ಪಾಣಾಜೆ ಗ್ರಾಮ ಪಂಚಾಯತ್ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆ

Puttur_Advt_NewsUnder_1
Puttur_Advt_NewsUnder_1

ನಿಡ್ಪಳ್ಳಿ; ಪಾಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ  2019-20 ನೇ ಸಾಲಿನ ದ್ವಿತೀಯ ಹಂತದ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆ ಮಾ.18 ರಂದು ಸುಬೋಧ ಪ್ರೌಢಶಾಲೆ ಪಾಣಾಜೆ ಇಲ್ಲಿ ನಡೆಯಿತು.

ಉದ್ಯೋಗ ಖಾತರಿ ಯೋಜನೆಯ ತಾಲೂಕು ಸಂಯೋಜಕ ಚಂದ್ರಶೇಖರ ಸಾಮಾಜಿಕ ಪರಿಶೋಧನೆಯ ಮಾಹಿತಿ ನೀಡಿದರು. ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಈ ಯೋಜನೆಯ ಪ್ರಯೋಜನ ಪಡೆದು ಕೊಳ್ಳುವಂತೆ ತಿಳಿಸಿದರು.  ಹಿಂದುಳಿದ ವರ್ಗಗಳ ಇಲಾಖೆ ಪುತ್ತೂರು ಇದರ ತಾಲೂಕು ವಿಸ್ತರಣಾಧಿಕಾರಿ ಜೋಸೆಫ್ ಪಿ.ಎಸ್ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು.

ಪಂಚಾಯತ್ ಅಧ್ಯಕ್ಷ ನಾರಾಯಣ ಪೂಜಾರಿ, ಸದಸ್ಯರಾದ ಜಗನ್ಮೋಹನ ರೈ ಕೆದಂಬಾಡಿ, ಮಮತಾ ಸುಡ್ಕುಳಿ,ಮೈಮುನಾತುಲ್ ಮೆಹ್ರಾ, ಯಶೋಧ ಉಡ್ಡಂಗಳ, ರತ್ನಕುಮಾರಿ ಹಾಗೂ ಫಲಾನುಭವಿಗಳು ಹಾಜರಿದ್ದರು.

ಪಿಡಿಒ ಚಂದ್ರಮತಿ ಸ್ವಾಗತಿಸಿ ವಂದಿಸಿದರು. ಸಿಬ್ಬಂದಿಗಳಾದ ವಿಶ್ವನಾಥ, ಅರುಣ್ ಕುಮಾರ್, ಸೌಮ್ಯಲತಾ, ರೂಪಶ್ರೀ ಸಹಕರಿಸಿದರು. ವರದಿ ಸಾಲಿನಲ್ಲಿ  ರೂ. 455034 ಕೂಲಿ ವೆಚ್ಚ, ರೂ.505454 ಸಾಮಾಗ್ರಿ ವೆಚ್ಚ ತಗುಲಿದ್ದು ಒಟ್ಟು ರೂ. 960488 ವೆಚ್ಚವಾಗಿದೆ. ಅಲ್ಲದೆ ಒಟ್ಟು 1806 ಮಾನವ ದಿನಗಳು ಸೇರಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.