5 ವರ್ಷಗಳ ಹಿಂದಿನ ಅಪಘಾತ ಪ್ರಕರಣ ಆರೋಪಿ ಬಸ್ ಚಾಲಕ ದೋಷಮುಕ್ತ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸುಮಾರು 5 ವರ್ಷಗಳ ಹಿಂದೆ ಕಬಕ ಗ್ರಾಮದ ನೆಹರುನಗರ ಎಂಬಲ್ಲಿ ನಡೆದಿದ್ದ ಅಪಘಾತ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಟೂರಿಸ್ಟ್ ಬಸ್ಸು ಚಾಲಕ ರಾಜ ಪಿ.ರವರನ್ನು ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ಜಡ್ಜ್ ಮತ್ತು ಎ.ಸಿ.ಜೆ.ಎಮ್. ನ್ಯಾಯಾಲಯವು ನಿರಪರಾಧಿಯೆಂದು ಬಿಡುಗಡೆಗೊಳಿಸಿದೆ.

ದಿನಾಂಕ 18-01-2015ರಂದು ರಾತ್ರಿ ನೆಹರುನಗರದಲ್ಲಿ ಟಿ ಎನ್-39-ಬಿ ಹೆಚ್-5449 ನಂಬ್ರದ ಟೂರಿಸ್ಟ್ ಬಸ್ಸು ಹಾಗೂ ಪುತ್ತೂರು ಕಡೆಯಿಂದ ಮಾಣಿ ಕಡೆಗೆ ಗೋಪಾಲ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಕಾರು ಚಾಲಕ ಗೋಪಾಲರವರ ತಲೆಗೆ ತೀವ್ರ ತರಹದ ಗಾಯಗೊಂಡು ಮೃತಪಟ್ಟಿದ್ದರು. ಅಲ್ಲದೇ ಕಾರಿನಲ್ಲಿದ್ದ ಜಯಂತ ಮತ್ತು ಯೋಗೀಶ್‌ರವರು ಗಾಯಗೊಂಡಿದ್ದರು. ಬಸ್ ಚಾಲಕ ರಾಜ ಅವರ ನಿರ್ಲಕ್ಷ್ಯದಿಂದಲೇ ಈ ಅಪಘಾತ ಸಂಭವಿಸಿದೆ ಎಂಬಿತ್ಯಾದಿ ಅರೋಪವನ್ನು ಮಾಡಿ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ರಾಜ ಪಿ.ರವರನ್ನು ಆರೋಪಿಯೆಂದು ಪರಿಗಣಿಸಿ ಪೊಲೀಸರು ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದ್ದರು.

ನ್ಯಾಯಾಲಯವು ಈ ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡು ಸುಮಾರು ೮ ಸಾಕ್ಷಿಗಳನ್ನು ತನಿಖೆ ನಡೆಸಿ ಪ್ರಾಸಿಕ್ಯುಷನ್ ಈ ಪ್ರಕರಣದಲ್ಲಿ ಆರೋಪಿ ರಾಜ ಪಿ. ತಪ್ಪಿನಿಂದಲೇ ಅಪಘಾತ ಆಗಿದೆ ಎಂದು ಸಂಶಯಾತೀತವಾಗಿ ಸಾಬೀತುಪಡಿಸಲು ವಿಫಲಗೊಂಡಿದೆ ಎಂದು ತೀರ್ಮಾನಿಸಿ, ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ಜಡ್ಜ್ ಮತ್ತು ಎ.ಸಿ.ಜೆ.ಎಮ್. ನ್ಯಾಯಾಲಯದ ನ್ಯಾಯಾಧೀಶರಾದ ಮಂಜುನಾಥರವರು ಆರೋಪಿಯನ್ನು ನಿರಪರಾಧಿ ಎಂದು ಆದೇಶಿಸಿರುತ್ತಾರೆ.
ಆರೋಪಿಯ ಪರ ವಕೀಲರಾದ ಮಹೇಶ್ ಕಜೆಯವರು ವಾದಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.