ಬೆಳ್ತಂಗಡಿಯ ಕರಾಯದ ವೃದ್ಧನಿಗೆ ಕೊರೊನಾ ಸೋಂಕು ತಗುಲಿಲ್ಲ

  • ತಪಾಸಣಾ ವರದಿಯಿಂದ ದೃಢ ಎಂದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿದ್ಯಾವತಿ ಸ್ಪಷ್ಟನೆ

ಬೆಳ್ತಂಗಡಿ: ಶಂಕಿತ ಕೊರೊನಾವೆಂದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಕರಾಯದ ವೃದ್ಧರೊಬ್ಬರಿಗೆ ಕೊರೊನಾ ಪರೀಕ್ಷೆ ನಡೆಸಿದಾಗ ಸೋಂಕು ತಗುಲಿಲ್ಲ (ನೆಗೆಟಿವ್) ಎಂಬುದು ವರದಿಗಳಿಂದ ದೃಢಪಟ್ಟಿದೆ. ತಣ್ಣೀರುಪಂಥ ಗ್ರಾಮ ಪಂಚಾಯತ್ ವ್ಯಾಪ್ತಿಯ ವೃದ್ಧ ಉಮ್ರಾ ಯಾತ್ರೆ ಮುಗಿಸಿ ಮೆಕ್ಕಾದಿಂದ ಸ್ವದೇಶಕ್ಕೆ ಹಿಂತಿರುಗಿದ್ದರು ಶೀತ, ನೆಗಡಿ, ಕೆಮ್ಮುವಿನಿಂದ ಬಳಲುತ್ತಿದ್ದ ಅವರನ್ನು ಆರೋಗ್ಯ ಇಲಾಖೆಯ ನಿರ್ದೇಶನದ ಅನ್ವಯ ಹೆಚ್ಚಿನ ನಿಗಾವಿರಿಸಲು ಬೆಳ್ತಂಗಡಿ ಸಮುದಾಯ ಆರೋಗ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

‘ಶಂಕಿತ ಕೊರೊನಾವೆಂದು ತಿಳಿದು ಅವರನ್ನು ಐಸೋಲೆಷನ್ ವಾರ್ಡ್‌ನಲ್ಲಿ ಹೆಚ್ಚಿನ ನಿಗಾವಿಟ್ಟು ಪರೀಕ್ಷೆಗಾಗಿ ಗಂಟಲಿನ ಸ್ರಾವವನ್ನು ತಪಾಸಣೆಗೆ ಕಳುಹಿಸಲಾಗಿತ್ತು. ಈಗ ಅದರ ವರದಿಯಲ್ಲಿ ಸೋಂಕು ತಗುಲಿಲ್ಲ(ನೆಗೆಟಿವ್) ಎಂದು ಬಂದಿದೆ. ವೃದ್ಧರನ್ನು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಿ ಇನ್ನೆರೆಡು ದಿನಗಳ ಕಾಲ ಅವರಿಗೆ ಚಿಕಿತ್ಸೆ ಕೊಡಲಾಗುವುದು’ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿದ್ಯಾವತಿ ತಿಳಿಸಿದ್ದಾರೆ.

ಶಂಕಿತ ಅಳದಂಗಡಿಯ ಇಬ್ಬರು ದಾಖಲು: ಓಮನ್‌ನಿಂದ ಸ್ವದೇಶಕ್ಕೆ ಮರಳಿದ ಅಳದಂಗಡಿ ಗ್ರಾಮದ ಇಬ್ಬರಲ್ಲಿ ಶಂಕಿತ ಕೊರೊನಾ ಲಕ್ಷಣಗಳು ಕಂಡು ಬಂದಿರುವುದರಿಂದ ಪರೀಕ್ಷೆ ನಡೆಸಲು ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದನ್ನು ವೈದ್ಯಾಧಿಕಾರಿ ಡಾ.ವಿದ್ಯಾವತಿ ಖಚಿತ ಪಡಿಸಿದ್ದಾರೆ. ಆ ಇಬ್ಬರನ್ನು ಕೂಡ ಹೆಚ್ಚಿನ ನಿಗಾವಹಿಸಿ ಐಸೋಲೇಷನ್ ವಾರ್ಡ್‌ನಲ್ಲಿಟ್ಟು ಪ್ರವಾಸ ಮಾಡಿದ ಮಾಹಿತಿಯನ್ನು ಕಲೆ ಹಾಕಲಾಗಿದ್ದು ಅವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.