ಕಡಬದ ಗ್ರಾಮೀಣ ಯುವಕರ ಕಿರು ಚಿತ್ರ ‘ಜಂಗಲ್ ಜಾಕಿ’ಯ ಆಡಿಯೋ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1

 

ಕಡಬ: ಇಲ್ಲಿನ ಗ್ರಾಮೀಣ ಯುವಕರ ಪ್ರಯತ್ನದಿಂದ ಜಂಗಲ್ ಜಾಕಿ ಎಂಬ ಕಿರು ಚಿತ್ರವೊಂದು ನಿರ್ಮಾಣವಾಗಿದ್ದು ಅದು ಶೀಘ್ರದಲ್ಲಿ ಬಿಡುಗಡೆಗೊಳ್ಳಲಿದ್ದು ಅದರ ಆಡಿಯೋ ಬಿಡುಗಡೆ ಸಮಾರಂಭ ಮಾ.18ರಂದು ಕಡಬದಲ್ಲಿ ನಡೆಯಿತು.

ಕಡಬ ಸಮೀಪದ ನಾಲೂರು ಶ್ರೀ ಶಂಕರನಾರಾಯಣ ದೇವಾಲಯದಲ್ಲಿ ಆಡಿಯೋ ಬಿಡುಗಡೆ ಮಾಡಲಾಗಿದ್ದು, ದೇವಳದ ಅರ್ಚಕ ಶಶಿರಾಜ್ ಗಿರಿವನ ವಿಶೇಷ ಪ್ರಾರ್ಥನೆ ನಡೆಸಿ ಆಡಿಯೋ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಗಾಯಕರಾದ ಮಹೇಶ್ ನಿಟಿಲಾಪುರ, ದಿನೇಶ್ ಆಚಾರ್ಯ ಕೆ.ಎಸ್. ರಾಜೇಶ್ ಕೋಲ್ಪೆ, ಸಂಗೀತ ನೀಡಿದ ಶಶಿಗಿರಿವನ ನಾಲೂರು, ಸಾಹಿತ್ಯ ನೀಡಿದ ಉಮೇಶ್ ಬಂಗೇರ, ಕೌಶಿಕ್ ದೇವಾಡಿಗ ಗಾಣದಕೊಟ್ಟಿಗೆ, ಕ್ಯಾಮರಾಮೆನ್ ಉದಯ ಆಚಾರ್ಯ ಬಲ್ಯ,ಕಲಾವಿದರಾದ ಚಂದ್ರಶೇಖರ ನಾಯ್ಕ್, ಅಶ್ವತ್ ಕಡಬ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಸುಮಾರು ಒಂದು ಗಂಟೆಗಳ ಕಿರುಚಿತ್ರ ಇದಾಗಿದೆ, ಸುಮಾರು ಆರು ತಿಂಗಳಿನಲ್ಲಿ ಈ ಚಿತ್ರ ನಿರ್ಮಾಣ ಪೂರ್ಣಗೊಂಡಿದೆ.

ಏನಿದು ಜಂಗಲ್ ಜಾಕಿ?
ಮೂಲಭೂತ ಸೌಕರ‍್ಯ ವಂಚಿತ ಊರಿನಲ್ಲಿ ಮೂಲಭೂತ ಸೌಕರ‍್ಯಕ್ಕಾಗಿ ಹೋರಾಟ,.. ಜನರ ಕಲ್ಯಾಣಕ್ಕಾಗಿ ಸರಕಾರ ಯೋಜನೆಗಳನ್ನು ಮಾಡಿದರೂ ಜನರ ದುರುಪಯೋಗದಿಂದ ಅದು ಸಮಾಜಕ್ಕೆ ಯಾವ ರೀತಿ ಮಾರಕವಾಗಿ ಪರಿಣಮಿಸುತ್ತದೆ,.. ಇದನ್ನು ವಿರೋಧಿಸಲು ಹೊರಟ ಆ ಊರಿನ ಬಡ ಪರಿಸರ ಪ್ರೇಮಿ ಯುವಕ,.. ಆದರೆ ಪ್ರಭಾವಿ ದಂಧೆಕೊರರ ವಿರುದ್ದ ಈತನ ಆಟ ನಡೆಯೊಲ್ಲ.., ಆದರೂ ಶಕ್ತಿಯಿಂದ ಆಗದ ಕೆಲಸವನ್ನು ಯುಕ್ತಿಯಿಂದ ಮಾಡಲು ಹೊರಟು ಕೊನೆಗೆ ಓರ್ವ ದಕ್ಷ ನಿಷ್ಟಾವಂತ ಅಧಿಕಾರಿಯಿಂದ ಆ ಯುವಕನ ಉದ್ದೇಶ ಬಹಿರಂಗವಾಗುತ್ತದೆ !! ಈ ರೀತಿಯಾಗಿ ಗ್ರಾಮೀಣ ಯುವಕನಲ್ಲಿ ಸಾಮಾಜಿಕ ಅವ್ಯವಸ್ಥೆ ಮತ್ತು ಪರಿಸರ ಪ್ರೇಮವೇ ಒಂದು ಕಥೆಯಾಗಿ ಮೂಡಿ ಬಂದಿದೆ, ಅದರ ಹೆಸರೇ “ಜಂಗಲ್ ಜಾಕಿ” ಕ್ಷಣಕ್ಷಣಕ್ಕೆ ಕುತೂಹಲ, ರೋಚಕ ತಿರುವು ಮುಂತಾದ ವಿಶಿಷ್ಠತೆಯುಳ್ಳ ಚಿತ್ರ ಜಂಗಲ್ ಜಾಕಿ ಈ ಜಂಗಲ್ ಜಾಕಿ ಯಾರು ಏನಿದರ ಮರ್ಮ ಎಂಬ ಹಲವು ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಈ ಕಿರುಚಿತ್ರವನ್ನು ಒಮ್ಮೆ ನೀವು ನೋಡಲೇ ಬೇಕು..

ಕಡಬ ತಾಲೂಕಿನ ಬಲ್ಯ ಗ್ರಾಮದ ಉಮೇಶ್ ಬಂಗೇರ ಎಂಬವರು ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳಿಂದ ಪ್ರೇರೆಪಿತರಾಗಿ ಅದಕ್ಕೊಂದು ಕಲ್ಪನೆಯ ಮೆರುಗು ನೀಡಿ ಸುಂದರ ಕಥೆಯನ್ನು ರಚಿಸಿದ್ದಾರೆ, ಅಲ್ಲದೆ ಅದಕ್ಕೆ ನಿರ್ದೇಶನ ನೀಡಿ ಸುಮಾರು 1 ಗಂಟೆಗಳ ಕಾಲದ ಕಿರು ಚಿತ್ರವನ್ನು ನಿರ್ಮಿಸಿದ್ದಾರೆ, ಇವರಿಗೆ ಯಾವುದೇ ಫಲಾಫೇಕ್ಷೆ ಇಲ್ಲದೆ ಕಡಬದ ಪ್ರಮುಖರು ಹಲವಾರು ಮಂದಿ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಇದರ ಚಿತ್ರಿಕರಣವನ್ನು ಉದಯ ಆಚಾರ್ಯ ಬಲ್ಯ ಅವರು ನಡೆಸಿದರೆ ಕಲಾವಿದರಾಗಿ ಗ್ರಾಮೀಣ ಪ್ರದೇಶದ ಸುಮಾರು 30 ಕ್ಕಿಂತಲೂ ಹೆಚ್ಚು ಮಂದಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಕಳೆದ ಸೆಪ್ಟಂಪರ್ ತಿಂಗಳಿನಲ್ಲಿ ಪ್ರಾರಂಭವಾದ ಚಿತ್ರಿಕರಣ, ಇದೀಗ ಪೂಣ್ವಾಗಿ ಸಿದ್ದಗೊಂಡಿದೆ, ಈಗಾಗಲೇ ಬಿಡುಗಡೆ ಆಗಬೇಕಿದ್ದು ಕೊರೋನಾ ರೋಗದ ಮುಂಜಾಗ್ರತಾ ಹಿನ್ನಲೆಯಲ್ಲಿ ಬಿಡುಗಡೆ ನಡೆಸಲಾಗಿಲ್ಲ, ಶೀಘ್ರದಲ್ಲಿ ಬಿಡುಗಡೆ ಆಗಲಿದೆ.

“ಜಂಗಲ್ ಜಾಕಿ” ಕಿರು ಚಿತ್ರದ  ರೂವಾರಿ ಉಮೇಶ್ ಬಂಗೇರ

ರಾತ್ರಿ ವೇಳೆ ಟೈಲರಿಂಗ್ ವೃತ್ತಿ, ಹಗಲು ಹಸಿ ಮೀನು ಮಾರಾಟ ಮಾಡುತ್ತಾ ಜೀವನ ನಿರ್ವಹಿಸುವ ಉಮೇಶ್ ಬಂಗೇರ ಅವರು 200೫ರಲ್ಲಿ “ಮೆಂಟಲ್ ಮಂಜ” ಕನ್ನಡ ಚಲನ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹವ್ಯಾಸಿ ಬರಹಗಾರರಾಗಿರುವ ಇವರು ಬೆಂಗಳೂರಿನಲ್ಲಿ ಸುಮಾರು 10 ವರ್ಷ ಟೈಲರಿಂಗ್ ವೃತ್ತಿಯನ್ನು ಮಾಡಿದ್ದಾರೆ. ಒಂದು ಕಾಲದಲ್ಲಿ ಕುಡಿತದ ಚಟಕ್ಕೆ ಬಲಿಯಾದ ಇವರು ಸುತ್ತ ಮುತ್ತಲಿನ ಜನರ ಕುಹಕದ ಮಾತಿಗೆ ಬಲಿಯಾಗಿದ್ದರು, ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಮದ್ಯವರ್ಜನ ಶಿಬಿರದ ಮೂಲಕ ತನ್ನ ಮದ್ಯದ ಚಟವನ್ನು ಬಿಟ್ಟು ಕ್ರಿಯಾಶೀಲಾ ವ್ಯಕ್ತಿಯಾದರು. ತನ್ನ ಸುತ್ತಮುತ್ತಲಿನ ಸಮಸ್ಯೆಗಳನ್ನು ತನ್ನದೆ ಶೈಲಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಉಮೇಶ್ ಬಂಗೇರ ಹರಿಯ ಬಿಡುವ ಹವ್ಯಾಸ ಹೊಂದಿದ್ದಾರೆ. ಬಲ್ಯ ಗ್ರಾಮದ ಐತ್ತಪ್ಪ ಪೂಜಾರಿ ಚೆನ್ನಮ್ಮ ದಂಪತಿಯ ಪುತ್ರರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.