ಮರಳುಗಾರಿಕೆ ಸರಳೀಕರಣಗೊಳಿಸಲು ಶಾಸಕ ಮಠ೦ದೂರು ಸದನದಲ್ಲಿ ಆಗ್ರಹ

Puttur_Advt_NewsUnder_1
Puttur_Advt_NewsUnder_1
  • ಮರಳಿಗೆ ಸೂಕ್ತ ನಿಯಮಾವಳಿ ರೂಪಿಸಿ: ಮಠಂದೂರು ಆಗ್ರಹ

ಪುತ್ತೂರು: ಕರಾವಳಿ ಭಾಗದಲ್ಲಿ ಮರಳಿನ ಮೇಲೆ ವಿಧಿಸಿರುವ ನೀತಿ ನಿಯಮಗಳಿಂದ ತೊಂದರೆಯಾಗುತ್ತಿದ್ದು, ಸೂಕ್ತ ನಿಯಮಾವಳಿ ತರುವಂತೆ ಶಾಸಕ ಸಂಜೀವ ಮಠಂದೂರು ಅವರು ವಿಧಾನಸಭೆಯ ಅಧಿವೇಶನದಲ್ಲಿ ಒತ್ತಾಯಿಸಿದರು. ಒಂದು ಕೆಜಿ ಚಿನ್ನವನ್ನು ದುಬೈಯಿಂದ ತರಬಹುದು, ಆದರೆ ಒಂದು ಕೆಜಿ ಮರಳು ನದೀ ಪಾತ್ರದಿಂದ ತರಲು ಆಗುವುದಿಲ್ಲ. ಪೊಲೀಸರು ಜನರಿಗೆ ಮರಳೆತ್ತಲು ಬಿಡುವುದಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ತುಂಬಾ ಸಮಸ್ಯೆಯಾಗಿದೆ ಎಂದು ಗಮನ ಸೆಳೆದರು.

ಇನ್ನೆರಡು ತಿಂಗಳಲ್ಲಿ ದಕ್ಷಿಣ ಕನ್ನಡದಲ್ಲಿ ಮಳೆಗಾಲ ಆರಂಭವಾಗಲಿದೆ. ಆದ್ದರಿಂದ ನಿಯಮಾವಳಿ ರೂಪಿಸುವ ಕೆಲಸ ತಕ್ಷಣ ಆಗಬೇಕು ಎಂದು ಸರಕಾರವನ್ನು ಒತ್ತಾಯಿಸಿದರು. ನದಿ ತೊರೆಗಳ ದಂಡೆಯಲ್ಲಿ ಮರಳು ನಿಂತು, ಅದನ್ನು ತೆಗೆಯದೆ ಹೋದರೆ ನದಿಗಳು ಉಕ್ಕಿ ಪ್ರವಾಹ ಉಂಟಾಗುತ್ತದೆ. ಹೊಸ ಮರಳು ನೀತಿ ಮಾಡಿ, ಅದರಿಂದ ಜನರಿಗೆ ಸುಲಭವಾಗಿ ಮರಳು ಸಿಗುವಂತಾಗಬೇಕು ಮತ್ತು ನದಿಗಳು ಉಕ್ಕಿ ಹರಿಯುವುದನ್ನು ತಪ್ಪಿಸಬೇಕು ಎಂದರು.

ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಕೂಡ ಧ್ವನಿಗೂಡಿಸಿದರು. ಉತ್ತರಿಸಿದ ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಸಿ.ಸಿ. ಪಾಟೀಲ್ ಅವರು, ದಕ್ಷಿಣ ಕನ್ನಡದಲ್ಲಿ ಪ್ರವಾಹ ಬಂದ 21 ಪ್ರದೇಶಗಳಲ್ಲಿ, ಹಿನ್ನೀರು ನಿಂತ ಜಾಗದಲ್ಲಿ ಮರಳು ತೆಗೆಯಲು ಸರಕಾರದ ಅಭ್ಯಂತರವೇನೂ ಇಲ್ಲ. ಪ್ರವಾಹದಿಂದ ನದಿ ಪಾತ್ರದಲ್ಲಿ ಸಂಗ್ರಹವಾದ ಮರಳು ಎತ್ತಲು ಕಾನೂನಿನಲ್ಲಿ ಅವಕಾಶವಿದೆ. ಆಯಾ ಜಿಲ್ಲೆಗಳ ಮರಳು ಸಮಿತಿಯಲ್ಲಿ ಅದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.