Breaking News

ಸಂಪ್ಯದಲ್ಲಿ ಕ್ಯೂ ಮ್ಯಾಕ್ಸ್ ಪಬ್ಲಿಕ್ ಸ್ಕೂಲ್ ಪ್ರಾರಂಭ: ಆಧುನಿಕ ವ್ಯವಸ್ಥೆಯೊಂದಿಗೆ ನರ್ಸರಿ, ಎಲ್.ಕೆ.ಜಿ, ಯು.ಕೆ.ಜಿ ತರಗತಿ ದಾಖಲಾತಿ ಆರಂಭ

Puttur_Advt_NewsUnder_1
Puttur_Advt_NewsUnder_1

 

  • ಮಾರ್ಚ್ ತಿಂಗಳ ದಾಖಲಾತಿಗೆ ವಿಶೇಷ ರಿಯಾಯಿತಿ
  • ಇಂಗ್ಲೀಷ್, ಕನ್ನಡ, ಅರೆಬಿಕ್ ಭಾಷಾ ತರಬೇತಿ

ಪುತ್ತೂರು: ಸಂಪ್ಯ ಎಂಜೆಎಂ ಮದ್ರಸ ಕಟ್ಟಡದಲ್ಲಿ ಅಬೂಬಕ್ಕರ್ ಸಿದ್ದೀಕ್ ಜಲಾಲಿಯವರ ಸಾರಥ್ಯದಲ್ಲಿ ಕಾರ್ಯಾಚರಿಸುತ್ತಿರುವ ಇಸ್ಲಾಮಿಕ್ ಪ್ರಿ-ಸ್ಕೂಲ್ ಕ್ಯೂ-ಮ್ಯಾಕ್ಸ್ ಪಬ್ಲಿಕ್ ಸ್ಕೂಲ್‌ನಲ್ಲಿ 2020-21ನೇ ಸಾಲಿನ ನರ್ಸರಿ, ಎಲ್.ಕೆ.ಜಿ, ಯು.ಕೆ.ಜಿ ತರಗತಿಗಳಿಗೆ ದಾಖಲಾತಿ ಆರಂಭಗೊಂಡಿದೆ. ವಿದ್ಯಾಸಂಸ್ಥೆಯು ಇಸ್ಲಾಮಿಕ್ ವಸ್ತ್ರಧಾರಣೆ, ಇಂಗ್ಲೀಷ್, ಕನ್ನಡ, ಅರೆಬಿಕ್ ಭಾಷಾ ತರಬೇತಿ ಜೊತೆಗೆ ಖುರ್‌ಆನ್, ಹದೀಸ್, ದಿಕ್ರ್ ವಿಶೇಷ ತಿಳುವಳಿಕೆ ತರಗತಿ ನೀಡಲಿದೆ. 2 ವರ್ಷ 10 ತಿಂಗಳು ಪೂರ್ತಿಯಾದ ಮಕ್ಕಳಿಗೆ ದಾಖಲಾತಿಗೆ ಅವಕಾಶವಿದ್ದು ಸುಸಜ್ಜಿತ ಕ್ಲಾಸ್‌ರೂಂ ಹಾಗೂ ಇನ್ನಿತರ ಎಲ್ಲಾ ವ್ಯವಸ್ಥೆಗಳನ್ನು ಸಂಸ್ಥೆ ಒದಗಿಸುತ್ತಿದೆ, ಪೋಷಕರಿಗೂ ವಿಶೇಷ ಕೌಟುಂಬಿಕ ಜೀವನ ವಿಧಾನಗಳ ಬಗ್ಗೆ ತರಬೇತಿ ನೀಡಲಾಗುವುದು. ಮಾರ್ಚ್ ತಿಂಗಳ ದಾಖಲಾತಿಗೆ ವಿಶೇಷ ರಿಯಾಯಿತಿ ಕೂಡಾ ಪ್ರಕಟಿಸಲಾಗಿದೆ ಆಸಕ್ತ ಪೋಷಕರು ತಮ್ಮ ಮಕ್ಕಳನ್ನು ದಾಖಲು ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9901554885, 9740097229, 9108879552ನ್ನು ಸಂಪರ್ಕಿಸಬಹುದಾಗಿದೆ ಎಂದು ವಿದ್ಯಾಸಂಸ್ಥೆಯ ಮುಖ್ಯಸ್ಥ ಅಬೂಬಕ್ಕರ್ ಸಿದ್ದೀಕ್ ಜಲಾಲಿ ತಿಳಿಸಿದ್ದಾರೆ.

ವಿವಿಧ ಕಡೆಗಳಿಂದ ವಾಹನ ವ್ಯವಸ್ಥೆ:
ಕ್ಯೂ ಮ್ಯಾಕ್ಸ್ ಪಬ್ಲಿಕ್ ಸ್ಕೂಲ್‌ಗೆ ಪುತ್ತೂರು, ಕಬಕ, ಬನ್ನೂರು, ಪರ್ಲಡ್ಕ, ಕೂರ್ನಡ್ಕ, ಕುರಿಯ ಮೊಟ್ಟೆತ್ತಡ್ಕ, ಕುಂಬ್ರ, ಬೆಟ್ಟಂಪಾಡಿ ಪರಿಸರದಿಂದ ವಾಹನದ ವ್ಯವಸ್ಥೆಯಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

ದಾಖಲಾತಿ ಆರಂಭ:
ಸಂಸ್ಥೆಯಲ್ಲಿ ಈಗಾಗಲೇ ದಾಖಲಾತಿ ಆರಂಭಗೊಂಡಿದ್ದು ಹಲವಾರು ಪೋಷಕರು ತಮ್ಮ ಮಕ್ಕಳ ದಾಖಲಾತಿಯನ್ನು ಮಾಡಿಕೊಂಡಿದ್ದಾರೆ. ಇನ್ನು ಸೀಮಿತ ಮಕ್ಕಳಿಗೆ ಮಾತ್ರ ದಾಖಲಾತಿ ಮಾಡಿಸಿಕೊಳ್ಳಲು ಅವಕಾಶ ಇದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.