Breaking News

ಕೊರೊನಾ ವೈರಸ್ ಹಿನ್ನೆಲೆ-ವಿದೇಶದಿಂದ ಬಂದವರ ಮಾಹಿತಿ ಕೊಡದೆ ಕರ್ತವ್ಯಕ್ಕೆ ಅಡ್ಡಿ: ಪುತ್ತೂರು ಏಳ್ಮುಡಿಯಲ್ಲಿ ನಡೆದ ಘಟನೆ-ವೈದ್ಯರಿಂದ ಸಹಾಯಕ ಕಮೀಷನರ್‌ಗೆ ದೂರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿದೇಶದಿಂದ ಸ್ವದೇಶಕ್ಕೆ ಮರಳಿದವರ ಪಟ್ಟಿ ಮಾಡುವ ಕುರಿತು ಸರಕಾರದ ಆದೇಶದಂತೆ ಪುತ್ತೂರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವೈದ್ಯರು ಮತ್ತು ಆಶಾ ಕಾರ್ಯಕರ್ತರಿಂದ ಮನೆ ಮನೆ ಭೇಟಿ ವೇಳೆ ಏಳ್ಮುಡಿಯಲ್ಲಿ ಮನೆ ಮಂದಿ ಬಾಗಿಲು ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಘಟನೆ ಬೆಳಕಿಗೆ ಬಂದಿದೆ.

ಏಳ್ಮುಡಿಯಲ್ಲಿರುವ ವ್ಯಕ್ತಿಯೊಬ್ಬರು ವಿದೇಶದಲ್ಲಿ ಇದ್ದು ಅವರು 14 ದಿನಗಳ ಹಿಂದೆ ಸ್ವದೇಶಕ್ಕೆ ಆಗಮಿಸಿದ್ದರು. ಈ ಕುರಿತು ಮಾಹಿತಿ ಇದ್ದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ಮಾ.17ರಂದು ಅವರ ಮನೆಗೆ ಭೇಟಿ ನೀಡಿದ್ದರು. ಆದರೆ ಮನೆಯಲ್ಲಿ ಆ ವ್ಯಕ್ತಿ ಇಲ್ಲದೆ ಅವರು ಮೈಸೂರಿಗೆ ಹೋಗಿರುವುದು ತಿಳಿದಿತ್ತು. ಆದರೆ ಮನೆ ಮಂದಿ ಆ ವ್ಯಕ್ತಿಯ ಮಾಹಿತಿ ನೀಡಲು ನಿರಾಕರಿಸಿದ್ದಲ್ಲದೆ ಮನೆ ಬಾಗಿಲು ಮುಚ್ಚಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ವಿದೇಶದಿಂದ ಬಂದವರಿಂದಲೇ ಕೊರೊನಾ ವೈರಸ್ ಸೋಂಕು ಹರಡುತ್ತಿರುವುದು ದೃಢಪಟ್ಟಿದ್ದರಿಂದ ವಿದೇಶದಿಂದ ಸ್ವದೇಶಕ್ಕೆ ಬಂದವರ ಪಟ್ಟಿ ಮಾಡವ ಕಾರ್ಯದ ಸಂದರ್ಭ ಈ ಘಟನೆ ನಡೆದಿದ್ದರಿಂದ ಆರೋಗ್ಯ ಸಹಾಯಕಿ ಮತ್ತು ಆಶಾ ಕಾರ್ಯಕರ್ತೆಯ ವೈದ್ಯರ ಮೂಲಕ ಸಹಾಯಕ ಕಮೀಷನರ್‌ಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.