Breaking News

ಎನ್.ಪಿ.ಆರ್ ವಿರುದ್ಧ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿ ಎಸ್.ಡಿ.ಪಿ.ಐ ಅರಿಯಡ್ಕ, ಒಳಮೊಗ್ರು ಗ್ರಾ.ಪಂ.ಗೆ ಮನವಿ

Puttur_Advt_NewsUnder_1
Puttur_Advt_NewsUnder_1
ಎಸ್.ಡಿ.ಪಿ.ಐ ಅರಿಯಡ್ಕ

ಪುತ್ತೂರು: ಕೇಂದ್ರ ಸರಕಾರ ಜಾರಿಗೆ ತಂದಿರುವ ಎನ್.ಪಿ.ಆರ್ ಎಂಬ ಸಂವಿಧಾನ ವಿರೋಧಿ ಕಾನೂನನ್ನು ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯರೂಪಕ್ಕೆ ತರದಿರಲು ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿ ಎಸ್.ಡಿ.ಪಿ.ಐ ಅರಿಯಡ್ಕ ಗ್ರಾಮ ಸಮಿತಿ ವತಿಯಿಂದ ಅರಿಯಡ್ಕ ಗ್ರಾ.ಪಂ.ಗೆ ಮನವಿ ಸಲ್ಲಿಸಲಾಯಿತು. ಮುಂದಿನ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅರಿಯಡ್ಕ ಪಂಚಾಯತ್ ವ್ಯಾಪ್ತಿಯಲ್ಲಿ ದೇಶಕ್ಕೆ ಅಪಾಯ ತರುವ ಓPಖ ಅನ್ನು ನಡೆಸದಂತೆ ನಿರ್ಣಯ ಕೈಗೊಂಡು ಯಾವುದೇ ಕಾರಣಕ್ಕೂ ಓPಖ ಅನ್ನು ನಡೆಸಲು ಅವಕಾಶ ಮಾಡಿಕೊಡಬಾರದೆಂದು ಮನವಿಯನ್ನು ಸಲ್ಲಿಸಲಾಯಿತು. ಎಸ್.ಡಿ.ಪಿ.ಐ ಅರಿಯಡ್ಕ ಗ್ರಾಮ ಸಮಿತಿ ಅಧ್ಯಕ್ಷ ಮಹಮ್ಮದ್ ಜೆ, ಎಸ್.ಡಿ.ಪಿ.ಐ ಜಿಲ್ಲಾ ಸಮಿತಿ ಸದಸ್ಯ ಜಾಬಿರ್ ಅರಿಯಡ್ಕ, ಕಾರ್ಯಕರ್ತರಾದ ಮಹಮ್ಮದ್ ಇರ್ಷಾದ್, ರೀಯಾಝ್ ಜೆ, ಪಾರೂಕ್ ಕೆ ಉಪಸ್ಥಿತರಿದ್ದರು.

ಒಳಮೊಗ್ರು ಗ್ರಾಮ ಸಮಿತಿ

ಒಳಮೊಗ್ರು ಗ್ರಾಮ ಸಮಿತಿಯಿಂದಲೂ ಮನವಿ:
ಎನ್.ಪಿ.ಆರ್ ಎಂಬ ಎಂಬ ಸಂವಿಧಾನ ವಿರೋಧಿ ಕಾನೂನನ್ನು ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯ ರೂಪಕ್ಕೆ ತರದಿರಲು ನಿರ್ಣಯ ಕೈಗೊಳ್ಳುವಂತೆ ಎಸ್.ಡಿ.ಪಿ. ಒಳಮೊಗ್ರು ಗ್ರಾಮ ಸಮಿತಿ ವತಿಯಿಂದಲೂ ಮಾ.೧೯ರಂದು ಮನವಿ ಸಲ್ಲಿಸಲಾಯಿತು. ಎಸ್.ಡಿ.ಪಿ.ಐ ಒಳಮೊಗ್ರು ಗ್ರಾಮ ಸಮಿತಿ ಅಧ್ಯಕ್ಷ ಫಾರೂಕ್ ಪಿ.ಎಸ್, ಉಪಾಧ್ಯಕ್ಷ ಎಸ್ ಎಂ ಮಹಮ್ಮದ್, ಕೋಶಾಧಿಕಾರಿ ಅಶ್ರಫ್ ಕಾರ್ಯಕರ್ತರಾದ ಮಹಮ್ಮದ್ ಶಾಕೀರ್, ಅಬ್ದುಲ್ ಜಲೀಲ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.