Breaking News

ಒಳಮೊಗ್ರು ಗ್ರಾಪಂ ವ್ಯಾಪ್ತಿಯಲ್ಲಿ 1 ಕೋಟಿ ರೂ.ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಗುದ್ದಲಿಪೂಜೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಒಳಮೊಗ್ರು ಗ್ರಾಪಂ ವ್ಯಾಪ್ತಿಯಲ್ಲಿ ಶಾಸಕರ ಮುತುವರ್ಜಿಯಿಂದ ಯೋಜಿಸಲಾದ ಅಂದಾಜು ಸುಮಾರು ರೂ 1.00 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೊಡು, ಬಿ.ಜೆ.ಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ರಾಧಾಕೃಷ್ಣ ಆಳ್ವ ಸಾಜ,ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಬಿ.ಜೆ.ಪಿ ಗ್ರಾಮ ಸಮಿತಿ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಪ್ರಧಾನ ಕಾರ್ಯದರ್ಶಿ ಸುಧಾಕರ್ ರೈ ಕಲ್ಲಡ್ಕ, ಕುಂಬ್ರ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ,ನಿರ್ದೇಶಕರಾದ ಸಂತೋಷ್ ರೈ ಕೈಕಾರ, ವರಿಜಾಕ್ಷಿ.ಪಿ.ಶೆಟ್ಟಿ, ತಾ.ಪಂ ಸದಸ್ಯ ಹರೀಶ್ ಬಿಜತ್ರೆ, ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷ ಯತಿರಾಜ್ ರೈ ನೀರ್ಪಾಡಿ, ಪಂ ಸದಸ್ಯರಾದ ಮಹೇಶ್ ರೈ ಕೇರಿ, ಉಷಾ ನಾರಾಯಣ,ತ್ರೀವೇಣಿ ಪಳ್ಳತ್ತಾರು, ಚಂದ್ರಕಲಾ, ಭಾಗೀರಥಿ, ವಸಂತಿ.ಆರ್.ಶೆಟ್ಟಿ, ಬಿ.ಜೆ.ಪಿ ಬೂತ್ ಸಮಿತಿ ಅಧ್ಯಕ್ಷ ಪುರಂದರ ಶೆಟ್ಟಿ ಮುಡಾಲ, ಮಾದವ ರೈ ಕುಂಬ್ರ,ಪ್ರವೀಣ್ ಪಳ್ಳತ್ತಾರು, ರಾಧಾಕೃಷ್ಣ ಶೆಟ್ಟಿ ಕಲ್ಲಡ್ಕ, ಸಂತೋಷ್ ರೈ ನಾಯಿಲ, ರಾಕೇಶ್ ರೈ ಪರ್ಪುಂಜ,ಬಿ.ಜೆ.ಪಿ ಬೂತ್ ಸಮಿತಿ ಕಾರ್ಯದರ್ಶಿಗಳಾದ ರಾಜೇಶ್ ಪೂಜಾರಿ ಪಿಡಪಟ್ಲ, ಶ್ರೀನಿವಾಸ ಮುಡಾಲ, ಜಯರಾಮ ಆಚಾರ್ಯ, ಶುಶಾಂತ್ ಅಜ್ಜಿಕಲ್ಲು ಹಾಗೂ ಪಕ್ಷದ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಒಳಮೊಗ್ರು ಗ್ರಾಮದ ಅಜ್ಜಿಕಲ್ಲು – ಮೊಡಪ್ಪಾಡಿ ರಸ್ತೆ, ಕೈಕಾರ – ಎರ್ಮೆಟ್ಟಿ ರಸ್ತೆ, ಕೈಕಾರ-ಬಾಣಬೆಟ್ಟು ರಸ್ತೆ, ಪರ್ಪುಂಜ ಜನತಾ ಕಾಲೋನಿ ರಸ್ತೆ , ಕುಟ್ಟಿನೋಪಿನಡ್ಕ-ನೀರ್ಪಾಡಿ ರಸ್ತೆ, ಮುಡಾಲ-ಮಾಯಿಲಕೊಚ್ಚಿ ರಸ್ತೆ, ಮುಡಾಲ – ಮುಡಾಲ ಮೂಲೆ ರಸ್ತೆ , ಮರ್ಕಜ್ ಮಹಿಳಾ ಕಾಲೇಜು ರಸ್ತೆ ,ಕುಂಬ್ರ – ಉರ್ವ ರಸ್ತೆ , ಕುಂಬ್ರ – ಬಡಕ್ಕೋಡಿ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.