ಲಾವತ್ತಡ್ಕ: ಜಿಲೆಟಿನ್ ಕಡ್ಡಿಯ ಅಕ್ರಮ ಸಾಗಾಟ – ಇಬ್ಬರ ಬಂಧನ

Puttur_Advt_NewsUnder_1
Puttur_Advt_NewsUnder_1

ಕಡಬ: ಠಾಣಾ ವ್ಯಾಪ್ತಿಯ ಲಾವತ್ತಡ್ಕದ ಹೋಟೆಲ್‌ವೊಂದಕ್ಕೆ, ಜಿಲೆಟಿನ್ ಕಡ್ಡಿಯನ್ನು ಅಕ್ರಮವಾಗಿ ಸರಬರಾಜು ಮಾಡಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಕಡಬ ಪೊಲೀಸರು ಮಾ.19ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸೋಮವಾರಪೇಟೆ ನಿವಾಸಿ ಚಂದ್ರ(60 ವ) ಹಾಗೂ ಸಕಲೇಶಪುರ ನಿವಾಸಿ ನಿತ್ಯಾನಂದ (28 ವ) ಎಂದು ಗುರುತಿಸಲಾಗಿದೆ. ಲಾವತ್ತಡ್ಕದ ಹೊಟೇಲಿನಲ್ಲಿ ಜಿಲೆಟಿನ್ ಕಡ್ಡಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದ ಕಡಬ ಪೊಲೀಸರು ಅಕ್ರಮ ವಸ್ತುಗಳನ್ನು ವಶಪಡಿಸಿಕೊಂಡು ಹೊಟೇಲ್ ಮಾಲಕನನ್ನು ಬಂಧಿಸಿದ್ದರು. ಪ್ರಕರಣ ಸಂಬಂಧ ತನಿಖೆ‌ ನಡೆಸಿದ ಪೊಲೀಸರು ಆರೋಪಿಗೆ ಜಿಲೆಟಿನ್ ಕಡ್ಡಿಗಳನ್ನು ಸರಬರಾಜು ಮಾಡುತ್ತಿದ್ದ ಕಲ್ಲು ಕೋರೆಯ ಕಾರ್ಮಿಕ ಚಂದ್ರ ಹಾಗೂ ನಿತ್ಯಾನಂದನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.