ಒಂದೇ ಜಾಗ, ಎರಡು ಘಟನೆ: ಪ್ರತ್ಯೇಕ 2 ಠಾಣೆಗಳಲ್ಲಿ ಪ್ರಕರಣ ದಾಖಲು: ಪೊಲೀಸರ ದಂದ್ವ ನಡವಳಿಕೆ-ಸಾರ್ವಜನಿಕರ ಆರೋಪ

Puttur_Advt_NewsUnder_1
Puttur_Advt_NewsUnder_1
  • ಅಕ್ರಮ ಕಟ್ಟಡದಲ್ಲಿ ಸ್ಪೋಟಕ ಪತ್ತೆ ಆದಾಗ ಕಡಬ ಪೊಲೀಸ್ ಠಾಣೆ
  • ಅದೇ ಕಟ್ಟಡದ ಬದಿಯಲ್ಲಿ ಟೆಂಪೋ ಪಲ್ಟಿಯಾಗಿ ಗೋಮಾಂಸ
  • ಪತ್ತೆ ಆದಾಗ ಉಪ್ಪಿನಂಗಡಿ ಠಾಣೆ
  • ಆರೋಪಿ ಹೇಳಿದ್ದನ್ನು ನಂಬಿದ ಪೊಲೀಸರು
  • ಆರೋಪಿ ಮನೆಗೂ ದಾಳಿ, 4 ಬೈಕ್ ವಶಕ್ಕೆ?
ಉಪ್ಪಿನಂಗಡಿ ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಕ್ರಮವಾಗಿ ಕಾರ‍್ಯಾಚರಿಸುತ್ತಿರುವ ಹೊಟೇಲ್ ಕಟ್ಟಡ ಮತ್ತು ಅದರ ಎದುರಿನಲ್ಲೇ ನಿಂತಿರುವ  ಪೊಲೀಸ್ ಜೀಪ್

ಉಪ್ಪಿನಂಗಡಿ: ಇದನ್ನು ಓದುವಾಗ ಏನಪ್ಪಾ ಇದು ಎಂದು ವಿಚಿತ್ರ ಅನಿಸಬಹುದು. ಆದರೆ ವಿಷಯ ಸತ್ಯ, ಪೊಲೀಸರ ಕರಾಮತ್ತಿನಿಂದ ಇದು ಹೀಗಾಗಿದೆ. 2 ದಿನಗಳಲ್ಲಿ ನಡೆದ ಒಂದೇ ಜಾಗ, ರಾಷ್ಟ್ರೀಯ ಹೆದ್ದಾರಿ ಬದಿಯ ಲಾವತ್ತಡ್ಕ ಎಂಬಲ್ಲಿ ನಡೆದ ಪ್ರತ್ಯೇಕ 2 ಘಟನೆಗಳು ಉಪ್ಪಿನಂಗಡಿ ಮತ್ತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಪೊಲೀಸರ ದ್ವಂದ್ವ ನಡವಳಿಕೆಯ ವಿರುದ್ಧ ಗಂಭೀರ ಆರೋಪಗಳು ವ್ಯಕ್ತವಾಗಿದೆ.

ಪ್ರಕರಣ-1: ರಾಷ್ಟ್ರೀಯ ಹೆದ್ದಾರಿ 75ರಲ್ಲಿ, ಲಾವತ್ತಡ್ಕ ಎಂಬಲ್ಲಿ ಕಾರ‍್ಯಾಚರಿಸುತ್ತಿದ್ದ ಅಕ್ರಮ ಹೊಟೇಲ್ ಕಟ್ಟಡಕ್ಕೆ ಮಾ. 15ರಂದು ಪುತ್ತೂರು ಡಿವೈಎಸ್ಪಿ, ನಿರ್ದೇಶನದತೆ ವಿಶೇಷ ಪೊಲೀಸ್ ತಂಡವನ್ನು ಒಳಗೊಂಡಂತೆ ಉಪ್ಪಿನಂಗಡಿ ಮತ್ತು ಕಡಬ ಪೊಲೀಸರು ದಾಳಿ ನಡೆಸಿ ಕಟ್ಟಡದಲ್ಲಿ ಅಕ್ರಮವಾಗಿ ಮಾರಾಟಕ್ಕೆ ಇರಿಸಿದ್ದ ಸ್ಪೋಟಕ ಸಾಮಾಗ್ರಿ, ಡಿಸೇಲ್, ಮದ್ಯ ಬಾಟಲಿಗಳು ಪತ್ತೆ ಹಚ್ಚಲಾಗಿ ಆರೋಪಿ ಸತೀಶ್ ಎಂಬಾತನನ್ನು ಬಂಧಿಸಲಾಗುತ್ತದೆ, ಇದು ಕಡಬ ಪೊಲೀಸ್ ಠಾಣಾ ವ್ಯಾಪ್ತಿ ಎಂದು ಹೇಳಲಾಗಿ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ.

ಪ್ರಕರಣ-೨: ರಾಷ್ಟ್ರೀಯ ಹೆದ್ದಾರಿ 75ರಲ್ಲಿ, ಲಾವತ್ತಡ್ಕ ಎಂಬಲ್ಲಿ ಕಾರ‍್ಯಾಚರಿಸುತ್ತಿದ್ದ ಅಕ್ರಮ ಕಟ್ಟಡದ ಸನಿಹದಲ್ಲಿ, ಕೇವಲ 1 ಮೀಟರ್ ಅಂತರದಲ್ಲಿ ಮಾ. 17ರಂದು ಟೆಂಪೋವೊಂದು ಪಲ್ಟಿಯಾಗಿ ಅಕ್ರಮ ಗೋಮಾಂಸ ಸಾಗಾಟ ಪತ್ತೆ ಆಗಿತ್ತು, ಸುಮಾರು 1 ಟನ್‌ಗೂ ಅಧಿಕ ಕೆ.ಜಿ. ಗೋಮಾಂಸ ಇದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ನಡೆದ ಸ್ಥಳ ಲಾವತ್ತಡ್ಕ ಇಚ್ಲಂಪಾಡಿ ಗ್ರಾಮ ವ್ಯಾಪ್ತಿಯಲ್ಲಿ ಒಳಗೊಂಡಿದೆ. ಆದರೆ ಅಕ್ರಮ ಹೊಟೇಲ್ ಕಟ್ಟಡ ಪ್ರಕರಣ ದಾಖಲು ಮಾಡುವಾಗ ಪೊಲೀಸರು ನೂಜಿಬಾಳ್ತಿಲ ಗ್ರಾಮ ಎಂದು ಹೇಳಲಾಗಿ ಕಡಬ ಪೊಲೀಸ್ ಠಾಣೆಯಲ್ಲಿ, ಟೆಂಪೋ ಪಲ್ಟಿ ಆದ ಪ್ರಕರಣವನ್ನು ಇಚ್ಲಂಪಾಡಿ ಗ್ರಾಮ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಲ್ಲಿ ಸ್ಪೋಟಕ ದಾಸ್ತಾನು ಪ್ರಕರಣದ ಆರೋಪಿಯನ್ನು ರಕ್ಷಿಸುವ ಮತ್ತು ಆತನಿಗೆ ಸಹಕಾರಿ, ಅನುಕೂಲ ಮಾಡುವ ನಿಟ್ಟಿನಲ್ಲಿ ಆ ಪ್ರಕರಣವನ್ನು ಕಡಬ ಪೊಲೀಸ್ ಠಾಣಾ ವ್ಯಾಪ್ತಿಯೆಂದು ದಾಖಲಿಸಿರುವುದಾಗಿದೆ ಎಂಬ ಗಂಭೀರ ಆರೋಪ ಗ್ರಾಮಸ್ಥರಿಂದ ವ್ಯಕ್ತವಾಗಿದೆ.

ಆರೋಪಿ ಹೇಳಿದ್ದನ್ನು ನಂಬಿದ ಪೊಲೀಸರು: ಅಕ್ರಮ ಹೊಟೇಲ್ ಕಟ್ಟಡ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡು ಕೇವಲ 1 ಮೀಟರ್ ಅಂತರದಲ್ಲಿದೆ. (ಚಿತ್ರದಲ್ಲಿ ಪೊಲೀಸ್ ಜೀಪ್ ನಿಂತಿರುವುದನ್ನು ಗಮನಿಸಬಹುದು.) ಈ ಕಟ್ಟಡದ ಹಿಂಭಾಗದಲ್ಲಿ ಗುಂಡ್ಯ ಹೊಳೆ ಇದೆ, ಇದರ ಆ ಕಡೆ ನೂಜಿಬಾಳ್ತಿಲ ಪ್ರದೇಶವಾಗಿರುತ್ತದೆ. ಹೀಗಾಗಿ ಆರೋಪಿತ ವ್ಯಕ್ತಿ ತನ್ನ ಈ ಕಟ್ಟಡವನ್ನು ಸಕ್ರಮಗೊಳಿಸುವ ಸಲುವಾಗಿ 94/ಸಿ ಅಡಿಯಲ್ಲಿ ನೂಜಿಬಾಳ್ತಿಲ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದಾನೆನ್ನಲಾಗಿದೆ. ಈ ಕಟ್ಟಡ ಹೆದ್ದಾರಿ ಬದಿಯಲ್ಲಿ ಇದೆ, ನೂಜಿಬಾಳ್ತಿಲ ಗ್ರಾಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಗ್ರಾಮಸ್ಥರಿಂದ ಆಕ್ಷೇಪ ದೂರು ಸಲ್ಲಿಕೆಯಾಗಿರುತ್ತದೆ. ಹೀಗಿರುವಾಗ ಈತ ತನ್ನ ಕಟ್ಟಡ ನೂಜಿಬಾಳ್ತಿಲ ಗ್ರಾಮ ವ್ಯಾಪ್ತಿಯಲ್ಲಿ ಇದೆ ಎಂದು ದಾಖಲು ಆಗುವ ಸಲುವಾಗಿ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ನೂಜಿಬಾಳ್ತಿಲ ಗ್ರಾಮ ಎಂದು ಹೇಳಿರುವುದಾಗಿದೆ, ಇದನ್ನು ಪೊಲೀಸರು ನಂಬಿ ಹೀಗಾಗಿದೆ ಎಂಬ ಆರೋಪ ಗ್ರಾಮಸ್ಥರಿಂದ ವ್ಯಕ್ತವಾಗಿದೆ.

ಆರೋಪಿ ಮನೆಗೂ ದಾಳಿ, 4 ಬೈಕ್ ವಶಕ್ಕೆ: ಮಾ.15ರಂದು ಲಾವತ್ತಡ್ಕ ಕಟ್ಟಡದಲ್ಲಿ ಸ್ಪೋಟಕ ಸಹಿತ ಸೊತ್ತುಗಳನ್ನು ಪತ್ತೆ ಆದ ಬಳಿಕ ಇಚ್ಲಂಪಾಡಿಯಲ್ಲಿರುವ ಆರೋಪಿತನ ಮನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ನಿರ್ದೇಶನದಂತೆ ಪೊಲೀಸರು ದಾಳಿ ನಡೆಸಿದ್ದು, ಆತನ ಮನೆಯಲ್ಲಿ ಅಕ್ರಮವಾಗಿ ಇರಿಸಿಕೊಂಡಿದ್ದ 4 ಬೈಕ್ ಪತ್ತೆ ಆಗಿತ್ತೆನ್ನಲಾಗಿದೆ. ಇದನ್ನು ದಾಳಿ ನಡೆಸಿದ ವಿಶೇಷ ಪೊಲೀಸ್ ತಂಡ ಕಡಬ ಪೊಲೀಸ್ ಮೂಲಕ ಕಡಬ ಠಾಣೆಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಆದರೆ ಕಡಬ ಪೊಲೀಸರು ಇದನ್ನು ನಿರಾಕರಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.