‘ಕೊರೊನಾ’ ಅತಿರಂಜಿತ ವರದಿ ಹರಡಬೇಡಿ: ಸಹಾಯವಾಣಿ 1077 ಸಂಪರ್ಕಿಸಿ – ಎ.ಸಿ. ಡಾ| ಯತೀಶ್ ಉಳ್ಳಾಲ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪತ್ರಿಕಾ ಮತ್ತು ದೃಶ್ಯ ಮಾಧ್ಯಮಗಳಿಗೂ ಸಾಮಾಜಿಕ ಜವಾಬ್ದಾರಿ ಇದೆ. ಕೊರೊನಾ ಬಗ್ಗೆ ಸಮರೋಪಾದಿಯಲ್ಲಿ ಕೆಲಸ ನಡೆಸಲಾಗುತ್ತಿದೆ. ಯಾವ ರೀತಿಯಲ್ಲೂ ತಪ್ಪು ಮಾಹಿತಿಗಳು ಜನತೆಗೆ ತಲುಪಬಾರದು. ಇದರಿಂದ ಲಾಭದ ಬದಲಿಗೆ ತೊಂದರೆಯೇ ಜಾಸ್ತಿ. ಹಾಗಾಗಿ ಅತಿರಂಜಿತ ಸುದ್ಧಿಗಳನ್ನು ಹರಡಬೇಡಿ ಎಂದು ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್ ರವರು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.

ಪುತ್ತೂರಿನಲ್ಲಿ ಕಾರ್ಯಾ ಚರಿಸುತ್ತಿರುವ ಕೆಲವು ವೆಬ್‌ನ್ಯೂಸ್‌ಗಳು ತಮ್ಮ ಜವಾಬ್ದಾರಿಯನ್ನು ಮರೆತು ತಪ್ಪು ಸಂದೇಶಗಳನ್ನು ರವಾನಿಸುವ ಕೆಲಸ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಕೊರೊನಾ ಇಂದು ಜಗತ್ತನ್ನೇ ತಲ್ಲಣಗೊಳಿಸಿದೆ. ಈ ನಡುವೆ ತಪ್ಪು ಸಂದೇಶಗಳನ್ನು ಹಾಕುವುದರಿಂದ ಜನತೆಯಲ್ಲಿ ಆತಂಕ ನಿರ್ಮಿಸುತ್ತಿವೆ. ಇಂತಹ ವೆಬ್‌ನ್ಯೂಸ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಸತ್ಯ ಮಾಹಿತಿಗಳನ್ನಷ್ಟೇ ಜನತೆಗೆ ನೀಡಿ. ಶಂಕೆ ವ್ಯಕ್ತವಾದರೆ ಸಹಾಯವಾಣಿ 1077 ಅನ್ನು ಸಂಪರ್ಕಿಸಬಹುದು ಎಂದರು.

ಜಾತ್ರೆ-ನೇಮೋತ್ಸವ ಕಟ್ಟುಕಟ್ಟಲೆ ಮಾತ್ರ: ಊರಿನಲ್ಲಿ ನಡೆಯುವ ಜಾತ್ರೆ ಹಾಗೂ ದೈವಗಳ ನೇಮೋತ್ಸವಗಳನ್ನು ನಡೆಸುವುದು ಬೇಡ. ಕೇವಲ ಧಾರ್ಮಿಕ ವಿಧಿವಿಧಾನಗಳನ್ನು, ಕಟ್ಟುಕಟ್ಟಲೆಗಳನ್ನು ಮಾತ್ರ ಮಾಡಲು ಅವಕಾಶ ನೀಡಲಾಗಿದೆ. ಜನತೆಯ ಹಿತ ದೃಷ್ಟಿಯಿಂದ ಸರಕಾರ ಈ ನಿಯಮ ಜಾರಿಗೊಳಿಸಿದೆ. ಜನತೆಯ ಗುಂಪು ಸೇರುವ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಪುತ್ತೂರು ಏಳ್ಮುಡಿಯಲ್ಲಿ ವಿದೇಶದಿಂದ ಬಂದ ವ್ಯಕ್ತಿಯ ಮನೆಯಲ್ಲಿ ಆರೋಗ್ಯ ಇಲಾಖೆಯ ಮಾಹಿತಿ ಸಂಗ್ರಹಕ್ಕೆ ಅಸಹಕಾರ ವ್ಯಕ್ತವಾಗಿದೆ. ಈ ವ್ಯಕ್ತಿ ಪ್ರಸ್ತುತ ಪುತ್ತೂರಿನಲ್ಲಿ ಇಲ್ಲ. ಅವರ ಮಾಹಿತಿ ಸಂಗ್ರಹಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.