ಶಂಕಿತ ಕೊರೋನಾ ಭೀತಿ: ಮೆಕ್ಕಾದಿಂದ ತೆರಳಿದ್ದ ವೃದ್ಧ ಆಸ್ಪತ್ರೆಗೆ ದಾಖಲು

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಉಮ್ರಾ ಯಾತ್ರೆ ಮುಗಿಸಿ ಮೆಕ್ಕಾದಿಂದ ಮರಳಿದ್ದ ತಣ್ಣೀರುಪಂಥ ಗ್ರಾ.ಪಂ. ವ್ಯಾಪ್ತಿಯ ವೃದ್ಧರೋರ್ವರು ಅನಾರೋಗ್ಯಕ್ಕೆ ತುತ್ತಾಗಿದ್ದು, ಶಂಕಿತ ಕೊರೋನಾ ಭೀತಿಯಿಂದ ಆರೋಗ್ಯ ಇಲಾಖೆ ಅವರನ್ನು ವಿಶೇಷ ನಿಗಾವಿರಿಸಿ ತಪಾಸಣೆಗೆ ಒಳಪಡಿಸಿದ ಬಗ್ಗೆ ವರದಿಯಾಗಿದೆ.  ಬೆಳ್ತಂಗಡಿ ತಾಲೂಕು ತಣ್ಣೀರುಪಂಥ ಗ್ರಾ.ಪಂ. ವ್ಯಾಪ್ತಿಯ ನಿವಾಸಿಯಾಗಿರುವ 75ರ ಹರೆಯದ ಈ ವೃದ್ದ ತನ್ನ ಮಗಳು ಅಳಿಯನೊಂದಿಗೆ ಕೆಲ ದಿನಗಳ ಹಿಂದೆಯಷ್ಟೇ ಉಮ್ರಾ ಯಾತ್ರೆ ಮುಗಿಸಿ ಸ್ವದೇಶಕ್ಕೆ ಹಿಂತಿರುಗಿದ್ದರು. 15 ದಿನಗಳ ಕಾಲ ವಿದೇಶದಲ್ಲಿದ್ದ ಅವರು ಹತ್ತು ದಿನಗಳ ಹಿಂದೆ ಸ್ವದೇಶಕ್ಕೆ ಹಿಂತಿರುಗಿದ್ದರು. ಆದರೆ ಕೆಲ ದಿನಗಳಿಂದ ಶೀತ ಕೆಮ್ಮು ನೆಗಡಿಯಿಂದ ಬಳಲುತ್ತಿರುವ ಇವರನ್ನು ಆರೋಗ್ಯ ಇಲಾಖೆಯ ನಿರ್ದೇಶನದನ್ವಯ ಆಶಾ ಕಾರ್ಯಕರ್ತೆಯರು ಹೆಚ್ಚಿನ ನಿಗಾವಿರಿಸಲು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ. ಅವರನ್ನು ಶಂಕಿತ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪರೀಕ್ಷಾ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎನ್ನಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.