಸಂಪದಃ |
ಅವಶ್ಯಾಚರಣೀ ಯಂ ತೈರ್ಧನ್ವಂತರಿ ವ್ರತಂ ಶುಭಂ |

ಹತ್ತು ದ್ರವ್ಯಗಳಿಂದ ಹತ್ತು ಸಹಸ್ರ ಆಹುತಿ ಮತ್ತು ಒಂದು ಲಕ್ಷ ಧನ್ವಂತರಿ ಜಪ ಮಾಡಿ ಕಲಶ ತೀರ್ಥ ಪ್ರಾಶನ, ಹೋಮದ ಭಸ್ಮ ಲೇಪನ, ಪ್ರಸಾದ ಸ್ವೀಕಾರದಿಂದ ರೋಗಗಳನ್ನು ತಡೆಗಟ್ಟಲು ಸಾಧ್ಯ-ವಸಂತ ಕೆದಿಲಾಯ, ಪ್ರಧಾನ ಅರ್ಚಕರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.