Breaking News

ಕೊರೋನಾ ಸೋಂಕಿನ ಮುನ್ನೆಚ್ಚರಿಕೆ ಕ್ರಮ: ಮಾರ್ಚ್ ತಿಂಗಳಲ್ಲಿ ನಡೆಯುವ ಲೋಕಾಯುಕ್ತ ಕುಂದುಕೊರತೆ ಸಭೆ ರದ್ದು

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಲೋಕಾಯುಕ್ತ ಸಾರ್ವಜನಿಕ ಕುಂದುಕೊರತೆಗಳ ಬಗ್ಗೆ ಮಾರ್ಚ್ ತಿಂಗಳಲ್ಲಿ ನಡೆಯಬೇಕಾಗಿದ್ದ ಅಹವಾಲು ಕಾರ್ಯಕ್ರಮವನ್ನು ಸಾಂಕ್ರಾಮಿಕ ಖಾಯಿಲೆಯಾದ ಕೋರೊನಾ ತಡೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ರದ್ದು ಪಡಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಕಚೇರಿಯಿಂದ ಅಧೀಕೃತ ಪ್ರಕಟಣೆ ಹೊರಡಿಸಿದೆ.

ಲೋಕಾಯುಕ್ತ ಮಂಗಳೂರು ವಿಭಾಗದಿಂದ ಮಾ.23, 24, 26, 27 ಮತ್ತು 31ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಅಹವಾಲು ಕಾರ್ಯಕ್ರಮ ನಡೆಸಲು ಸೂಚಿಸಲಾಗಿತ್ತು. ಆದರೆ ಇದೀಗ ಕೊರೊನಾ ವೈರಸ್ ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಯಕ್ರಮ ರದ್ದುಪಡಿಸಲಾಗಿದೆ. ಸಾರ್ವಜನಿಕರ ಕುಂದುಕೊರತೆಗಳಿದ್ದಲ್ಲಿ ಲೋಕಾಯುಕ್ತ ಅಧಿಕಾರಿ ಅಥವಾ ಸಿಬ್ಬಂದಿಗಳ ಮೊಬೈಲ್ ಸಂಖ್ಯೆಗೆ ಅಥವಾ ಕಛೇರಿ ದೂರವಾಣಿಗೆ ಸಂಪಕಿಸುವಂತೆ ಲೋಕಾಯುಕ್ತ ಇಲಾಖೆ ಪ್ರಕಟಣೆ ತಿಳಿಸಿದೆ.

ಸಂಪರ್ಕಿಸಬೇಕಾದ ದೂರವಾಣಿ, ಮೊಬೈಲ್ ಸಂಖ್ಯೆಗಳು:
ದ.ಕ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಸಂಬಂಧಿಸಿ ಪ್ರಭಾರ ಪೊಲೀಸ್ ಅಧೀಕ್ಷಕ ಭಾಸ್ಕರ ಒಕ್ಕಲಿಗ ಮೊ: 9945900778 ಅಥವಾ ಕಚೇರಿ ದೂರವಾಣಿ: 0824-2429197, ಸುಳ್ಯ, ಪುತ್ತೂರು ಹಾಗೂ ಕಡಬಕ್ಕೆ ಸಂಬಂಧಿಸಿ ಪೊಲೀಸ್ ಉಪಾಧೀಕ್ಷಕ ಎಸ್.ವಿಜಯಪ್ರಸಾದ್ ಮೊ: 8861688100, 9448530051, ಹೆಡ್‌ಕಾನ್‌ಸ್ಟೇಬಲ್ ಶಶಿಧರ್ ಮೊ: 9480056538, ಬೆಳ್ತಂಗಡಿ ಮತ್ತು ಬಂಟ್ವಾಳಕ್ಕೆ ಪೊಲೀಸ್ ಉಪಾಧೀಕ್ಷಕಿ ಕಲಾವತಿ ಮೊ: 7026994128, ಹೆಡ್‌ಕಾನ್‌ಸ್ಟೇಬಲ್ ಮೊ:9448348829, ಮಂಗಳೂರು ಮತ್ತು ಮೂಡಬಿದ್ರೆಗೆ ಪೊಲೀಸ್ ನಿರೀಕ್ಷಕಿ ಭಾರತಿ ಜಿ ಮೊ: 9449044377, ಹೆಡ್‌ಕಾನ್‌ಸ್ಟೇಬಲ್ ಸುರೇಂದ್ರ ಮೊ: 9449687925 ಅನ್ನು ಸಂಪರ್ಕಿಸಬಹುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.