ಮರದಲ್ಲೇ ಕೊಕ್ಕರೆಗಳ ನಿಗೂಢ ಸಾವು!! ಕೊರೊನಾ, ಹಕ್ಕಿ ಜ್ವರವೋ, ಬಿಸಿಲ ತಾಪವೂ, ಕೊಕ್ಕರೆಗಳ ಕಾದಾಟವೋ !

Puttur_Advt_NewsUnder_1
Puttur_Advt_NewsUnder_1
  • ಸಾರ್ವಜನಿಕ ವಲಯದಲ್ಲಿ ಭಯದ ವಾತಾವರಣ

ಪುತ್ತೂರು: ಒಂದು ಕಡೆ ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಸ್ ಸೋಂಕಿನ ಭಯ, ಇನ್ನೊಂದೆ ಹಕ್ಕಿ ಜ್ವರ ಅಥವಾ ಏವಿಯನ್ ಇನ್ಫ್ಲೂಯೆಂಜಾ ಎಂಬ ಮಾರಕ ವೈರಸ್ ನಡುವೆ ಪುತ್ತೂರಿನ ಗಾಂಧಿಕಟ್ಟೆಯ ಬಳಿಯ ಆಶ್ವತ್ಥ ಮರದಲ್ಲಿ ಹಾಗೂ ರೈಲ್ವೇ ನಿಲ್ದಾಣ ಬಳಿಯ ಅಶ್ವತ್ಥ ಮರದಲ್ಲೇ ಬಿಳಿ ಕೊಕ್ಕರೆಗಳು ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. ಇದೀಗ ಕೊರೊನಾ ವೈರಸ್, ಹಕ್ಕಿ ಜ್ವರವೋ ಅಥವಾ ಕೊಕ್ಕರೆಗಳ ಕಾದಾಟದಿಂದ ಕೊಕ್ಕರೆಗಳು ಮೃತಪಟ್ಟಿರಬಹುದೇ ಅಥವಾ ಬಿಸಿಲ ತಾಪವನ್ನು ತಡೆದುಕೊಳ್ಳಲಾರದೆ ಮೃತಪಟ್ಟಿರಬಹುದೇ ಎಂಬ ವಿಚಾರ ಬೆಳಕಿಗೆ ಬರಬೇಕಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

 

ಪುತ್ತೂರಿನ ಇತಿಹಾಸ ಪ್ರಸಿದ್ಧ ಗಾಂಧಿಕಟ್ಟೆಯ ಬಳಿ ಇರುವ ಅಶ್ವತ್ಥ ಮರದಲ್ಲಿ ಕಳೆದ ಎರಡು ದಿನಗಳಿಂದ ಬಿಳಿ ಕೊಕ್ಕರೆಯೊಂದರ ಕಳೇಬರ ಮರದ ಗೆಲ್ಲಿನಲ್ಲಿ ನೇತಾಡುತ್ತಿದೆ. ಇದೇ ರೀತಿ ಪುತ್ತೂರು ರೈಲ್ವೇ ನಿಲ್ದಾಣದಲ್ಲಿರುವ ಅಶ್ವತ್ಥ ಮರದ ತುದಿಯ ಗೆಲ್ಲಿನಲ್ಲಿ ಕೊಕ್ಕರೆಯ ಕಳೇಬರ ನೇತಾಡುತ್ತಿದೆ. ಎರಡೂ ಮರಗಳಲ್ಲಿ ಬಹುತೇಕ ಕೊಕ್ಕರೆಗಳ ಗೂಡುಗಳೂ ಇವೆ. ಇದೀಗ ಹಕ್ಕಿ ಜ್ವರ ಭೀತಿಯ ಹಿನ್ನೆಲೆಯಲ್ಲಿ ಕೊಕ್ಕರೆಯ ಸಾವಿಗೆ ಕಾರಣ ಏನೆಂಬುದು ಪತ್ತೆ ಮಾಡಬೇಕಾಗಿದೆ.

ಹಕ್ಕಿ ಜ್ವರ ಹಾರುವ ಹಕ್ಕಿಗಳ ಮೂಲಕ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಅತಿ ಶೀಘ್ರವಾಗಿ ಹರಡುತ್ತದೆ. ಇದರ ಜೊಲ್ಲು, ಉಚ್ಛಿಷ್ಟಗಳನ್ನು ಸ್ಪರ್ಶಿಸಿದ ಮಾನವರಿಗೂ ಸುಲಭವಾಗಿ ಸೋಂಕು ತಗಲುವ ಸಾದ್ಯತೆ ಇದೆ. ಸೋಂಕುಪೀಡಿತ ಹಕ್ಕಿಯಿಂದ ಇತರ ಹಕ್ಕಿಗಳಿಗೆ ಮತ್ತು ಹಕ್ಕಿಗಳಿಂದ ಇವುಗಳ ನಿಕಟ ಸಂಪರ್ಕದಲ್ಲಿರುವ ಮನುಷ್ಯರಿಗೂ ಹರಡುತ್ತದೆ. ಪ್ರಸ್ತುತ ಭಾರತದಲ್ಲಿ ಕೊರೋನಾ ಜೊತೆಗೇ ಈ ವೈರಸ್ಸಿನ ಹಾವಳಿಯೂ ಪ್ರಾರಂಭವಾಗಿದೆ. ಸೋಂಕು ತಗುಲಿರುವ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳೆಂದರೆ ಕೆಮ್ಮು, ಜ್ವರ, ಹೊಟ್ಟೆ ನೋವು, ಸ್ನಾಯುಗಳ ನೋವು ಮತ್ತು ಅತಿಸಾರ. ಕೆಲವು ರೋಗಿಗಳಿಗೆ ಉಸಿರಾಟದಲ್ಲಿ ತೊಂದರೆ, ಉಸಿರು ತೆಗೆದುಕೊಳ್ಳಲು ಕಷ್ಟಕರವಾಗುವುದು, ನ್ಯುಮೋನಿಯಾ ಮತ್ತು ಪ್ರಬಲ ಶ್ವಾಸಕೋಶದ ತೊಂದರೆಗಳೂ ಎದುರಾಗಬಹುದು.

ಕಳೆದ ವರ್ಷ ಕೊಕ್ಕರೆ ಮರಿಗಳ ಸಾವು:
ಕಳೆದ ವರ್ಷ ಗಾಂಧಿ ಕಟ್ಟೆಯಲ್ಲಿರುವ ಅಶ್ವತ್ಥ ಮರದಲ್ಲಿ ಆಫ್ರಿಕನ್ ಕೊಕ್ಕರೆ ಮರಿಗಳು ಮೃತಪಟ್ಟಿದ್ದವು. ಹಲವು ದಶಕಗಳಿಂದ ಪ್ರತಿ ವರ್ಷ ಮಳೆಗಾಲದಲ್ಲಿ ಪುತ್ತೂರಿಗೆ ವಲಸೆ ಬರುತ್ತಿರುವ ರೀಪ್ ಎಗ್ರೆಟ್ ಮತ್ತು ಎಗ್ರೆಟಾ ಗುಲಾರಿಸ್ ಎನ್ನುವ ಹೆಸರಿನ ಆಫ್ರಿಕಾ ಮೂಲದ ಕೊಕ್ಕರೆಗಳು ಮರದಲ್ಲಿ ಮೊಟ್ಟೆ ಇತ್ತು ಸಂತಾನೋತ್ಪತಿ ಮಾಡುತ್ತಿದ್ದವು. ಈ ನಡುವೆ ಮಳೆಗಾಲದಲ್ಲಿ ಅನೇಕ ಮರಿಗಳು ಮರದಿಂದ ಬಿದ್ದು ಮೃತಪಟ್ಟಿದ್ದವು. ಆದರೆ ಆ ವೇಳೆ ಹಕ್ಕಿ ಮರಿಗಳು ಹಾರಾಡುವ ಪ್ರಯತ್ನದಲ್ಲಿ ಕೆಳಗೆ ಬಿದ್ದು ಮೃತಪಟ್ಟಿರಬಹುದೆಂದು ಹೇಳಲಾಗಿತ್ತು. ಆದರೆ ಇದೀಗ ದೊಡ್ಡ ದೊಡ್ಡ ಕೊಕ್ಕರೆಗಳೇ ಮರದಲ್ಲೆ ಸತ್ತು ನೇತಾಡುತ್ತಿರುವುದು ಬೆಳಕಿಗೆ ಬಂದಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.