ಯಕ್ಷಗಾನ ಪ್ರದರ್ಶನಕ್ಕೂ ಮುಳ್ಳಾಯಿತು ಕೊರೊನಾ.. ಯಕ್ಷ ಕಲಾವಿದರ ಬದುಕಿಗೆ ಬಿತ್ತು ಕೊಡಲಿಯೇಟು… ರದ್ದುಗೊಂಡ ಎಲ್ಲಾ ಮೇಳಗಳ ಪ್ರದರ್ಶನ…

Puttur_Advt_NewsUnder_1
Puttur_Advt_NewsUnder_1

✍...ಶರತ್ ಆಳ್ವ ಚನಿಲ

  • ಶಾಲಾ ಕಾಲೇಜುಗಳಲ್ಲಿ ಯಕ್ಷಗಾನ ಪ್ರದರ್ಶನ ರದ್ದು…!
  • ಯಕ್ಷಗಾನವನ್ನೇ ನಂಬಿದ್ದವರಿಗೆ ಬದುಕಿನ ದಾರಿ..?
  • ಮೇಳಗಳ ಹರಕೆ ಆಟಗಳಿಗೂ ನಿರ್ಬಂಧ..!
  • ಕಟೀಲು ಯಕ್ಷಗಾನ ಮೇಳದ ಬಗ್ಗೆ..!
  • ಸ್ಥಗಿತಗೊಂಡ ಯಕ್ಷಗಾನ ಮೇಳಗಳು..

 

 

ಹೌದು, ಕೊರೊನಾ ವೈರಸ್ ಸಾಂಸ್ಕೃತಿಕ ರಂಗಕ್ಕೂ ಮುಳ್ಳಾಗಿದ್ದಲ್ಲದೇ ಯಕ್ಷಲೋಕಕ್ಕೂ ಬಾಧೆಯಾಯಿತು. ಜನರು ಕಷ್ಟ ಬಂದಾಗ ಹರಕೆಯನ್ನು ಹೇಳಿ ಯಕ್ಷಗಾನ ಸೇವೆ ಮಾಡುವುದಕ್ಕೂ, ದೇವರ ಸೇವೆಗಾಗಿ ದೇವಾಲಯಕ್ಕೆ ಹೋಗುವುದಕ್ಕೂ ಅಡ್ಡಗಾಲಿಟ್ಟಿತು.

ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಕೊರೊನಾ ಯಾವುದೇ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ. ಅದು ಇಡೀ ಲೋಕಕ್ಕೆ ಬಂದಿರುವ ಕಂಟಕವಾಗಿರುವುದರಿಂದ ನಾವೆಲ್ಲರೂ ಅದರ ಬಗ್ಗೆ ಎಚ್ಚೆತ್ತುಕೊಳ್ಳುವುದು ಅಗತ್ಯ. ಅದಕ್ಕಾಗಿ ಸರಕಾರದ ಕಾನೂನು ಸಲಹೆಗಳನ್ನು ನಾವು ಪಾಲಿಸಬೇಕು. ಆರೋಗ್ಯವಿದ್ದರೆ ಮಾತ್ರ ಒಬ್ಬ ಕಲಾವಿದ ಗೆಜ್ಜೆ ಕಟ್ಟಿ ಕುಣಿಯಬಲ್ಲ, ಹಿಮ್ಮೇಳ ಅದಕ್ಕೆ ಸಾಥ್ ಕೋಡಬಹುದು. ಅದರಿಂದ ಬದುಕಿಗಾಗಿ ಕಲಾವಿದರು ಪರ‍್ಯಾಯ ಮಾರ್ಗವನ್ನು ಮಾಡಿಕೊಳ್ಳುವುದು ಸೂಕ್ತರವಿಚಂದ್ರ ಕನ್ನಡಿಕಟ್ಟೆ, ಪ್ರಸಿದ್ದ ಯಕ್ಷಗಾನ ಭಾಗವತರು ಶ್ರೀ ಕೋದಂಡರಾಮ ಯಕ್ಷಗಾನ ಮೇಳ, ಹನುಮಗಿರಿ.

ಕೊರೊನಾ ಕಂಟಕದಿಂದ ಯಕ್ಷಗಾನ ಪ್ರದರ್ಶನಗಳು ನಿಂತಿರುವುದು ಎಲ್ಲರೂ ಒಪ್ಪಬೇಕಾದ ವಿಚಾರ. ಇದು ಕಲಾವಿದರ ಜೀವ, ಜೀವನದ. ಯಕ್ಷಗಾನ ಪ್ರದರ್ಶನ ರದ್ದು ಮಾಡಿದ್ದು ಎಲ್ಲರ ಆರೋಗ್ಯಕ್ಕಾಗಿ ಮಾಡಿದ ಉದ್ದೇಶವಲ್ಲವೇ..ಜೀವನಕ್ಕಿಂತ ಮಿಗಿಲು ಮನುಷ್ಯನಿಗೆ ಯಾವುದಿದೆ. ಸರಕಾರದ ಆದೇಶ ಪಾಲಿಸೋಣಕೆ.ವೆಂಕಟೇಶ ಮಯ್ಯ, ಯಕ್ಷಗಾನ ಪ್ರಸಾಧನ ಗುರುನರಸಿಂಹ ಕಲಾಮಂಡಳಿ, ಖಂಡಿಗೆ, ಆರ‍್ಯಾಪು

ಮುಂಗಾರು ಮಳೆ ಮುಗಿದು ರೈತರ ಕೃಷಿ ಚಟುವಟಿಕೆ ಮುಗಿದ ನಂತರ ಆರಂಭಗೊಳ್ಳುವ ಯಕ್ಷಗಾನ ಪ್ರದರ್ಶನಗಳು ಮೇ ತಿಂಗಳಿನವರೆಗೂ ಇರುತ್ತದೆ. ಉಭಯ ಜಿಲ್ಲೆಗಳಲ್ಲಿ ಒಟ್ಟು ೩೦ಕ್ಕೂ ಅಧಿಕ ಯಕ್ಷಗಾನ ಮೇಳಗಳಿದ್ದು ಎಲ್ಲಾ ಯಕ್ಷಗಾನ ಮೇಳಗಳು ಸಕ್ರೀಯವಾಗಿತ್ತು. ಕಲಾಭಿಮಾನಿಗಳು ಅಲ್ಲಲ್ಲಿ ನಡೆಯುವ ಮೇಳದ ಯಕ್ಷಗಾನ ಪ್ರದರ್ಶನಗಳಿಗೆ ಹೋಗಿ ವೀಕ್ಷಣೆ ಮಾಡುತ್ತಿದ್ದರು. ಕೊರೊನಾ ಎಂಬ ಮಹಾ ಮಾರಿ ಪ್ರಪಂಚದಾದ್ಯಂತ ಸಂಚಲನ ಮಾಡುತ್ತಿದ್ದು ಇದರ ಭೀತಿ ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೂ ತಟ್ಟಿದ್ದು ಜಿಲ್ಲೆಯಾದ್ಯಂತ ಯಕ್ಷಗಾನ ಪ್ರದರ್ಶನ ರದ್ದಾಗಿದ್ದು ಯಕ್ಷ ಕಲಾಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಜಿಲ್ಲಾಡಳಿತದ ಆದೇಶದ ಮೇರೆಗೆ ಯಕ್ಷಗಾನ ಪ್ರದರ್ಶನ ನಿಂತಿದ್ದು, ದೊಡ್ಡ ಮೇಳದಿಂದ ಹಿಡಿದು ಸಣ್ಣ ಮೇಳದವರೆಗಿನ ಯಕ್ಷಗಾನ ಮೇಳಗಳು ತನ್ನ ಯಕ್ಷ ಕಲರವಕ್ಕೆ ವಿರಾಮವಿಟ್ಟಿದೆ. ಸದ್ಯ ಬಹುತೇಕ ಮೇಳದಲ್ಲಿ ಶಾಸ್ರ್ತೋಕ್ತ ಪ್ರಕಾರ ಪೂಜೆ ಮಾತ್ರ ನಡೆಯಲಿದ್ದು, ಪ್ರದರ್ಶನ ಮಾತ್ರ ರದ್ದಾಗಿದೆ.

ಶಾಲಾ ಕಾಲೇಜುಗಳಲ್ಲಿ ಯಕ್ಷಗಾನ ಪ್ರದರ್ಶನ ರದ್ದು…!
ಕೊರೊನಾದಿಂದ ಊರಿನ ಕಲಾವಿದರು ಮತ್ತು ಶಾಲಾ ವಿದ್ಯಾರ್ಥಿಗಳು ಸೇರಿಕೊಂಡು ಶಾಲೆಯಲ್ಲಿ ಯಕ್ಷಗಾನ ಪ್ರದರ್ಶನ ಮಾಡುವುದಕ್ಕೂ ಅವಕಾಶವಿಲ್ಲವಾಗಿದ್ದು ಈ ವರ್ಷ ವಿದ್ಯಾರ್ಥಿ ಯಕ್ಷಗಾನ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ. ಹಲವು ಶಾಲಾ ಕಾಲೇಜಿಗಳಲ್ಲಿ ಜೂನ್ ತಿಂಗಳಲ್ಲಿ ಯಕ್ಷಗಾನ ತರಗತಿ ಆರಂಭ ಮಾಡಿ ವಿದ್ಯಾರ್ಥಿಗಳೆಲ್ಲರು ಗುರು ಮುಖೇನ ಕಲಿತು ಯಕ್ಷಗಾನ ಪ್ರದರ್ಶನಕ್ಕೆ ಅಣಿಯಾಗಿದ್ದರು. ಆದರೆ ಕೊರೊನಾದಿಂದ ವಿದ್ಯಾರ್ಥಿಗಳ ಯಕ್ಷಗಾಕ್ಕೆ ಕುತ್ತು ಬಂದಿರುವುದು ಖೇದಕರ ಸಂಗತಿ.

ಯಕ್ಷಗಾನವನ್ನೇ ನಂಬಿದ್ದವರಿಗೆ ಬದುಕಿನ ದಾರಿ..?
, ಕಾಲೇಜು ವಾರ್ಷಿಕೋತ್ಸವ , ಸಂಘ ಸಂಸ್ಥೆಗಳ ವಾಷಿಕೋತ್ಸವದಲ್ಲಿ ನಡೆಯಬೇಕಿದ್ದ ಯಕ್ಷಗಾನ ಪ್ರದರ್ಶನಗಳು ಬಹುತೇಕ ರದ್ದುಗೊಂಡಿದ್ದು ಇದನ್ನೇ ನಂಬಿಕೊಂಡಿರುವ ಯಕ್ಷಗಾನ ಕಲಾವಿದರು, ಹಿಮ್ಮೇಳದವರು, ವೇಷಭೂಷಣದವರು ಆರ್ಥಿಕ ನಷ್ಠ ಅನುಭವಿಸುವಂತಾಗಿದೆ. ಯಕ್ಷಗಾನ ಪ್ರದರ್ಶನಗಳು ಸ್ಥಗಿತವಾಗಿರುವ ಕಾರಣ ಯಕ್ಷ ಕಲಾವಿದರು ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳ ಬೇಕಾಗಿದೆ.ಮಳೆಗಾಲದಲ್ಲಿ ದುಡಿಮೆ ಇಲ್ಲದೇ ಇರುವ ಯಕ್ಷ ಕಲಾವಿದರಿಗೆ ಈ 7ರಿಂದ 8 ತಿಂಗಳವರೆಗೆ ಮಾತ್ರ ದುಡಿಮೆಯ ಕಾಲಾವಧಿ ಇದು ಮಾತ್ರ. ಆದರೆ ಅವರ ಎರಡು ತಿಂಗಳ ದುಡಿಮೆಗೂ ಕೊರೊನಾ ಭೀತಿ ಆವರಿಸಿದ್ದು ಹೊಟ್ಟೆ ಪಾಡಿಗೆ ಮುಂದೇನು ಮಾಡುವುದೆಂದು ತಿಳಿಯದೆ ಕಂಗಾಲಾಗಿದ್ದೇವೆ ಎಂದು ಕಲಾವಿದರು. ಇನ್ನು ಕೆಲವು ಕಲಾವಿದರು ನಾವು ಬೇರೊಂದು ಪರ‍್ಯಾಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ ಎನ್ನುತ್ತಾರೆ.

ಮೇಳಗಳ ಹರಕೆ ಆಟಗಳಿಗೂ ನಿರ್ಬಂಧ..!
ಹರಕೆ ಆಟ ಬಿಟ್ಟರೆ ಮತ್ತೆ ಬೇರೆ ಯಾವುದೇ ಯಕ್ಷಗಾನ ಪ್ರದರ್ಶನಗಳೂ ಇಲ್ಲ. ಹರಕೆ ಆಟದಲ್ಲಿ ಮನೆ ಮಂದಿ ಮಾತ್ರ ಕುಳಿತು ನೋಡುವಂತಹ ಪರಿಸ್ಥಿತಿ ಇದೆಯೇ ಹೊರತು ಇತರೆ ಸಾರ್ವಜನಿಕರು ಮನೆ ಯಿಂದ ಹೊರಗೆ ಬರುವಲ್ಲಿ ಭೀತಿ ಎದುರಿಸುತ್ತಿದ್ದಾರೆ. ಇದೀಗ ಯಕ್ಷಗಾನ ಪ್ರದರ್ಶನ ಪೂರ್ತಿ ಸ್ಥಗಿತ ಆದೇಶ ಹೋರ ಬಿದ್ದಿರುವ ಹಿನ್ನೆಲೆಯಲ್ಲಿ ಮೇಳಗಳ ಕಲಾವಿದರು ಕಂಗೆಟ್ಟಿದ್ದಾರೆ.

ಯಕ್ಷಗಾನಕ್ಕೆ ನಿರ್ಬಂಧ ಇದೇ ಮೊದಲು..!
ಯಕ್ಷಗಾನ ಮೇಳಗಳು ದೇವಸ್ಥಾನಕ್ಕೆ ಸಂಬಂಧಿದಸಿದವುಗಲಾಗಿದ್ದು, ಒಂದು ಬಾರಿ ಮೇಳ ದೇವರ ಕ್ಷೇತ್ರ ಬಿಟ್ಟು ತಿರುಗಾಟಕ್ಕೆ ಹೊರಟರೆ ಮರಳುವುದು ತಿರುಗಾಟ ಮುಗಿದ ಬಳಿಕವೇ. ಇದೀಗ ನಿರ್ಬಂಧ ಜಾರಿಯಾಗಿರುವ ಹಿನ್ನಲೆಯಲ್ಲಿ ಮೇಳಗಳು ಪರ್ಯಾಯ ವ್ಯವಸ್ಥೆಯ ಬಗ್ಗೆ ಚಿಂತನೆಯಲ್ಲಿದೆ.

ಕಟೀಲು ಯಕ್ಷಗಾನ ಮೇಳದ ಬಗ್ಗೆ..!
ಕಟೀಲು ಆರು ಮೇಳಗಳ ಯಕ್ಷಗಾನ ಪ್ರದರ್ಶನ ತಾತ್ಕಾಲಿಕವಾಗಿ ಜಿಲ್ಲಾಧಿಕಾರಿ ಮುಂದಿನ ಆದೇಶದವರೆಗೆ ನಿಲ್ಲಿಸಲಾಗಿದೆ. ಆದರೆ ಯಕ್ಷಗಾನ ಮೇಳ ಸಂಪ್ರದಾಯ ಪ್ರಕಾರ ಗಜ್ಜೆ ಕಟ್ಟಿದ ದಿನದಿಂದ ತಿರುಗಾಟ ಮುಗಿಯುವವರೆಗೆ ಯಕ್ಷಗಾನ ನಿಲ್ಲಬಾರದೆಂಬ ನಂಬಿಕೆ ಇದೆ. ಇದೂ ಕೂಡ ದೇವರ ಪೂಜೆ ಎಂಬುದು ಇಲ್ಲಿಯ ನಂಬಿಕೆ. ತಿರುಗಾಟದಲ್ಲಿರುವ ಮೇಳದ ದೇವರಿಗೆ ಅರ್ಚಕರು ತ್ರಿಕಾಲಪೂಜೆ ಮಾಡುತ್ತಾರೆ. ರಂಗಸ್ಥಳದಲ್ಲಿ ಕಟ್ಟೇಶ(ಬಾಲಗೋಪಾಲ) ವೇಷದವರು ಕುಣಿದು ಆರತಿ ಮಾಡುತ್ತಾರೆ. ದೇವರ ಪೂಜಾ ರೂಪವಾದ ಯಕ್ಷಗಾನವನ್ನು ಮಾತ್ರ ಕಟೀಲು ರಥಬೀದಿಯಲ್ಲಿ ಬುಧವಾರದಿಂದ ನಡೆಸಲಾಗುತ್ತದೆ. ಸಂಜೆ 7 ಗಂಟೆಗೆ 6 ಮೇಳಗಳ ದೇವರ ಪೂಜೆಯನ್ನು ಬಿಡಾರದಲ್ಲಿಯೇ ನೆರವೇರಿಸಿ ಅಲ್ಲಿಂದ ರಂಗಸ್ಥಳಕ್ಕೆ ಬರಲಿದೆ. ಸೀಮಿತ ಹಾಡುಗಳ ನಂತರ ಕಟ್ಟೇಶ ಕುಣಿದಾಗ ೬ ಮೇಳದ ದೇವರು ರಂಗಸ್ಥಳಕ್ಕೆ ಬರಲಿದ್ದಾರೆ. ದೇವರ ಪೂಜೆ ಬಾಲ ಗೋಪಾಲ ವೇಷದವರು ನೆರವೇರಿಸಿದ ನಂತರ ಮೇಳದ ದೇವರ ಪೂಜಾವಿಧಿಗಳು ಶಾಸ್ತ್ರೋಕ್ತವಾಗಿ ಹಾಗೂ ಸಾಂಪ್ರದಾಯಿಕವಾಗಿ ಮುಗಿಯತ್ತವೆ, ಅಲ್ಲಿಗೆ ಯಕ್ಷಗಾನ ಮುಗಿಸಿ ದೇವರಿಗೆ ಬಿಡಾರದಲ್ಲಿ ಪುನಃ ಅರ್ಚಕರು ಪೂಜೆ ಮಾಡಿ ನಂತರ ಇಡೀ ಪ್ರಕ್ರಿಯೆ ಮುಗಿಯಲಿದೆ. ಇದೇ ರೀತಿ ಹೊಸ ಆದೇಶ ಬರುವವರೆಗೆ ಮುಂದುವರಿಯಲಿದೆ.

ಸ್ಥಗಿತಗೊಂಡ ಯಕ್ಷಗಾನ ಮೇಳಗಳು..
ಕಟೀಲು ಏಳು ಮೇಳಗಳು, ಧರ್ಮಸ್ಥಳ ಮೇಳ, ಕಮಲಶಿಲೆ ಮೇಳ, ಬಾಚಕರೆ ಮೇಳ, ಮೇಗರವಳ್ಳಿ, ಹಟ್ಟಿಯಂಗಡಿ, ಸಾಲಿಗ್ರಾಮ, ಮಡಾಮಕ್ಕಿ, ಹಾಲಾಡಿ, ಗೋಳಿಗರಡಿ, ಸೌಕೂರು ಮೇಳಗಳು ತಮ್ಮ ತಿರುಗಾಟವನ್ನು ಸ್ಥಗಿತಗೊಳಿಸಿವೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.