ಪುತ್ತೂರು ಕಾವು ಲಯನ್ಸ್ ಕ್ಲಬ್‌ಗೆ ಪ್ರಾಂತೀಯ ಅಧ್ಯಕ್ಷರ ಅಧಿಕೃತ ಭೇಟಿ, ಹಾಜಬ್ಬರಿಗೆ ಸನ್ಮಾನ, ವಿವಿಧ ಕಾಮಗಾರಿಗಳ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಕಾವು ಲಯನ್ಸ್ ಕ್ಲಬ್‌ಗೆ ಪ್ರಾಂತೀಯ ಅಧ್ಯಕ್ಷ ಕೃಷ್ಣಪ್ರಶಾಂತ್ ಅಧಿಕೃತ ಭೇಟಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಜಬ್ಬರಿಗೆ ಸನ್ಮಾನ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭ ಮಾ.13 ರಂದು ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಜಬ್ಬರವರನ್ನು ಲಯನ್ಸ್ ಪ್ರಾಂತ 7 ರ ಅಧ್ಯಕ್ಷ ಕೃಷ್ಣ ಪ್ರಶಾಂತ್‌ರವರು ಸನ್ಮಾನಿಸಿ ಮಾತನಾಡಿ, ಪುತ್ತೂರು ಕಾವು ಲಯನ್ಸ್ ಕ್ಲಬ್ ಉದ್ಘಾಟನೆಗೊಂಡ 9 ತಿಂಗಳಲ್ಲಿ ಸಾಮಾಜಿಕ, ಶೈಕ್ಷಣಿಕವಾಗಿ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ೪ ಜಿಲ್ಲೆಗಳನ್ನು ಒಳಗೊಂಡಂತೆ ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ 317 ಡಿ ಇದರಲ್ಲಿ ಈಗಾಗಲೇ ಟಾಪ್ 1೦ ಸ್ಥಾನದಲ್ಲಿ ಪುತ್ತೂರು ಕಾವು ಲಯನ್ಸ್ ಕ್ಲಬ್ ೪೦ ಲಕ್ಷಕ್ಕೂ ಮಿಗಿಲಾದ ಕಾಮಗಾರಿಗಳನ್ನು ನೀಡುವ ಮೂಲಕ 6 ಬಾರಿ ಟಾಪ್ ಸ್ಥಾನಗಳನ್ನು ಗಿಟ್ಟಿಸಿಕೊಂಡಿದೆ ಎಂದರು. ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹಾಜಬ್ಬರನ್ನು ಸನ್ಮಾನಿಸುವುದು ಕ್ಲಬ್‌ಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿ ಶುಭ ಹಾರೈಸಿದರು.

ಸನ್ಮಾನ ಸ್ವೀಕರಿಸಿದ ಪದ್ಮಶ್ರೀ ಹಾಜಬ್ಬರವರು ಮಾತನಾಡಿ, ನನಗೆ ಇಂಟರ್‌ನ್ಯಾಷನಲ್ ಸಂಸ್ಥೆಯೊಂದು ಮಾಡಿರುವ ಸನ್ಮಾನ ಖುಷಿ ತಂದಿದೆ. ನನ್ನ ಸಾಧನೆಗೆ ಹಿಂದಿನಿಂದಲೂ ಲಯನ್ಸ್ ಕ್ಲಬ್ ಪಾತ್ರ ಬಹಳಷ್ಟು ಇದೆ ಎಂದು ಹೇಳಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿಯವರು ಹಾಜಬ್ಬರವರ ಸನ್ಮಾನ ಪತ್ರ ಓದಿದರು. ಕಾವು ತೋಟದಮೂಲೆ ರಸ್ತೆ ಅಭಿವೃದ್ಧಿಗೆ ೧.೫ ಲಕ್ಷ ರೂ.ದಾನ ನೀಡಿದ ಉಮ್ಮರ್ ಕಾವು, ಪ್ರಶಸ್ತಿ ಪುರಸ್ಕೃತ ಭಾಸ್ಕರ ಬಲ್ಯಾಯ ಮದ್ಲರವರುಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಪುತ್ತೂರು ಕಾವು ಲಯನ್ಸ್ ಕ್ಲಬ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು.

ಕ್ಲಬ್‌ನಿಂದ ವಿವಿಧ ಸೇವಾ ಚಟುವಟಿಕೆ ಉದ್ಘಾಟನೆ: 1.5 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ತೋಟದಮೂಲೆ ರಸ್ತೆಯ ಚರಂಡಿಯನ್ನು ಉದ್ಘಾಟಿಸಲಾಯಿತು. ತೋಟದಮೂಲೆ ರಸ್ತೆ ಕಾಮಗಾರಿಗೆ ಖಾಸಗಿ ದಾನಿ ಉಮ್ಮರ್‌ರವರಿಂದ 1.5 ಲಕ್ಷ ರೂ.ನೀಡಿದ್ದು ಇದರ ಶಿಲಾನ್ಯಾಸ, ಕಾವು ಸರಕಾರಿ ಶಾಲೆಯ ರಸ್ತೆ ಬದಿಯಲ್ಲಿ ರೂ.3೦ ಸಾವಿರ ವೆಚ್ಚದಲ್ಲಿ ನಿರ್ಮಾಣಗೊಂಡ ಹೂ ತೋಟ ಉದ್ಘಾಟನೆ, ಕಾವು ಸರಕಾರಿ ಶಾಲೆಗೆ ರೂ.೬೫ ಸಾವಿರ ವೆಚ್ಚದ ಪೀಠೋಪಕರಣದ ಹಸ್ತಾಂತರ, ಕ್ರೀಡಾ ಸಾಮಾಗ್ರಿಗೆ ರೂ.50ಸಾವಿರದ ಚೆಕ್ ವಿತರಣೆ, ೧೫ ಸಾವಿರ ವೆಚ್ಚದಲ್ಲಿ ತೋಟದಮೂಲೆ ಅಮ್ಮನವರ ದೇವಸ್ಥಾನದ ಭೋಜನಶಾಲೆಯ ಸಾರಣೆ ಕೆಲಸ ಆಗಿದ್ದು ಇದರ ಉದ್ಘಾಟನೆ ನಡೆಯಿತು.

ವೇದಿಕೆಯಲ್ಲಿ ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಆನಂದ ರೈ ದೇವಿನಗರ, ಸುಳ್ಯ ವಲಯಾಧ್ಯಕ್ಷ ರೇಣುಕಾ ಜಾಕೆ, ಎಕ್ಸ್‌ಟೆನ್ಯನ್ ಪರ್ಸನ್ ಶಶಿಕಲಾ ಚೌಟ, ಕೋಶಾಧಿಕಾರಿ ಕೃಷ್ಣಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು. ಪುತ್ತೂರು ಕಾವು ಲಯನ್ಸ್ ಕ್ಲಬ್‌ಗೆ ಹೊಸತಾಗಿ ಐ.ಸಿ ಕೈಲಾಸ್ ಕೆದಂಬಾಡಿ ಮತ್ತು ಅರಿಯಡ್ಕ ಗ್ರಾಪಂ ನಿವೃತ್ತ ಕಾರ್ಯದರ್ಶಿ ಕೃಷ್ಣರಾಜ್‌ರವರುಗಳನ್ನು ಸೇರ್ಪಡೆಗೊಳಿಸಿಕೊಳ್ಳಲಾಯಿತು. ಕಾರ್ಯದರ್ಶಿ ರಮೇಶ್ ರೈ ಸಾಂತ್ಯ ವರದಿ ವಾಚಿಸಿದರು. ಲಯನ್ಸ್ ಉಪಾಧ್ಯಕ್ಷ ಶರತ್ ಕುಮಾರ್ ರೈ ಕಾವು, ಮಹೇಶ್ ರೈ ಅಂಕೊತ್ತಿಮಾರ್, ದಿವ್ಯನಾಥ ಶೆಟ್ಟಿ ಕಾವು,ಪಾವನ್‌ರಾಮ್ ಉಪಸ್ಥಿತರಿದ್ದರು. ಕೃಷ್ಣ ಪ್ರಶಾಂತ್‌ರವರ ಹುಟ್ಟು ಹಬ್ಬವನ್ನು ಇದೇ ಸಂದರ್ಭದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದ ಕೊನೆಗೆ ಮಾಜಿ ಸಚಿವ ರಮಾನಾಥ ರೈ ಆಗಮಿಸಿ ಶುಭ ಹಾರೈಸಿದರು.

 

9 ತಿಂಗಳಲ್ಲಿ 4೦ ಲಕ್ಷ ವೆಚ್ಚದ ಕಾಮಗಾರಿ ಅರ್ಪಣೆ
ಪುತ್ತೂರು ಕಾವು ಲಯನ್ಸ್ ಕ್ಲಬ್ ಆರಂಭವಾಗಿ 9 ತಿಂಗಳು ಕಳೆದಿದೆ. ಈಗಾಗಲೇ ಕ್ಲಬ್‌ನಿಂದ ಸುಮಾರು ೪೦ ಕ್ಕೂ ಅಧಿಕ ವೆಚ್ಚದ ವಿವಿಧ ಕಾಮಗಾರಿಗಳನ್ನು ಸಮಾಜಕ್ಕೆ ಅರ್ಪಣೆ ಮಾಡಲಾಗಿದೆ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ವಿವಿಧ ಸೇವಾ ಚಟುವಟಿಕೆಗಳನ್ನು ಮಾಡಲಾಗಿದೆ. ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ 317 ಡಿ ಇದರಲ್ಲಿ ಈಗಾಗಲೇ ಟಾಪ್ 10 ಸ್ಥಾನದಲ್ಲಿ ಪುತ್ತೂರು ಕಾವು ಲಯನ್ಸ್ ಕ್ಲಬ್ ಸತತ 6 ಬಾರಿ ಟಾಪ್ ಸ್ಥಾನಗಳನ್ನು ಗಿಟ್ಟಿಸಿಕೊಂಡಿದೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಅಕ್ಷರ ಸಂತ ಹಾಜಬ್ಬರಂತಹ ಶ್ರೇಷ್ಠ ಸಾಧನೆ ಮಾಡಿದ ವ್ಯಕ್ತಿಯನ್ನು ಗುರುತಿಸಿ ಸನ್ಮಾನಿಸುವುದು ಕ್ಲಬ್‌ಗೆ ಹೆಮ್ಮೆಯ ಸಂಗತಿಯಾಗಿದೆ. ಕ್ಲಬ್‌ನ ಸೇವಾ ಚಟುವಟಿಕೆಗಳಲ್ಲಿ ಎಲ್ಲರನ್ನು ಒಟ್ಟಿಗೆ ಸೇರಿಸಿಕೊಂಡು ಮಾಡುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ಇದರಲ್ಲಿ ಯಶಸ್ವಿ ಕಂಡಿದ್ದೇನೆ. ಈ ಮೂಲಕ ಟಾಪ್ 10 ರಲ್ಲಿ ಹಲವು ಬಾರಿ ಕ್ಲಬ್ ಉನ್ನತ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಕೇವಲ 9 ತಿಂಗಳಲ್ಲಿ ಕ್ಲಬ್‌ನಿಂದ ಸುಮಾರು 40 ಲಕ್ಷಕ್ಕೂ ಅಧಿಕ ವೆಚ್ಚದ ಕಾಮಗಾರಿಗಳನ್ನು ಸಮಾಜಕ್ಕೆ ಅರ್ಪಿಸಲಾಗಿದೆ. ಕ್ಲಬ್‌ನೊಂದಿಗೆ ಸಹಕರಿಸುತ್ತಿರುವ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಮುಂದೆಯೂ ಸಹಕಾರ ಬಯಸುತ್ತೇನೆಕಾವು ಹೇಮನಾಥ ಶೆಟ್ಟಿ, ಅಧ್ಯಕ್ಷರು ಪುತ್ತೂರು ಕಾವು ಲಯನ್ಸ್ ಕ್ಲಬ್

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.