ಬೀರಿಗ ಅಂಗನವಾಡಿ ಕೇಂದ್ರದಲ್ಲಿ ಕೊರೋನಾ ವೈರಸ್ ಜಾಗೃತಿ ಅಭಿಯಾನ

ಪುತ್ತೂರು: ಚಿಕ್ಕಮುಡ್ನೂರು ಬೀರಿಗ ಅಂಗನವಾಡಿ ಕೇಂದ್ರದಲ್ಲಿ ಮಾ.20ರಂದು ಜನಶಿಕ್ಷಣ ಟ್ರಸ್ಟ್,  ಆರೋಗ್ಯ ಇಲಾಖೆ,   ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ವತಿಯಿಂದ ನೋವೆಲ್ ಕೊರೋನಾ ವೈರಸ್  ತಡೆ ಜಾಗೃತಿ ಅಭಿಯಾನ ಕಾರ್ಯಕ್ರಮ  ನಡೆಯಿತು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪದ್ಮಾವತಿಯವರು ಕೊರೋನಾ ವೈರಸ್ ನ್ನು ತಡೆಗಟ್ಟುವ ಬಗ್ಗೆ ಸ್ವಸಹಾಯ ಸಂಘದ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಆಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ  ಹಾಗೂ ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿಯವರು ಕೊರೋನಾ ವೈರಸ್ ನ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ರತ್ನಾಕರ ಪ್ರಭು, ಗಿರಿಜಾ ಅನಂತಿಮಾರು, ಲತಾ, ಶುಭಾ ಉಪಸ್ಥಿರಿದರು. ಚಿಕ್ಕಮುಡ್ನೂರು ಶಾಲಾ ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಮಾಲತಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಲಲಿತಾ, ಸೆಕ್ಟೋ ಫೌಂಡೇಷನ್ ನ ಸುಧಾಕರ್ ಶೆಟ್ಟಿ, ಸಂಪ್ರೀತ್ ರೈ, ಅಂಗನವಾಡಿ ಮೇಲ್ವಿಚಾರಕಿ ಹರಿಣಾಕ್ಷಿ, ಜನಶಿಕ್ಷಣ ಟ್ರಸ್ಟ ನ ನಿರ್ದೇಶಕ ಕೃಷ್ಣ ಮೂಲ್ಯ, ಅಂಗನವಾಡಿ ಕಾರ್ಯಕರ್ತೆಯರಾದ  ಅರುಣಾ ಬೀರ್ನಹಿತ್ಲು, ಭಾರತಿ ಗುಂಡಿಜಾಲು, ರೇಖಾ ಬೇರಿಕೆ, ರೇವತಿ ಕೊಡಿಮರ, ಆರೋಗ್ಯ ಕಾರ್ಯಕರ್ತೆ ದಮಯಂತಿ, ಆಶಾ ಕಾರ್ಯಕರ್ತೆಯರಾದ ಸಂಧ್ಯಾ, ಚಂದ್ರಾವತಿ, ಬನ್ನೂರು, ಪಡ್ನೂರು, ಚಿಕ್ಕಮುಡ್ನೂರು ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಅರುಣಾ ಬೀರಿಗ ಸ್ವಾಗತಿಸಿ ವಂದಿಸಿದರು. ಸಹಾಯಕಿ ಸಂಧ್ಯಾ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.