ಮಾ.20-22: ಕೊಣಾಲು ಕಡೆಂಬಿಲತ್ತಾಯ ಗುಡ್ಡೆ ದೈವಗಳ ಪ್ರತಿಷ್ಠಾ ಮಹೋತ್ಸವ, ನೇಮೋತ್ಸವ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಕೊಣಾಲು ಗ್ರಾಮದ ಕಡೆಂಬಿಲತ್ತಾಯ ಗುಡ್ಡೆ ಚಕ್ರವರ್ತಿ ಕೊಡಮಣಿತ್ತಾಯಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಕೆಮ್ಮಿಂಜೆ ಬ್ರಹ್ಮಶ್ರೀ ವೇದಮೂರ್ತಿ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ನೇತೃತ್ವದಲ್ಲಿ ೭ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಮತ್ತು ಚಕ್ರವರ್ತಿ ಕೊಡಮಣಿತ್ತಾಯಿ, ದೈವಂಕ್ಲು, ಮೈಸಂತಾಯ, ರುದ್ರಾಂಡಿ, ಕಡೆಂಬಿಲತ್ತಾಯ, ಪಂಜುರ್ಲಿ, ಕಲ್ಕುಡ, ಕಲ್ಲುರ್ಟಿ, ಗುಳಿಗ ದೈವಗಳ ನೇಮೋತ್ಸವ ಮಾ.೨೦ರಿಂದ ೨೨ರ ತನಕ ನಡೆಯಲಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ರೈ ಕೊಣಾಲುಗುತ್ತು, ಕಾರ್ಯದರ್ಶಿ ಪದ್ಮನಾಭ ಗೌಡ ಹೊಸಮನೆ, ಕೋಶಾಧಿಕಾರಿ ಚಂದಪ್ಪ ಗೌಡ ಕಾಯರ್ತಡ್ಕ ಹಾಗೂ ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾ.20ರಂದು ಬೆಳಿಗ್ಗೆ ಕಡೆಂಬಿಲ ನಾಗಬನದಲ್ಲಿ ನಾಗತಂಬಿಲ, ಕಡೆಂಬಿಲತ್ತಾಯಗುಡ್ಡೆಯಲ್ಲಿ ಗಣಪತಿಹೋಮ, ದೈವಗಳಿಗೆ ಕಲಶಾಭಿಷೇಕ, ದೈವಗಳಿಗೆ ತಂಬಿಲ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ತೋರಣ ಮುಹೂರ್ತ, ಗ್ರಾಮಸ್ಥರಿಂದ ದೈವಗಳಿಗೆ ಪ್ರಾರ್ಥನೆ, ನಂತರ ಭಜನೆ ನಡೆಯಲಿದೆ. ಸಂಜೆ ಮಾಪಲ್ತರಮಜಲಿನಿಂದ ಚಕ್ರವರ್ತಿ ಕೊಡಮಣಿತ್ತಾಯಿ, ದೈವಂಕುಲು, ಮೈಸಂತಾಯ, ರುದ್ರಾಂಡಿ ದೈವಗಳ ಭಂಡಾರ ತರುವುದು, ಹೊಸಮನೆಯಿಂದ ಕಡೆಂಬಿಲತ್ತಾಯ, ಪಂಜುರ್ಲಿ ದೈವಗಳ ಭಂಡಾರ ತರುವುದು, ಎಣ್ಣೆತ್ತೋಡಿಯಿಂದ ಶಿರಾಡಿ ದೈವದ ಭಂಡಾರ ತರುವುದು, ಕಾಯರ್ತಡ್ಕದಿಂದ ಕಲ್ಕುಡ, ಕಲ್ಲುರ್ಟಿ, ಗುಳಿಗ ದೈವಗಳ ಭಂಡಾರ ತರುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಅನ್ನಸಂತರ್ಪಣೆ ಬಳಿಕ ನೇಮೋತ್ಸವ ನಡೆಯಲಿದೆ. ಮಾ.೨೨ರಂದು ಮಧ್ಯಾಹ್ನ ಅಮ್ಮನವರ ಪೂಜೆ, ಭೈರವ ದೈವಕ್ಕೆ ಹರಕೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.