HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ವಿದ್ಯಾರ್ಥಿಗಳ ಸಮಸ್ಯೆ: ವಿದ್ಯಾರ್ಥಿಗಳು ತರಗತಿಯಲ್ಲಿ ನಿದ್ದೆ ತೂಕಡಿಸುವಂತಾದರೆ…..?

Puttur_Advt_NewsUnder_1
Puttur_Advt_NewsUnder_1

ರಗತಿಯೊಳಗೆ ಪಾಠಪ್ರವಚನಗಳನ್ನು ಕೇಳಬೇಕಾದ ಸಮಯದಲ್ಲಿ ವಿದ್ಯಾರ್ಥಿಗಳು ನಿದ್ದೆ ತೂಕಡಿಸುವಂತಾದರೆ…..? ಹೆಚ್ಚಿನ ವಿದ್ಯಾರ್ಥಿಗಳಿಗೆ ಒಂದಲ್ಲ ಒಂದು ಕಾರಣಗಳಿಂದ ತರಗತಿ ಸಮಯದಲ್ಲಿ ನಿದ್ದೆ ತೂಕಡಿಸುತ್ತದೆ. ಕೆಲವರಿಗೆ ಅಪರೂಪಕ್ಕೆ, ಇನ್ನು ಕೆಲವರಿಗೆ ಸಂದರ್ಭಕ್ಕನುಗುಣವಾಗಿ ನಿದ್ದೆ ಮಂಪರು ಕವಿಯಬಹುದು. ಇಂತಹಾ ಅಕಾಲಿಕ ತೂಕಡಿಕೆಗೆ ಕಾರಣಗಳೇನು ತಿಳಿಯೋಣ.

1. ತಡರಾತ್ರಿವರೆಗೆ ಅಧ್ಯಯನ: ಕೆಲವು ವಿದ್ಯಾರ್ಥಿಗಳು ತಡರಾತ್ರಿವರೆಗೆ ಅಂದರೆ 12 – 1 ಗಂಟೆವರೆಗೂ ಓದು ಬರೆಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ವಿದ್ಯಾರ್ಥಿಗಳಿಗೆ ಸುಮಾರು ಎಂಟು ಗಂಟೆ ನಿದ್ದೆಯ ಅವಶ್ಯಕತೆ ಇರುತ್ತದೆ. ರಾತ್ರಿ ನಿದ್ದೆಗೆಟ್ಟು ಅಭ್ಯಾಸ ಮಾಡಿದರೆ ತರಗತಿಯಲ್ಲಿ ತೂಕಡಿಕೆ ಕಾಣಿಸಬಹುದು. ದೇಹಕ್ಕೆ ಅವಶ್ಯವಿರುವ ವಿಶ್ರಾಂತಿ ಪಡೆಯುವುದೇ ಇದಕ್ಕಿರುವ ಪರಿಹಾರ.

2. ನಿರಂತರ ಕೆಲಸ, ಅಧ್ಯಯನ: ಸಾಕಷ್ಟು ಮಧ್ಯಂತರ ನೀಡದೆ ನಿರಂತರ ಕೆಲಸ ಅಥವಾ ಓದುವ, ಬರೆಯುವ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ನಿದ್ದೆ ತೂಕಡಿಸುವ ಸಾಧ್ಯತೆ ಇದೆ. ಆರ್ಥಿಕ ಸಂಕಷ್ಟ ಇರುವ ವಿದ್ಯಾರ್ಥಿಗಳು ಅಲ್ಪಾವಧಿ ಕೆಲಸದ ಮೊರೆ ಹೋಗುತ್ತಾರೆ. ಪ್ರಾತಃಕಾಲ ಎದ್ದು ಹಾಲು/ಪೇಪರ್ ವಿತರಣೆ, ಸ್ವಚ್ಛತಾ ಕೆಲಸ, ಸಂಜೆ ಹೊತ್ತಲ್ಲಿ ಮಾರಾಟ ಮಳಿಗೆ, ಸಣ್ಣ ಕೈಗಾರಿಕೆ ಇತ್ಯಾದಿ ಕಡೆಗಳಲ್ಲಿ ದುಡಿದು ಅಥವಾ ಮನೆಯಲ್ಲಿ ಕೃಷಿ ಕೆಲಸ, ಅಡುಗೆ, ಸ್ವಚ್ಛತೆ, ಇತ್ಯಾದಿ ಕೆಲಸಗಳಲ್ಲಿ ಪಾಲ್ಗೊಂಡು ನಂತರ ರಾತ್ರಿ ಹೊತ್ತು ಅಧ್ಯಯನ ನಡೆಸುವ ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ತೂಕಡಿಸುವ ಸಾಧ್ಯತೆ ಇರುತ್ತದೆ.

3. ದೀರ್ಘವಾದ ತರಗತಿ: ಅವಧಿಗಿಂತ ಹೆಚ್ಚು ತಾಸು ತರಗತಿ ನಡೆಯುವ ಸಮಯದಲ್ಲಿ ವಿದ್ಯಾರ್ಥಿಗಳು ತೂಕಡಿಸಬಹುದು. ಇತ್ತೀಚೆಗೆ ಕೆಲವು ಖಾಸಗಿ ಪದವಿ ಪೂರ್ವ ವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಸುಮಾರು ಹನ್ನೆರಡು ಗಂಟೆಗಳ ವರೆಗೆ ತರಗತಿ ನಡೆಸಿ ಒತ್ತಡ ಹಾಕುತ್ತಿರುವುದರಿಂದಲೂ ಇಂತಹಾ ಸಮಸ್ಯೆ ತಲೆದೋರಬಹುದು.
4 ನೀರಸ ಪಾಠ-ಪ್ರವಚನ: ಆಸಕ್ತಿ ಅಥವಾ ಕುತೂಹಲ ಮೂಡಿಸದ ನೀರಸ ಪಾಠ ಪ್ರವಚನ ಮಾಡುವ ಕೆಲವು ಅಧ್ಯಾಪಕರ (ಕೆಲವು ಹೊಸಬರ) ತರಗತಿಗಳಲ್ಲಿ ವಿದ್ಯಾರ್ಥಿಗಳು ತೂಕಡಿಸಬಹುದು.

5. ಆಸಕ್ತಿ ಇರದ ವಿಷಯಗಳು: ತಮಗೆ ಆಸಕ್ತಿ ಇರದ ವಿಷಯಗಳ ತರಗತಿಗಳಲ್ಲಿ (ಉದಾಹರಣೆಗೆ ಸಮಾಜಶಾಸ್ತ್ರ ಇತ್ಯಾದಿ) ಕೆಲವು ವಿದ್ಯಾರ್ಥಿಗಳು ನಿದ್ದೆಗೆ ಜಾರಬಹುದು.

6. ಕಲಿಯುವುದರಲ್ಲಿ ನಿರಾಸಕ್ತಿ: ವಿದ್ಯೆ ಕಲಿಯಲು ಅಸಕ್ತಿ ಇಲ್ಲದ ವಿದ್ಯಾರ್ಥಿಗಳಿಗೆ ಪಾಠ ಕೇಳುವ ಆಸಕ್ತಿ ಇರುವುದಿಲ್ಲ. ಅಂತಹವರು ಅಥವಾ ಫೇಲಾಗಲೆಂದೇ ಕಾಯುವವರು ಪಾಠ ಕೇಳುವ ಬದಲು ಹಿಂದೆಗೆಯುತ್ತಾ (withdrawal) ನಿದ್ದೆಗೆ ಜಾರುತ್ತಾರೆ.

7. ದಣಿವು: ಕೆಲಸ ಅಥವಾ ಪಠ್ಯೇತರ ಚಟುವಟಿಕೆಗಳಿಂದ (ಆಟೋಟ ಇತ್ಯಾದಿ) ದಣಿದಿದ್ದ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ನಿದ್ದೆಯ ಮಂಪರು ಹತ್ತಬಹುದು.

8. ಹೊಟ್ಟೆ ಭಾರ: ಅಧಿಕ ಆಹಾರ ತಿನ್ನುವ ತಿಂಡಿಪೋತ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ನಂತರದ ತರಗತಿಗಳಲ್ಲಿ ನಿದ್ದೆ ತೂಕಡಿಸುವುದು ಸಾಮಾನ್ಯ.

9. ಅನಾರೋಗ್ಯ: ದೇಹದಲ್ಲಿ ಆರೋಗ್ಯ ಸಮಸ್ಯೆಗಳು ತಲೆದೋರಿದಾಗ (ಉದಾಹರಣೆ ನೆಗಡಿಯಿಂದ ತಲೆನೋವು, ತಲೆಭಾರ, ಜ್ವರ ಇತ್ಯಾದಿ) ತರಗತಿಯಲ್ಲಿ ಕಣ್ಣಿಗೆ ನಿದ್ದೆ ಹತ್ತಬಹುದು.

10. ಔಷಧಗಳ ಪ್ರಭಾವ: ಅನಾರೋಗ್ಯ ಕಾಡುವ ವಿದ್ಯಾರ್ಥಿಗಳು ತೆಗೆದುಕೊಳ್ಳುವ ಔಷಧಗಳ ಪ್ರಭಾವದಿಂದಲೂ ತರಗತಿಯಲ್ಲಿ ನಿದ್ರಾವಶರಾಗಬಹುದು.

11. ಪೋಷಕಾಂಶಗಳ ಕೊರತೆ: ಬೆಳೆಯುವ ದೇಹಕ್ಕೆ ವಿವಿಧ ವಿಟಮಿನ್, ಪ್ರೊಟೀನ್, ಖನಿಜ, ಲವಣ ಇತ್ಯಾದಿ ಪೋಷಕಾಂಶಗಳ ಸಮತೋಲನದ ಅವಶ್ಯಕತೆ ಇರುತ್ತದೆ. ತರಕಾರಿ ಕಡಿಮೆ ತಿಂದು ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ, ಗೋಧಿಯ ಬಳಕೆ ಮಾಡುವವರಿಗೆ ಉಳಿದ ಪೋಷಕಾಂಶಗಳ ಕೊರತೆ ಉಂಟಾಗಬಹುದು. ಫಾಸ್ಟ್ ಫುಡ್ ಇತ್ಯಾದಿ ಜಂಕ್ ತಿನ್ನುವವರಲ್ಲಿಯೂ ಇಂತಹಾ ಕೊರತೆ ಬಾಧಿಸಬಹುದು. ಸಮತೋಲನದ ಆಹಾರ ಸೇವನೆಯೇ ಇದಕ್ಕೆ ಪರಿಹಾರ.

12 ಮನರಂಜನೆ ಅಥವಾ ಪಠ್ಯೇತರ ಚಟುವಟಿಕೆಯ ಕೊರತೆ: ಮೆದುಳು ಉತ್ಸಾಹಭರಿತವಾಗಿರಲು ಅಥವಾ ಪ್ರಸನ್ನವಾಗಿರಲು ವಿಶ್ರಾಂತಿ ಮಾತ್ರವಲ್ಲ ಸಾಕಷ್ಟು ಮನರಂಜನೆ ಅಥವಾ ಪಠ್ಯೇತರ ಚಟುವಟಿಕೆಗಳು ಅಗತ್ಯ.

13 ಮಿದುಳಿನ ರಾಸಾಯನಿಕಗಳಲ್ಲಿ ಏರುಪೇರು: ನಿದ್ದೆ ಬರಲು ಮಿದುಳಿನಲ್ಲಿ ಮೆಲಾಟೋನಿನ್ (melation) ಎಂಬ ರಾಸಾಯನಿಕ ಹಾಗೂ ಎಚ್ಚರ ಚಟುವಟಿಕೆಯಿಂದಿರಲು ಡೋಪಮೈನ್ (dopamine)ಎಂಬ ರಾಸಾಯನಿಕಗಳು ಕಾರಣವಾಗುತ್ತವೆ. ಇವುಗಳಲ್ಲಿ ಏರುಪೇರಾದರೂ ಕೆಲಸದ ಅವಧಿಗಳಲ್ಲಿ ತೂಕಡಿಕೆ ಸಂಭವಿಸಬಹುದು. ಇದಕ್ಕೆ ಮನೋರೋಗತಜ್ಞರ ಸಹಾಯ ಪಡೆದು ತಾತ್ಕಾಲಿಕ ಔಷಧಿ ಮೂಲಕ ಸರಿಪಡಿಸಿಕೊಳ್ಳಬಹುದು.

ಚಿಕಿತ್ಸಾ ಸಾಧ್ಯತೆ
ಮೊದಲಿಗೆ ತರಗತಿಯಲ್ಲಿ ನಿದ್ದೆ ತೂಕಡಿಸಲು ಕಾರಣವಾಗುವ ಅಂಶವನ್ನು ಪತ್ತೆ ಹಚ್ಚಬೇಕಾಗುತ್ತದೆ. ಕೆಲವರಿಗೆ ಜೀವನ ಕ್ರಮ ಬದಲಿಸುವ ಚಿಕಿತ್ಸೆ (Life style Psychotherapy)ಮಾಡಬೇಕಾಗಬಹುದು. ಸೈಕೊಥೆರಫಿ (Psychotherapy)ಅಂದರೆ ಮಾನಸಿಕ ಸಂಘರ್ಷ ನಿವಾರಣಾ ವಿಧಾನದಲ್ಲಿ, ಆಪ್ತಸಮಾಲೋಚನೆ (counselling) ಮಾಡುವಂತೆ ಸಲಹೆ ನೀಡಲಾಗುವುದಿಲ್ಲ. ಸಲಹೆ ನೀಡುವುದು ಎಂದರೆ ಕಟ್ಟಿಕೊಟ್ಟ ಆಹಾರ ಪೊಟ್ಟಣದಂತೆ… ಸೇವಿಸಬಹುದು ಅಥವಾ ಬಿಸುಕಲೂಬಹುದು….! ಸೈಕೊಥೆರಪಿ ವಿಧಾನದಲ್ಲಿ ಸಮಸ್ಯೆಯ ಮೂಲವನ್ನು ಅವರಿಂದಲೇ ಪತ್ತೆಹಚ್ಚಲಾಗುತ್ತದೆ ಮತ್ತು ಅದರ ಬಗ್ಗೆ ಸಾಕಷ್ಟು ಅರಿವು ಮೂಡಿಸಿ ಅವರಿಂದಲೇ ಸಮಸ್ಯೆಗಳ ಪರಿಹಾರ ಮಾಡಿಸಲಾಗುತ್ತದೆ. ಆದುದರಿಂದ ಸೈಕೊಥೆರಫಿ ವಿಧಾನದಲ್ಲಿ ಫಲಿತಾಂಶದ ಪ್ರಮಾಣ ಹೆಚ್ಚು.

ಡಾ. ಮಸ್ಕರೇನಸ್,
ಪ್ಯಾಟ್ರಿಕ್ ಸಿಪ್ರಿಯನ್,
ಮಾನಸಿಕ ಸಂಘರ್ಷ ನಿವಾರಣಾ ತಜ್ಞರು
ಹಿತ ಆಸ್ಪತ್ರೆ ಪುತ್ತೂರು
9480855633

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.