ಅರಣ್ಯವಿಲ್ಲದೆ ಬದುಕಬಲ್ಲನೇ ಮಾನವ….

Puttur_Advt_NewsUnder_1
Puttur_Advt_NewsUnder_1

ಕಾಡು ಬೆಳೆಸಿ ನಾಡು ಉಳಿಸಿ ಎಂಬ ಮಾತು ಪ್ರತಿದಿನ ನಮ್ಮ ಕಿವಿಗೆ ಬೀಳುತ್ತಿರುತ್ತದೆ. ಆದರೆ ಕಾಡಿನಿಂದ ಉಂಟಾಗುವ ಅನುಕೂಲಗಳ ಪರಿವೇ ಇಲ್ಲದ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಕಾಡಿನ ನಾಶಕ್ಕೆ ಹೊರಟಿದ್ದಾನೆ. ಮನುಷ್ಯನ ಸ್ವಾರ್ಥ ಪ್ರಕೃತಿಯ ವಿರುದ್ಧವಾಗಿರುವುದರಿಂದ ಕಾಡಿನ ನಾಶ ಇಂದು ಮಿತಿಮೀರಿ ಪ್ರಕೃತಿ ಜನಶಕ್ತಿಯನ್ನು ತೋರ್ಪಡಿಸುತ್ತದೆ.

ಅರಣ್ಯದ ಮಹತ್ವ: ನಿಸರ್ಗದ ಅತ್ಯಮೂಲ್ಯವಾದ ಕೊಡುಗೆಯೇ ಅರಣ್ಯ. ಮನುಷ್ಯ ಕಾಡು ಪ್ರಾಣಿಗಳು ಪಕ್ಷಿಗಳು ಮತ್ತು ಕೀಟಗಳ ಅಳಿವು-ಉಳಿವು ಅರಣ್ಯದ ಅಸ್ತಿತ್ವದ ಮೇಲೆ ನಿಂತಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಅರಣ್ಯಗಳು ಕಣ್ಮರೆಯಾಗುತ್ತದೆ ಇದರ ಜೊತೆಗೆ ಹಲವಾರು ರೀತಿಯ ಮರಗಳು ಹಲವು ರೀತಿಯ ಸಸ್ಯವರ್ಗಗಳು ನಾಶವಾಗುವುದರಿಂದಿಗೆ ಪ್ರಾಣಿ-ಪಕ್ಷಿಗಳು ಅವನತಿಯತ್ತ ಸಾಗುತ್ತಿದೆ.

ಅರಣ್ಯವು ಮಾನವರಿಗೆ ತುಂಬಾ ಅನುಕೂಲಕರವಾಗಿದೆ ಅರಣ್ಯ ಮತ್ತು ಮಾನವ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಕಾಡು ಮಳೆಯನ್ನು ಆಕರ್ಷಿಸುತ್ತದೆ ಮತ್ತು ನಮಗೆ ಕಾಲಕಾಲಕ್ಕೆ ಮಳೆ ಬರುವಂತೆ ಮಾಡುತ್ತದೆ ಇದರಿಂದಾಗಿ ರೈತರು ಉತ್ತಮವಾಗಿ ಕೃಷಿ ಮಾಡಬಹುದು. ಕಾಡು ಹೆಚ್ಚೆಚ್ಚು ಬೆಳೆಸಿದಂತೆ ವಾತಾವರಣದಲ್ಲಿ ಆಮ್ಲಜನಕ ಹೇರಳವಾಗಿ ದೊರೆಯುವಂತಾಗುತ್ತದೆ ಮಾತ್ರವಲ್ಲದೆ ಆಗಸದಿಂದ ಬೀಳುವ ಮಳೆಯ ಹನಿಗಳು ಭೂಮಿಗೆ ನೇರವಾಗಿ ಇಂಗಲು ಸಹಾಯ ಮಾಡುತ್ತದೆ. ಒಂದು ಮರ ಬೆಳೆಯಲು ತನ್ನ ಬೇರುಗಳನ್ನು ಚಾಚಿಕೊಳ್ಳುತ್ತದೆ ಇದರಿಂದಾಗಿ ಭೂ ಸವೆತವನ್ನು ತಡೆಗಟ್ಟಬಹುದು ಜೊತೆಗೆ ಅತಿವೃಷ್ಟಿ-ಅನಾವೃಷ್ಟಿಯ ಸಮತೋಲನ ಗೊಳಿಸಬಹುದು. ಅರಣ್ಯಗಳು ಅದೆಷ್ಟು ಪಕ್ಷಿಗಳಿಗೆ ಉಡುಗೆಗಳಿಗೆ ವಾಸಸ್ಥಾನವಾಗಿದೆ ಅದೇರೀತಿ ವಾತಾವರಣದಲ್ಲಿ ಉಷ್ಣಾಂಶವನ್ನು ಹಿಡಿತದಲ್ಲಿಟ್ಟುಕೊಳ್ಳುವ. ಜೋರಾಗಿ ಬೀಸುವ ಗಾಳಿಯನ್ನು ತಡೆಹಿಡಿದು ನಮ್ಮನ್ನು ರಕ್ಷಿಸುತ್ತದೆ. ಅದರ ಜೊತೆಗೆ ನಮ್ಮ ದಿನನಿತ್ಯ ಬಳಕೆಗೆ ಬೇಕಾದ ಕಟ್ಟಿಗೆಗಳು ಮತ್ತು ಪೀಠೋಪಕರಣಗಳಿಗೆ ಇವುಗಳನ್ನು ಬಳಸುತ್ತಾವೆ.

ಇಷ್ಟೆಲ್ಲಾ ಉಪಯೋಗದಲ್ಲಿರುವ ಅರಣ್ಯವನ್ನು ಮಾನವ ತನ್ನ ಸ್ವಾರ್ಥಕ್ಕಾಗಿ ನಾಶಮಾಡುತ್ತಿದ್ದಾರೆ. ಹಣದಾಸೆಗಾಗಿ ಮರಗಳನ್ನು ಕಡಿದು ಮಾರಾಟ ಮಾಡುತ್ತಿದ್ದಾರೆ. ಹಾಗೆ ನಗರೀಕರಣ ರಸ್ತೆ ಅಗಲೀಕರಣ ಮುಂತಾದ ಹೆಸರಿನಲ್ಲಿ ಮರಗಳ ಮಾರಣಹೋಮ ನಡೆಯುತ್ತಿದೆ. ಇದರ ಜೊತೆಗೆ ಸರ್ಕಾರ ರೂಪಿಸುವ ಕೆಲವು ಯೋಜನೆಗಳಿಗಾಗಿ ಅದೆಷ್ಟು ಮರಗಳನ್ನು ಕಡಿದು ನೆಲಸಮ ಮಾಡಲಾಗುತ್ತಿದೆ.

ಅರಣ್ಯ ನಾಶ ತಡೆಗಟ್ಟುದು ಅಗತ್ಯ: ಜನರಿಗೆ ಹೆಚ್ಚೆಚ್ಚು ಮರಗಿಡಗಳ ನೆಡುವಂತೆ ಪ್ರೋತ್ಸಾಹಿಸಬೇಕು . ಮರಗಳನ್ನು ಕಡಿಯಲು ಪರವಾನಿಗೆ ಅಗತ್ಯ ವಿರಬೇಕು.ಒಂದು ಮರ ಕಡಿದರೆ ಎರಡು ಗಿಡ ನೀಡಬೇಕೆಂದು ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ವಿಶ್ವ ಅರಣ್ಯ ದಿನದ ಮಹತ್ವವನ್ನು ತಿಳಿಯಪಡಿಸಬೇಕಾಗಿದೆ. ಹೀಗಾದಾಗ ಮಾತ್ರ ನಮ್ಮ ಮುಂದಿನ ಜನಾಂಗದ ಜನರಿಗೆ ಶುದ್ಧಗಾಳಿ ಸಿಗುವಂತಾಗುತ್ತದೆ. ಇಲ್ಲದೆ ಹೋದಲ್ಲಿ ಮಾನವ ಇದೇ ರೀತಿ ಅರಣ್ಯ ನಾಶಪಡಿಸಿದರೆ ಭೂಕಂಪ, ಪ್ರವಾಹ ಕಾಡ್ಗಿಚ್ಚಿನಂತಹ ಅನಾಹುತಗಳು ಸಂಭವಿಸಿ ಪ್ರಕೃತಿಯು ತನ್ನ ಬಲವನ್ನು ತೋರಿಸುತ್ತದೆ-ಸಂದೀಪ್.ಎಸ್. ಮಂಚಿಕಟ್ಟೆ, ಪ್ರಥಮ ಪತ್ರಿಕೋದ್ಯಮ ವಿಭಾಗ, ವಿವೇಕಾನಂದ ಕಾಲೇಜು ನೆಹರೂ ನಗರ ಪುತ್ತೂರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.