Breaking News

ಕೊಂಬಾರು ಗ್ರಾ.ಪಂ.: ಆಧಾರ್ ನೋಂದಣಿ, ತಿದ್ದುಪಡಿ ಆದಾಲತ್

Puttur_Advt_NewsUnder_1
Puttur_Advt_NewsUnder_1

ಕಡಬ: ಭಾರತೀಯ ಅಂಚೆ ಇಲಾಖೆ ಪುತ್ತೂರು ಇದರ ಸಹಯೋಗದಲ್ಲಿ ಕೊಂಬಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹೊಸ ಆಧಾರ್ ನೊಂದಣಿ ಮತ್ತು ಆಧಾರ್ ತಿದ್ದುಪಡಿ ಅದಾಲತ್ ಕೊಂಬಾರು ಗ್ರಾ.ಪಂ.ನಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ಎಸ್.,ರವರು ಉದ್ಘಾಟಿಸಿ ಮಾತನಾಡಿ, ಗ್ರಾಮಸ್ಥರು ಆಧಾರ್ ನೋಂದಾವಣೆಗಾಗಿ ಕಡಬ ಮತ್ತು ಇನ್ನಿತರ ಭಾಗಗಳಲ್ಲಿ ಹೊಗಿ ವಾಪಾಸಾಗುತ್ತಿರುವುದನ್ನು ಮನಗಂಡು ಗ್ರಾಮ ಪಂಚಾಯತ್ ವತಿಯಿಂದ ಭಾರತೀಯ ಅಂಚೆ ಇಲಾಕೆಯ ಸಹಯೋಗದಲ್ಲಿ ಆಧಾರ್ ಅದಾಲತ್ ಶಿಬಿರವನ್ನು ಏರ್ಪಡಿಸಿದ್ದೇವೆ ಎಂದರು. ಭಾರತೀಯ ಅಂಚೆ ಇಲಾಖೆಯ ಸುಳ್ಯ ವಿಭಾಗದ ಉಪ ವಿಭಾಗ ನಿರೀಕ್ಷಕ ಸುದೀಪ್ ಕುಮಾರ್‌ರವರು ಮಾತನಾಡಿ, ಸಾರ್ವಜನಿಕ ಹಿತಾಸಕ್ತಿಯಿಂದ ಅಂಚೆ ಇಲಾಖೆಯಿಂದ ವಿವಿಧ ಕಡೆಗಳಲ್ಲಿ ಆಧಾರ್ ಅದಾಲತ್ ನಡೆಸಲಾಗಿದೆ ಎಂದು ತಿಳಿಸಿ ಭಾರತೀಯ ಅಂಚೆ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿ ನೀಡಿದರು. ಫೆ.೧೮, ೧೯, ಮಾ.೯ ಹಾಗೂ ೧೦ರಂದು ನಡೆದ ಆಧಾರ್ ತಿದ್ದುಪಡಿ ಅದಾಲತ್‌ನ್ನು ಸುಮಾರು ೬೦೦ ಜನರು ಸದುಪಯೋಗ ಪಡಿಸಿಕೊಂಡರು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ ರಾಮಚಂದ್ರ ಗೌಡ, ಸದಸ್ಯರಾದ ಲಲಿತಾ, ಮಧುಸೂದನ್, ದೇವಕಿ, ಸುಜಾತಾ, ಪುರುಷೋತ್ತಮ ಉಪಸ್ಥಿತರಿದ್ದರು. ಭಾರತೀಯ ಅಂಚೆ ಇಲಾಖೆಯ ಆಧಾರ್ ನೊಂದಣಿ ಸಿಬ್ಬಂದಿಗಳಾದ ನಿಶಿತ್ ಸುಬ್ರಹ್ಮಣ್ಯ, ಉದಯ ಕಡಬ, ಕೃಪೇಶ್ ನಾಯರ್ ಸುಳ್ಯ, ಭಾರತೀಯ ಅಂಚೆ ಇಲಾಖೆಯ ಸುಳ್ಯ ಉಪ ವಿಭಾಗದ ಮೇಲ್ವಿಚಾರಕರುಗಳಾದ ಬಾಬು ಸುಳ್ಯ, ಆನಂದ ಗೌಡ ಸುಳ್ಯ ಮತ್ತು ಅಂಚೆ ಇಲಾಖೆಯ ಸಿಬ್ಬಂದಿಗಳು ಸಹಕರಿಸಿದರು. ಪ್ರಭಾರ ಪಂಚಾಯತ್ ಅಭಿವೃದ್ದಿ ಅಧಿಕಾರಿ ರಾಘವೇಂದ್ರ ಗೌಡರವರು ಸ್ವಾಗತಿಸಿ ಕಾರ್‍ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.