ಕೆಮ್ಮಾಯಿ ಶ್ರೀಮಹಾವಿಷ್ಣುಮೂರ್ತಿ ಭಜನಾ ಮಂಡಳಿಗೆ ಆಯ್ಕೆ: ಗೌರವಾಧ್ಯಕ್ಷ ಡಾ.ಅಶೋಕ್ ಪಡಿವಾಳ್, ಅಧ್ಯಕೆ ಉಮಾವತಿ

Puttur_Advt_NewsUnder_1
Puttur_Advt_NewsUnder_1

 

  • ಕಾರ‍್ಯದರ್ಶಿ: ಅಶೋಕ, ಕೋಶಾಧಿಕಾರಿ: ಚಂದ್ರಶೇಖರ ಎಸ್.

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮಂಡಳಿಯ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವದ ಕುರಿತು ಕಾರ್ಯಕರ್ತರಿಗೆ ಅಭಿನಂದನೆ ಸಭೆ ನಡೆಸುವುದರೊಂದಿಗೆ ನೂತನ ಭಜನಾ ಮಂಡಳಿ ಆಯ್ಕೆ ಪ್ರತಿಕ್ರಿಯೆಯನ್ನು ದೇವಸ್ಥಾನದ ವಠಾರದಲ್ಲಿ ನಡೆಸಲಾಯಿತು. ನೂತನ ಭಜನಾ ಮಂಡಳಿ ಸಭೆ ದೇವಸ್ಥಾನದ ವಠಾರದಲ್ಲಿ ನಡೆಯಿತು. ಶ್ರೀ ಮಹಾವಿಷ್ಣುಮೂರ್ತಿ ಭಜನಾ ಮಂಡಳಿಯ ಗೌರವಾಧ್ಯಕ್ಷರಾಗಿ ಡಾ.ಅಶೋಕ್ ಪಡಿವಾಳ್ ಮೂಡಾಯೂರುಗುತ್ತು, ಅಧ್ಯಕ್ಷರಾಗಿ ಉಮಾವತಿ ಹೊನ್ನಪ್ಪ ಗೌಡ ಕೆಮ್ಮಾಯಿ, ಕಾರ‍್ಯದರ್ಶಿಯಾಗಿ ಅಶೋಕ ಹೊಸವೊಕ್ಲು, ಕೋಶಾಧಿಕಾರಿಯಾಗಿ ಚಂದ್ರಶೇಖರ ಎಸ್.ಮೂಡಾಯೂರು, ಸಂಘಟನಾ ಕಾರ‍್ಯದರ್ಶಿಯಾಗಿ ಪ್ರಕಾಶ್ ಬೊವಿನಕಾಡು, ನೆಲ್ಲಿಕಟ್ಟೆ ಈಶ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಗೋಪಾಲಕೃಷ್ಣ, ಉಪಾಧ್ಯಕ್ಷರಾಗಿ ತಿಮ್ಮಪ್ಪ ಗೌಡ ಶಾಂತಿನಿಲಯ, ಕೆಮ್ಮಾಯಿ, ಶ್ರೀನಿವಾಸ ಗೌಡ ಪಲಸಡ್ಕ, ಜಯಂತಿ ಹೆಗ್ಡೆ, ರಾಜುಶೆಟ್ಟಿ, ಸಾಯಿಲಕ್ಷ್ಮೀ, ಜೊತೆ ಕಾರ‍್ಯದರ್ಶಿಯಾಗಿ ಶಾಲಿನಿ ಬೀರ‍್ನಹಿತ್ಲು, ಪ್ರಶಾಂತ್ ಕೆಮ್ಮಾಯಿ, ಉಮಾವತಿ ಗೋಪಾಲಕೃಷ್ಣ ಬೀರಿಗ, ಮಾರ್ಗದರ್ಶಕರಾಗಿ ಹೇಮಚಂದ್ರ ಕೆಮ್ಮಾಯಿ ಹಾಗೂ ಇತರ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.

ಬ್ರಹ್ಮಕಲಶ ಸಮಿತಿಯ ಪದಾಧಿಕಾರಿಗಳಾದ ಡಾ.ಅಶೋಕ್ ಪಡಿವಾಳ್ ಮೂಡಾಯೂರುಗುತ್ತು, ಶ್ರೀಧರ ಬೈಪಾಡಿತ್ತಾಯ ಕೆಮ್ಮಾಯಿ, ಚಂದ್ರಶೇಖರ್ ಎಸ್.ಮೂಡಾಯೂರು, ನಲ್ಕ ಗೋಪಾಲಕೃಷ್ಣ ಆಚಾರ್ಯ, ಶಶಾಂಕ ಕೊಟೇಚಾ, ಡಾ.ಎನ್.ನಾರಾಯಣ ಭಟ್ ಕೆಮ್ಮಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಧರ ಬೈಪಾಡಿತ್ತಾಯ ಸ್ವಾಗತಿಸಿ, ನಾಗೇಶ್ ಟಿ.ಎಸ್.ಮತ್ತು ಚಂದ್ರಶೇಖರ ಎಸ್. ಮೂಡಾಯೂರು ಕಾರ‍್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.