ಕೊರೋನ್ ವೈರಸ್ (ಕೋವಿಡ್ 29) – ಡಾ. ಜೆ.ಸಿ. ಅಡಿಗ, ತಜ್ಞ ವೈದ್ಯರು, ಚೇತನಾ ಆಸ್ಪತ್ರೆ ಪುತ್ತೂರು

Puttur_Advt_NewsUnder_1
Puttur_Advt_NewsUnder_1

ಡಾ. ಜೆ.ಸಿ. ಅಡಿಗ, ತಜ್ಞಾ ವೈದ್ಯರು, ಪುತ್ತೂರು

ಬಗೆಹರಿಯದ ಸಂದೇಹಗಳು: ಉದಯವಾಣಿಯಲ್ಲಿ ಬಂದ ಹಿಂದಿನ ಲೇಖನದ ಬಗ್ಗೆ ಕೊರೋನಾ ವೈರಸ್ ಬಗ್ಗೆ ಉಲ್ಲೇಖವಿದೆ. ಈ ವೈರನ್ (ಕೊರೋನಾ) 1960ರಲ್ಲಿ ಕೋಳಿ ಮತ್ತು ಮನುಷ್ಯರಲ್ಲಿ ಕಂಡುಬಂದಿತ್ತು. ಕೋರೋನಾ ವೈರಸ್‌ನಲ್ಲಿ ಹಲವು ಪ್ರಭೇಧಗಳಿವೆ. 2003ರಲ್ಲಿ SARS  ಹಾಗೂ 2013 MARS ಕೋರೋನಾ ವೈರಸ್‌ನ ಪ್ರಭೇಧಗಳು ಹಾಗೂ ಈ RNA ವೈರಸ್‌ನ ಒಂದು ಪ್ರಭೇಧ COVID 2019 ಆಗಿದೆ. SARS ಹಾಗೂ MERS ವೈರಾಣು ಇನ್ನೂ ಜಾಸ್ತಿ ಮಾರಣಾಂತಿಕವಾದರೂ, ಮನುಷ್ಯರಿಂದ ಮನುಷ್ಯರಿಗೆ ಹರಡುವ ಪ್ರಕ್ರಿಯೆ Covid19 ಆಕಾರ ಸೂರ್ಯನ ಸುತ್ತಲೂ ಇರುವ corona ಹೋಲಿಕೆಯಿಂದ ಬಂದಿದೆ.

ಕೋವಿಡ್ 19 ಏಕೆ ಅಷ್ಟೊಂದು ಭೀಕರ?: ಇದರಿಂದ ಮರಣದ ಸಂಖ್ಯೆ ಕಡಿಮೆಯಾದರೂ (2ರಿಂದ 3%) ಇದರ ಶೀಘ್ರ ಪಸರಿಸುವಿಕೆಯಿಂದ ಇದು ವಿಶ್ವದಾದ್ಯಂತ ಹರಡಲು ಕಾರಣ? ಮುಖ್ಯ ಕಾರಣ Covid19 ಇರುವ ಸ್ಥಳದಿಂದ ಬೇರೆ ಬೇರೆ ಸ್ಥಳಕ್ಕೆ ರೋಗಿಯ ವಿಮಾನ ಹಾಗೂ ಹಡಗಿನಲ್ಲಿ ಪ್ರಯಾಣ. ಇದು ಮನುಷ್ಯರಿಂದ ಮನುಷ್ಯರಿಗೆ ಕೆಮ್ಮು, ಸೀನುವಿಕೆಯಿಂದ ಗಾಳಿಯಲ್ಲಿ ಹನಿಹನಿಯಾಗಿ ಹಬ್ಬುತ್ತದಾರೂ ವೈರಾಣು ಹರಡಿದ ಜಾಗದಲ್ಲಿ 6ರಿಂದ 12 ಗಂಟೆ ಇರುವುದರಿಂದ ಅಂತಹ ವಸ್ತುವನ್ನು ಮುಟ್ಟಿ ನಿಮ್ಮ ಮೂಗು ಕಣ್ಣನ್ನು ಮುಟ್ಟಿದಲ್ಲಿ ರೋಗ ಹರಡಬಲ್ಲದು. ಸುಮಾರು 1 ಮೀಟರ್‌ನಷ್ಟು ದೂರ ಈ ವೈರಣಾ ಹರಡಬಲ್ಲದು. ವೈರಾಣು ರೋಗಿಯಲ್ಲಿ ಸುಮಾರು 2 ವಾರ ಇರುವುದಾದರೂ ಕೆಲವರಲ್ಲಿ ತಿಂಗಳ ತನಕ ರೋಗಿಯ ಶರೀರದಲ್ಲಿದ್ದು ರೋಗ ಹರಡಲು ಕಾರಣವಾಗಬಹುದು.

ರೋಗವನ್ನು ತಪಾಸಣೆ ವಿಧಾನ?: ರೋಗಿಯ ಕಫ, ಗಂಟಲಿನ ಸ್ಟ್ಯಾಬ್, ರಕ್ತ ಪರೀಕ್ಷೆಯನ್ನು PCR ಪರೀಕ್ಷೆಯಿಂದ ಕೆಲವು ಗಂಟೆಗಳಿಂದ 2 ದಿನದ ಒಳಗೆ ರೋಗವನ್ನು ಕಂಡುಹಿಡಿಯಬಹುದು ಹಾಗೂ ಎರಡುPCR Testನಲ್ಲಿ ವೈರಾಣು ಕಾಣದಿದ್ದಲ್ಲಿ ರೋಗಿಯು ವೈರಾಣುವಿನಿಂದ ಮುಕ್ತನಾಗಿದ್ದಾನೆ ಎಂದು ಹೇಳಬಹುದು. ಕೆಲವು ರೋಗಿಗಳಲ್ಲಿ 1 ತಿಂಗಳವರೆಗೆ ವೈರಾಣು ಶರೀರದಲ್ಲಿ ಇರುವುದುಂಟು.

Covid19 ಇಲ್ಲದವರು ಮಾಸ್ಕ್ ಧರಿಸಬೇಕೆ?: ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಸರಿಯಾದ ಮಾಹಿತಿ ಕೊಟ್ಟಿದೆ ಹಾಗೂ ರೋಗ ಇಲ್ಲದವರು ಮುಖದ ಮೇಲೆ ಮಾಸ್ಕ್ ಧರಿಸುವುದು ಅವಶ್ಯಕತೆ ಇಲ್ಲ ಹಾಗೂ ಮಾಸ್ಕ್ ಧರಿಸಿದ್ದಲ್ಲಿ ಅವರು ಇದನ್ನು ಸರಿಪಡಿಸಲು ಹೋಗಿ ಪುನಃ ಪುನಃ ಮೂಗು ಕಣ್ಣುನ್ನು ಕೈಯಲ್ಲಿ ಮುಟ್ಟಿದಾಗ ಕೋರೋನಾ ವೈರಾಣುವಿನ ಸೋಂಕು ತಗುಲುವುದು. ಆದರೆ ರೋಗ ಲಕ್ಷಣವಿರುವವರು ಹಾಗೂ ರೋಗಿಯನ್ನು ತಪಾಸಣೆ ಮಾಡುವ ವೈದ್ಯರು, ನರ್ಸ್‌ಗಳು, ಲ್ಯಾಬೋರೇಟರಿಯಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಮುಖದ ಮೇಲೆ ಮಾಸ್ಕ್ ಧರಿಸಲೇಬೇಕು.

Covid19ನಲ್ಲಿ ಮರಣದ ಪ್ರಮಾಣ 2-3% ಮಾತ್ರ ಹಿಂದಿನ ಸಾರ್ಸ್ ಮತ್ತು ಮಾರ್ಸ್ ರೋಗದಿಂದ ಅಧಿಕ ಜನರು ಮರಣ ಹೊಂದಿದ್ದರು. ಆದ್ದರಿಂದ ರೋಗ ಹರಡುವುದು ಶೀಘ್ರವಾದರೂ ಮರಣದ ಪ್ರಮಾಣ ಕಡಿಮೆ.

ಈ ರೋಗ ಪತ್ತೆ ಹೇಗೆ?: ವಿಮಾನ ನಿಲ್ದಾಣದಲ್ಲಿ thermometerನಲ್ಲಿ ಜ್ವರ ಪರೀಕ್ಷೆ ಮಾಡುತ್ತಾರೆ. ಆದರೆ ಕೊರೋನಾ ವೈರಸ್ ಸೋಕುವಿನಲ್ಲಿ ಜ್ವರ ಮೊದಲ ದಿನವೇ ಇರುವುದಿಲ್ಲ. ಜ್ವರ ಎಷ್ಟೇ ಬಾರಿ ಶೀತ ಕೆಮ್ಮು, ಗಂಟಲು ಕೆರೆತದ ನಂತರ ಬರುವುದರಿಂದ ರೋಗಿಯ ಇತರ ಲಕ್ಷಣಗಳನ್ನು ನೋಡುವುದು ಅತೀಮುಖ್ಯ.

ಈ ರೋಗವನ್ನು ಕಫದ, ಎಂಜಲಿನ ಮತ್ತು ರಕ್ತದ P.C.R ಪರೀಕ್ಷೆಯಿಂದ ಸಾಧ್ಯ ಹಾಗೂ ಈ ಪರೀಕ್ಷೆಯಲ್ಲಿ ಕೆಲವು ಗಂಟೆಯಿಂದ 2 ದಿನದ ಒಳಗೆ ಫಲಿತಾಂಶ ಸಿಗುತ್ತದೆ ಹಾಗೂ ಎರಡು ಬಾರಿ ಈ ಪರೀಕ್ಷೆಯಲ್ಲಿ ವೈರಾಣು ಇಲ್ಲದಿದ್ದಲ್ಲಿ ರೋಗಿಯ ವೈರಾಣು ಮುಕ್ತ ಎಂದು ಹೇಳಬಹುದು. ಅಲ್ಲಿಯ ತನಕ ರೋಗಿಯನ್ನು ಪ್ರತ್ಯೇಕಿಸುವುದು ಅತೀ ಮುಖ್ಯ.

Covid19 ಪ್ರಾಣಿಗಳಿಂದ ಬರುತ್ತದೆಯಾ?: ಚೈನಾದ ವುಹಾನ್‌ನ ಸಜೀವ ಪ್ರಾಣಿಗಳ ಮಾರ್ಕೆಟ್‌ನಿಂದ ಈ ರೋಗಾಣು ಮನುಷ್ಯರಿಗೆ ಹರಡಿ ನಂತರ ಮನುಷ್ಯರಿಂದ ಮನುಷ್ಯರಿಗೆ ಹರಡುವುದು. ಬಾವಲಿ ಹಾಗೂ ಹಾವಿನಿಂಂದ ಈ ರೋಗಾಣು ಮನುಷ್ಯರಿಗೆ ಹರಡುತ್ತದೆ. ಚೈನಿಯರ ವಿಶೇಷ ಆಹಾರ ಪದ್ಧತಿಯಿಂದ ಈ ರೋಗದ ಪ್ರಾರಂಭವಾಗಿದೆ. ಬೇಯಿಸದೆ ತಿಂದ ಮಾಂಸದಿಂದ ಈ ರೋಗಾಣು ಮನುಷ್ಯರಿಗೆ ಹರಡುವುದು.

ಔಷಧ ಹಾಗೂ ವ್ಯಾಕ್ಸಿನ್ ಇದೆಯಾ?: ಸದ್ಯ ಈ ರೋಗಕ್ಕೆ ಮಲೇರಿಯಾ ಕ್ಲೋರೊಕ್ಟಿನ್ ಹಾಗೂ ಏಯ್ಡ್ ರೋಗದ ಕೆಲವು ಔಷಧ ನೀಡಲಾಗುತ್ತದೆ. ಕೆಲವರಲ್ಲಿ ಸ್ಟೀರಾಯ್ಡ್ ಹಾಗೂ ಇನ್‌ಫ್ಲೂಯೆನ್ಯಕ್ಕೆ ಬಳಸುವ oseltamivir ಮಾತ್ರೆ ನೀಡಲಾಗುತ್ತದೆ. oseltamivir ಇದ್ದವರಲ್ಲಿ, ಕೃತರ ಶ್ವಾಸದ ಉಪಕರಣ ಹಾಗೂ ECMO ಬಳಸುತ್ತಾರೆ. ವ್ಯಾಕ್ಸಿನ್ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ.

ಸಿನೆಮಾ ಹಾಲ್, ಮದುವೆ, ಜನಸಂದಣಿಯನ್ನು ಸರಕಾರ ನಿಷೇಧಿಸಿದೆ. ಇದು ಸಮಂಜಸವೇ?: ಈ ರೋಗ ನಮ್ಮಲ್ಲಿರುವ ಜನರಲ್ಲಿ ಇಲ್ಲ ಹಾಗೂ ಜನರು ಬೇರೆ ಬೇರೆ ದೇಶದಿಂದ ಪ್ರಯಾಣ ಮಾಡುವುದರನ್ನು ತೀವ್ರ ಪರೀಕ್ಷೆ ನಡೆಸುವುದು ಮುಖ್ಯ ಹಾಗೂ ಆರೋಗ್ಯದ ಲಕ್ಷಣ ಇರುವವರನ್ನು ಪ್ರತ್ಯೇಕಿಸಿ 2 ವಾರ ಇರಿಸುವುದು ಮುಖ್ಯ. ಇನ್ನೂ ಇಲ್ಲಿನ ಜನರಿಂದ ಜನರಿಗೆ ಹಬ್ಬುದಷ್ಟು ತೀವ್ರ ತರಹ ಇಲ್ಲದ್ದರಿಂದ ಈ ಕ್ರಮ ಅವಶ್ಯವಲ್ಲ ಎನಿಸುತ್ತದೆ. ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಬರುವಂತೆ ಬಯೋಟೆರಿಸಮ್‌ನ ಕೃತ್ಯ ಎನ್ನುವಂತಹುದು ಸತ್ಯಕ್ಕೆ ದೂರವಾಗಿದೆ. ಚೈನಾ ವುಹಾನ್ ಪ್ರಾಂತ್ಯದಲ್ಲಿ ಶುರುವಾದ ಈ ರೋಗ ಈಗ ಅಲ್ಲಿ ನಿಯಂತ್ರಣಕ್ಕೆ ಬಂದಿದೆ ಹಾಗೂ ಈಗ ಇಟಲಿಯಲ್ಲಿ ಇದು ತೀವ್ರ ತರಹನಾಗಿ ಇದೆ.. ನಮ್ಮ ದೇಶದಲ್ಲಿ ನೂರಕ್ಕು ಮಿಕ್ಕಿ ಜನರಲ್ಲಿ ಇದು ತೋರಿದ್ದು ಇಲ್ಲಿನ ಜನಸಂಖ್ಯೆಗೆ ಇದು. ನಾವು ಯೋಚಿಸುವಷ್ಟು ತೀವ್ರ ತರಹನಾಗಿಲ್ಲ ಹಾಗೂ ಹೆದರುವ ಅವಶ್ಯಕತೆ ಇಲ್ಲ. ಭಾರತದಲ್ಲಿ ಉನ್ನತ ಮಟ್ಟದ ತಪಾಸಣೆ ಹಾಗೂ ಪೂರಕ ಕ್ರಮಗಳಿಂದ ನಿಯಂತ್ರಣ ಸಾಧ್ಯ.

ಕೊರೋನಾ ವೈರಸ್‌ಗೆ ಆಯುರ್ವೇದ ಹಾಗೂ ಹೋಮಿಯೋಪತಿಯ ಚಿಕಿತ್ಸೆ ಇದೆಯಾ?: ಕೊರೋನಾ ವೈರಸ್ Covid19 ಈಗ 2-3 ತಿಂಗಳಷ್ಟೇ ಗುರುತಿಸಲಾಗಿದ್ದು ಇನ್ನೂ ಯಾವ ಔಷಧಿಯೂ ಸರಿಯಾಗಿ ಇನ್ನೂ ತಿಳಿದಿಲ್ಲ ಹಾಗೂ ಇಂತಹ ಹೇಳಿಕೆಗಳು ಸುಳ್ಳು. ಈಗ ನಾವು ಅತ್ಯಂತ ಸಂಧಿಗ್ಧ ಪರಿಸ್ಥಿತಿಯಲ್ಲಿರುವುದರಿಂದ ಇನ್ನೂ 2 ವಾರ ಇದನ್ನು ನಿಯಂತ್ರಿಸಿದ್ದಲ್ಲಿ ವೈರಾಣುವನ್ನು ನಿಯಂತ್ರಿಸಬಹುದು. ನಿಮಗೆ ಕೋರೋನಾದ ಸೋಂಕು ಸಂಶಯ ಇದ್ದಲ್ಲಿ ಮನೆಯಲ್ಲಿ 2 ವಾರ ಇರುವುದು ಸೂಕ್ತ ಹಾಗೂ ವೈದ್ಯರನ್ನು ಸಂಪರ್ಕಿಸಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.