ಓಡದಿರಿ ಕೋರೊನಕ್ಕೆ ಹೆದರಿ – ಓಡಿಸೋಣ ಒಟ್ಟಾಗಿ ಬಂದ ಮಾರಿ..!

Puttur_Advt_NewsUnder_1
Puttur_Advt_NewsUnder_1
✍️ ಜನಾರ್ಧನ ದುರ್ಗ, ನಿಡ್ಪಳ್ಳಿ
ಈಗ ಎಲ್ಲಿ ನೋಡಿದರು ಒಂದೇ ಭೀತಿ… ಅದು ಕೊರೋನಾ…!!! ಚೀನಾದಲ್ಲಿ ಮರಣ ಮೃದಂಗ ಬಾರಿಸಿದ ಕೊರೋನ ಭಾರತಕ್ಕೂ ಬಂದಿದೆಯಂತೆ…!! ಟಿ.ವಿ ಚಾನೆಲ್ಗಳಲ್ಲಂತೂ ಕೋಳಿಗಳಿಂದಲೂ ಹರಡ ತೊಡಗಿತು…!! ಅಲ್ಲಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಯಿತು..! ಸೋಶಿಯಲ್ ಮೀಡಿಯಾಗಳಲ್ಲಂತು ಕೊರೋನ ಕಿರೀಟ ಹೊತ್ತು ವಿಜ್ರಂಭಿಸಿತು. ಜನ ಪೆಚ್ಚಾದರು… ಶೀತ, ಕೆಮ್ಮು ಗಂಟಲು ನೋವಿಗೆ ಬೆಚ್ಚಿ ಬಿದ್ದರು…!! ಹೌಹಾರಿದ ಸರಕಾರ ಮಕ್ಕಳಿಗೆ ರಜೆ ಘೊಷಣೆ ಮಾಡಿಬಿಟ್ಟಿತು.  ಪರೀಕ್ಷೆಗಳನ್ನು ಮತ್ತೆ ಮುಂದೂಡಿತು. ರೋಗ ನಿರೋಧಕ ಶಕ್ತಿ ಮಕ್ಕಳಲ್ಲಿ ಕಡಿಮೆ ಇರುವ ಕಾರಣ ಜವಾಬ್ದಾರಿಯುತ ಸರಕಾರ ಈ ಕ್ರಮ ಕೈಗೊಳ್ಳಲೇ ಬೇಕಾಗಿತ್ತು ಕೂಡ…  ಹೌದು ಈ ರೋಗ ನಮ್ಮಲ್ಲಿ ನಮ್ಮ ನಿಮ್ಮನ್ನೇಲ್ಲರನ್ನೂ ಸೇರಿಸಿ ಬಹುತೇಕ ಎಲ್ಲರಿಗೂ ಬಾಧಿಸಿದೆ, ಬಾಧಿಸುತ್ತಿದೆ…!!  ಇದು ಒಪ್ಪಿಕೊಳ್ಳಲೇ ಬೇಕು..! ಆದರೆ… ಇಲ್ಲಿ ಅದು ಕೇವಲ ಮೊದಲಿಂದಲೂ ನಮ್ಮನ್ನೆಲ್ಲ ಕಾಣುತ್ತಿದ್ದ ನೆಗಡಿಯ ವೈರಸ್ ಆಗಿದೆಯೇ ಹೊರತು ಪ್ರಾಣ ಹೊತ್ತೊಯ್ಯುವ ಮಾರಿಯಾಗಿಲ್ಲ… ಒಮ್ಮೆ 1989 ರಲ್ಲಿ ಪ್ರಕಟವಾದ ಕೊರೋನ ಕುರಿತ ಲೇಖನವನ್ನು ಗಮನಿಸಿದರೆ ಕೊರೋನಾ ಏನು ಹೇಗೆ ಎನ್ನುವುದು ಸ್ಪಷ್ಟವಾಗುತ್ತದೆ…
       
ಹಾಗಾದರೆ ಮುಂಜಾಗ್ರತಾ ಕ್ರಮ ಅನುಸರಿಸುವುದು  ಬೇಡವೆ…? ನಮ್ಮೆಲ್ಲರ ಮನಸ್ಸಿನಲ್ಲಿ ಗಟ್ಟಿಯಾಗಿ ಕೂತು ಗಡ ಗಡ ನಡುಗಿಸುತ್ತಿರುವ ಈ ರೋಗ ಕಾಡದಿರಬೇಕಾದರೆ ನಾವು ನಮ್ಮ ದೇಹವನ್ನು ಸ್ವಲ್ಪ ನಡುಗಿಸಬೇಕು…ಅರ್ಥಾತ್ ಶರೀರವನ್ನು ಆರೋಗ್ಯಯುತವಾಗಿಟ್ಟುಕೊಳ್ಳ ಬೇಕು. ಜಡ ಹಿಡಿದ ದೇಹ ಸುಲಭದಲ್ಲಿ ರೊಗಕ್ಕೆ ತುತ್ತಾಗುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಕಳೆದುಕೊಂಡಿರುತ್ತದೆ. ಹಾಗಾದರೆ ಆರೋಗ್ಯವಾಗಿರಲು ನಾವೇನು ಮಾಡಬೇಕು..?  ಇದು ಬಹಳ ಸರಳವಾಗಿದೆ.  ಆಗಾಗ ಬಿಸಿ ನೀರನ್ನು ಕುಡಿಯುತ್ತಿದ್ದರೆ ಕೊರೊನ ಬಾಧೆ ಕಡಿಮೆಯಾಗುತ್ತದೆ.  ಯಾವುದೇ ರೋಗ ಅಷ್ಟು ಸುಲಭವಾಗಿ ಇನ್ನೊಂದು ದೇಹ ಸೇರಲು ಧೈರ್ಯ ಮಾಡುವುದಿಲ್ಲ. ದೇಹವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಇನ್ನೊಂದು. ಇನ್ನು ನಾವೆಲ್ಲರೂ ಸೇರಿ ಮೂಲೆ ಗುಂಪು ಮಾಡಿರುವ ಹಳ್ಳಿ ಮದ್ದುಗಳ ಬಗೆಗಿನ ತಿಳುವಳಿಕೆ. ಬೆಳ್ಳುಳ್ಳಿ, ಶುಂಠಿ, ನೀರುಳ್ಳಿ, ಕಾಳುಮೆಣಸು… ಇವುಗಳೆಲ್ಲದರ ಶಕ್ತಿಯ ಅರಿವು ನಮಗಾದರೆ ಈ ಟಿ.ವಿ  ಚಾನೆಲ್ ಗಳಿಂದ ರೋಗ ಹರಡುವುದನ್ನು ಬಹುತೇಕ ತಪ್ಪಿಸಬಹುದು. ಈ ರೋಗ ನಮ್ಮ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾರಣಕ್ಕೆ ಯಾವುದಾದರೂ ಎರಡು ಉಸಿರಾಟಕ್ಕೆ ಸಂಬಂಧಿಸಿದ ಯೋಗದ ಅಭ್ಯಾಸ ಇಟ್ಟುಕೊಂಡರಾಯಿತು. ಇದು ಎಲ್ಲಾ ರೋಗದ ಮೂಲ ಮನಸ್ಸಿನ  ಆರೋಗ್ಯಕ್ಕೂ ಉತ್ತಮವಾದುದು.
   
ಜೀವನವನ್ನು ಆರೋಗ್ಯಪೂರ್ಣವಾಗಿ ಇಟ್ಟುಕೊಳ್ಳೋಣ. ದೇಶದ ಮಾರಿಯನ್ನು ಓಡಿಸೋಣ.  ಭೀತಿಯಿಂದ ಗೆಲ್ಲಲಾಗದು…  ಸರಿಯಾದ ರೀತಿಯಿಂದ ಗೆಲ್ಲೋಣ… ವೈರಲ್ ಗಳನ್ನು ವೈರಲ್ ಮಾಡಿ ಅದರ ದಾಸರಾಗುತ್ತಾ ಸಾಗುವ ನಮ್ಮ ಮೊಡರ್ನ್ ಅಭ್ಯಾಸಗಳಲ್ಲಿ ಇನ್ನಾದರೂ ಬದಲಾವಣೆಗಾಗಿ ಶ್ರಮಿಸೋಣ… ಇದು ನಮಗಾಗಿ ನಮ್ಮ ಜಾಗೃತಿಯಾಗಲಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.