ಕೆಮ್ಮಾಯಿ: ಚರಂಡಿಯಲ್ಲಿ ಮಡುಗಟ್ಟಿದ ತ್ಯಾಜ್ಯ ನೀರು -ಸಾಂಕ್ರಾಮಿಕ ರೋಗ ಹರಡುವ ಭೀತಿ!

Puttur_Advt_NewsUnder_1
Puttur_Advt_NewsUnder_1
  • ಚರಂಡಿಗೆ ತ್ಯಾಜ್ಯ ನೀರು ಬಿಡದಂತೆ ನಗರಸಭೆಯಿಂದ ಎಚ್ಚರಿಕೆ

ಪುತ್ತೂರು: ಪುತ್ತೂರು-ಉಪ್ಪಿನಂಗಡಿ ಹೆದ್ದಾರಿಯ ಕೆಮ್ಮಾಯಿ ಸಮೀಪ ರಸ್ತೆ ಬದಿಯ ಚರಂಡಿಯಲ್ಲಿ ಸರಾಗವಾಗಿ ನೀರು ಹರಿಯದೆ ಮಡುಗಟ್ಟಿ ನಿಂತಿದ್ದಲ್ಲದೆ ಚರಂಡಿ ನೀರು ಪಾಚಿಕಟ್ಟಿ ನಿಂತು ಗಬ್ಬು ಬೀರುತ್ತಿತ್ತು. ಸಾಂಕ್ರಾಮಿಕ ರೋಗ ಹರಡುವ ಭೀತಿ ಜನರಲ್ಲಿ ಭಯ ಉಂಟುಮಾಡಿತ್ತು. ಮಾಹಿತಿ ಅರಿತ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚರಂಡಿಗಳಿಗೆ ತ್ಯಾಜ್ಯ ನೀರು ಬಿಡುವ ಮನೆ, ಅಂಗಡಿಗಳಿಗೆ ನೋಟೀಸ್ ಮಾಡುವುದೆಂದು ಎಚ್ಚರಿಕೆ ನೀಡಿದ ಘಟನೆ ನಡೆಯಿತು. ಕಸಗಳನ್ನು ಎಲ್ಲೆಂದರಲ್ಲಿ ಎಸೆಯದೆ ಕಸದ ಬುಟ್ಟಿಗೆ ತಂದು ಹಾಕಿ ಸ್ವಚ್ಛತೆ ಕಾಪಾಡುವಂತೆ ಅಂಗಡಿ ಮಾಲಕರಿಗೆ ಎಚ್ಚರಿಕೆ ನೀಡಿದ್ದಾರೆ.

ಮನೆ, ಅಂಗಡಿ, ಹೊಟೇಲ್‌ಗಳಿಂದ ಬಂದ ಕೊಳಚೆ ನೀರು ಚರಂಡಿಗಳಲ್ಲಿ ಸಂಗ್ರಹವಾಗಿ ಸೊಳ್ಳೆಗಳ ಕಾಟ ಮಿತಿಮೀರಿದ್ದು, ಕೊರೊನಾ ವೈರಸ್ ಸೋಂಕು ಭೀತಿಯ ಮುಂದೆ ಸಾಂಕ್ರಾಮಿಕ ರೋಗ ಹರುಡುವ ಭಯದಿಂದ ಸಾರ್ವಜನಿಕ ವಲಯದಿಂದ ನಗರಸಭೆಗೆ ದೂರು ಬಂದಿತ್ತು. ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿಯವರು ಸ್ಥಳಕ್ಕೆ ಭೇಟಿ ನೀಡಿ ಚರಂಡಿ ಇರುವುದು ಮಳೆಗಾಲದ ನೀರು ಹೋಗಲು ಮನೆ ಹೊಟೇಲ್‌ಗಳ ಕೊಳಚೆ ನೀರನ್ನು ಬಿಡಲು ಅಲ್ಲ. ಯಾರೂ ಕೂಡಾ ಚರಂಡಿಗೆ ತ್ಯಾಜ್ಯ ನೀರು ಬಿಡಬಾರದು ಎಂದು ಎಚ್ಚರಿಕೆ ನೀಡಿದರು. 

ಜೆಸಿಬಿಯಿಂದ ತ್ಯಾಜ್ಯ ಮೇಲೆತ್ತುವ ಕೆಲಸ:
ಚರಂಡಿಯಲ್ಲಿ ತುಂಬಿದ ತ್ಯಾಜ್ಯದಿಂದಾಗಿ ನೀರು ಹರಿಯದೆ ಮಡುಗಟ್ಟಿದೆ. ಇದನ್ನು ಜೆಸಿಬಿ ಮೂಲಕ ತೆರವು ಮಾಡುವ ಕೆಲಸ ಆಗಲಿದೆ. ಜೊತೆಗೆ ಯಾರೆಲ್ಲಾ ಚರಂಡಿಗೆ ತ್ಯಾಜ್ಯ ನೀರು ಬಿಡುತ್ತಾರೋ ಅವರಿಗೆ ನೋಟೀಸ್ ಮಾಡಲಾಗುವುದು – ರೂಪಾ ಶೆಟ್ಟಿ, ಪೌರಾಯುಕ್ತರು ನಗರಸಭೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.