ನೆಲ್ಯಾಡಿ: ’ನಿಶ್ ಬಿ ಪ್ಲಸ್’ ಬ್ಯೂಟಿ ಪಾರ್ಲರ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1


ನೆಲ್ಯಾಡಿ: ಮುಖ್ಯ ರಸ್ತೆಯ ಎನ್.ಎಸ್.ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ’ನಿಶ್ ಬಿ ಪ್ಲಸ್’ ಬ್ಯೂಟಿ ಪಾರ್ಲರ್ ಮಾ.೧೮ರಂದು ಬೆಳಿಗ್ಗೆ ಶುಭಾರಂಭಗೊಂಡಿತು. ನೆಲ್ಯಾಡಿ ಸೈಂಟ್ ಅಲ್ಫೋನ್ಸಾ ಚರ್ಚ್‌ನ ಧರ್ಮಗುರು ರೆ.ಫಾ.ಆದರ್ಶ ಜೋಸೆಫ್ ಪುದಿಯಡುತ್‌ರವರು ಉದ್ಘಾಟಿಸಿ ಆಶೀರ್ವಚನ ನೀಡಿ, ಹೊಸ ಹೊಸ ಉದ್ಯಮಗಳು ಬಂದಲ್ಲಿ ಪೇಟೆ, ಪಟ್ಟಣದ ಅಭಿವೃದ್ಧಿಯಾಗಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ನೆಲ್ಯಾಡಿ ಪೇಟೆಯಲ್ಲಿ ಅತ್ಯುತ್ತಮ ಸೌಲಭ್ಯಗಳೊಂದಿಗೆ ಆರಂಭಗೊಂಡಿರುವ ಬ್ಯೂಟಿಶಿಯನ್ ಉತ್ತರೋತ್ತರವಾಗಿ ಬೆಳೆಗಲಿ ಎಂದು ಶುಭಹಾರೈಸಿದರು. ನೆಲ್ಯಾಡಿ ಸೈಂಟ್ ಅಲ್ಫೋನ್ಸಾ ಚರ್ಚ್‌ನ ಸಹಾಯಕ ಧರ್ಮಗುರು ರೆ.ಫಾ.ಜೋಸೆಫ್ ಪುದುಪರಂಬಿಲ್, ಬ್ಯೂಟಿಪಾರ್ಲರ್ ಮಾಲಕಿ ನಿಶಾರವರ ತಾಯಿ ಎಲಿಯಮ್ಮ ತಗಡಿಯಲ್ ಮಂಗಳೂರು, ಸೊಸೆ ಅಂಜು ತಗಡಿಯಲ್, ಪ್ರಮುಖರಾದ ಪದ್ಮಾ ಟೈಲರ್ ನೆಲ್ಯಾಡಿ, ನಾರಾಯಣ ಟೈಲರ್ ನೆಲ್ಯಾಡಿ, ಕೇಶವ ಟೈಲರ್ ನೆಲ್ಯಾಡಿ ಸೇರಿದಂತೆ ಹಲವು ಮಂದಿ ಭೇಟಿ ನೀಡಿ ಶುಭಹಾರೈಸಿದರು.

ಅತಿಥಿಗಳನ್ನು ಸ್ವಾಗತಿಸಿ ಬರಮಾಡಿಕೊಂಡ ಮಾಲಕಿ ನಿಶಾರವರು ಮಾತನಾಡಿ, ನಮ್ಮಲ್ಲಿ ಮೆನಿಕ್ಯುರ್, ಪೆಡಿಕ್ಯುರ್, ಹೆಯರ್ ಕಟ್ಟಿಂಗ್, ಕಲರಿಂಗ್, ಸ್ಟೈಟ್ನಿಂಗ್, ಬ್ಲೀಚಿಂಗ್, ಫೇಶಿಯಲ್, ಬ್ರಿಡಲ್ ಮೇಕಪ್, ಮೆಹಂದಿ ಸೌಲಭ್ಯಗಳಿವೆ. ಬ್ಯೂಟಿಶಿಯನ್ ತರಬೇತಿಯೂ ನೀಡಲಾಗುವುದು ಎಂದು ಹೇಳಿ ಸಹಕಾರ ಕೋರಿದರು. ಮಾಲಕರ ಪುತ್ರಿಯರಾದ ಆನ್ಸಿ, ಅನು, ಸಿಬ್ಬಂದಿ ಸರಿತಾಪರಮೇಶ್ವರ ಗೌಡರವರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.