ಕೌಕ್ರಾಡಿ ಬರೆಗುಡ್ಡೆಯಲ್ಲಿ ಬೆಂಕಿ ಆಕಸ್ಮಿಕ ರಬ್ಬರ್ ಗಿಡಗಳು ಬೆಂಕಿಗಾಹುತಿ-ಅಪಾರ ನಷ್ಟ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಕೌಕ್ರಾಡಿ ಗ್ರಾಮದ ಬರೆಗುಡ್ಡೆಯಲ್ಲಿ ಬೆಂಕಿ ಆಕಸ್ಮಿಕದಿಂದ ಸುಮಾರು 1 ಎಕ್ರೆ ಜಾಗದಲ್ಲಿದ್ದ ರಬ್ಬರ್‌ಗಿಡಗಳು ಬೆಂಕಿಗಾಹುತಿಯಾಗಿರುವ ಘಟನೆ ಮಾ.19ರಂದು ಮಧ್ಯಾಹ್ನ ನಡೆದಿದೆ. ಘಟನೆಯಿಂದಾಗಿ ಲಕ್ಷಾಂತರ ರೂ.ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.
ಕೌಕ್ರಾಡಿ ಗ್ರಾಮದ ಬರೆಗುಡ್ಡೆ ನಿವಾಸಿ ದಿವಂಗತ ಡಾ.ವೇಳಾಯುಧನ್ ಪಿಳ್ಳೆ ಎಂಬವರ ಪುತ್ರಿಯರಾದ ಶ್ರೀಮತಿ ಲತಾ, ಶ್ರೀಮತಿ ರಮಾ ಎಂಬವರಿಗೆ ಸೇರಿದ ಸುಮಾರು ಒಂದೂವರೇ ಎಕ್ರೆ ಜಾಗಕ್ಕೆ ಬೆಂಕಿಬಿದ್ದಿದ್ದು ಈ ಪೈಕಿ ಸುಮಾರು 1 ಎಕ್ರೆ ಜಾಗದಲ್ಲಿದ್ದ ರಬ್ಬರ್ ಗಿಡಗಳು ಬೆಂಕಿಗಾಹುತಿಗೊಂಡಿವೆ ಎಂದು ವರದಿಯಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪುತ್ತೂರು ಅಗ್ನಿಶಾಮಕ ದಳ, ನೆಲ್ಯಾಡಿ ಹೊರಠಾಣೆ ಪೊಲೀಸರು ಹಾಗೂ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಲಾಗಿದೆ. ಜಿ.ಪಂ.ಸದಸ್ಯ ಸರ್ವೋತ್ತಮ ಗೌಡ, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಎಂ.ಕೆ.ಇಬ್ರಾಹಿಂ, ನೆಲ್ಯಾಡಿ ಗ್ರಾ.ಪಂ.ಸದಸ್ಯ ಕೆ.ಪಿ.ಅಬ್ರಹಾಂ, ಇಂಜಿನಿಯರ್ ಚಾಕೋ, ಬೀಬು ಕೌಕ್ರಾಡಿ, ಸತೀಶ್ ಭಟ್ ದುರ್ಗಾಶ್ರೀ ಸೇರಿದಂತೆ ಹಲವು ಮಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಲು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.