Breaking News

ಕೊರೊನಾ ಸಂಕಟ – ಮಾ.31ರ ತನಕ ಮಾಲ್, ಹೊಟೇಲ್‌, ಬಾರ್ ರೆಸ್ಟೋರೆಂಟ್ ಗಳು ಬಂದ್

Puttur_Advt_NewsUnder_1
Puttur_Advt_NewsUnder_1
  • ಪೌರಾಯುಕ್ತರಿಂದ ನಗರಸಭೆ ವ್ಯಾಪ್ತಿಯಲ್ಲಿ ಬಂದ್‌ಗೆ ಮೌಖಿಕ ಸೂಚನೆ

ಪುತ್ತೂರು: ಕರೋನಾ ವೈರಸ್ ತಡೆಯಲು ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶದಂತೆ ಜಿಲ್ಲಾಡಳಿತ ಎಲ್ಲಾ ಶಾಲೆಗಳು ಮತ್ತು ಮಾಲ್‌ಗಳನ್ನು ಮುಚ್ಚಲು ನಿರ್ಧರಿಸಿದ್ದು ಮಾ.31ರ ತನಕ ಎಲ್ಲವೂ ಸ್ತಬ್ದಗೊಳ್ಳಲಿದೆ.

ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಪ್ರತಿಷ್ಠಿತ ರೆಡಿಮೆಡ್ ಬಟ್ಟೆ ಮಳಿಗೆಗಳು, ಹೊಟೇಲ್‌ಗಳು, ಮಾಲ್‌ಗಳಿಗೆ ನಗರಸಭೆ ಪೌರಾಯುಕ್ತರು ಮೌಖಿಕ ಆದೇಶ ನೀಡಿದ್ದಾರೆ. ಹೊಟೇಲ್‌ಗಳಲ್ಲಿ ಸಿದ್ಧ ಪಡಿಸಿ ತಿಂಡಿಗಳು ಹಾಳಾಗಬಾರದು ಎಂದು ಇವತ್ತು ಸಂಜೆಯ ತೆರೆಯಲು ಮತ್ತು ಸಂಜೆಯ ಬಳಿಕ ಪಾರ್ಸೆಲ್‌ಗಳಿಗೆ ಮಾತ್ರ ಅವಕಾಶ ನೀಡಿದ್ದು, ನಾಳೆಯಿಂದ ಮಾ.೩೧ರ ತನಕ ಪೂರ್ಣ ರೀತಿಯಲ್ಲಿ ಬಂದ್ ಮಾಡುವಂತೆ ಸೂಚನೆ ನೀಡಿದ್ದಾರೆ.
ತರಕಾರಿ ಅಂಗಡಿಗಳು, ಔಷಧಿ ಅಂಗಡಿಗಳು ಮತ್ತು ಕಿರಾಣಿ ಅಂಗಡಿಗಳು ತೆರೆದಿರುತ್ತವೆ, ಇದರಿಂದಾಗಿ ಸಾರ್ವಜನಿಕರು ಆಹಾರ ಪದಾರ್ಥಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಹೋಟೆಲ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಮತ್ತು ಬೃಹತ್ ಮಾಲ್ ಗಳನ್ನು ಮುಂದಿನ ಆದೇಶದ ತನಕ ಬಂದ್ ಮಾಡುವಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಮಾಡಿದೆ.

ನಾಳೆ ಏನೆಲ್ಲಾ ಇದೆ-ಇಲ್ಲ ?
ಕೊರೊನಾ ವೈರಸ್ ತಡೆಗಟ್ಟವಿಕೆ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು, ಜನತಾ ಕಫ್ರ್ಯೂಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಮಾ.೨೨ ರ ಸ್ಥಿತಿ ಹೇಗಿರುತ್ತದೆ. ಏನು ಸಿಗುತ್ತದೆ. ಏನು ಸಿಗಲ್ಲ ಎಂಬ ಕುರಿತ ಮಾಹಿತಿ ಇಲ್ಲಿದೆ.

ಬಸ್ ಸಂಪೂರ್ಣ ಬಂದ್ : ಸಾರಿಗೆ ಸಂಸ್ಥೆಯ ಬಸ್ ಸಂಚಾರ ಸಂಪೂರ್ಣ ಬಂದ್. ಬೆಳಗ್ಗೆ ೭ ಗಂಟೆಯಿಂದ ರಾತ್ರಿ ೯ ಗಂಟೆಯವರೆಗೆ ನಗರ, ರಾಜ್ಯ, ಅಂತಾರಾಜ್ಯಸೇರಿದಂತೆ ಯಾವುದೇ ಬಸ್‌ಗಳು ಕಾರ್ಯಾಚರಿಸುವುದಿಲ್ಲ. ರಾತ್ರಿ ೯ ಗಂಟೆ ನಂತರ ಬಸ್ ಸಂಚಾರ ಆರಂಭವಾಗಲಿದೆ.

ಆಟೋ ರಿಕ್ಷಾಗಳೂ ಬಂದ್ : ಬಸ್ಸಿಲ್ಲದ್ದರೇನಂತೆ ಆಟೋ ಅವಲಂಬಿಸಿದರಾಯಿತು ಎನ್ನುವಂತಿಲ್ಲ. ನಗರಸಭೆ ವ್ಯಾಪ್ತಿಯಲ್ಲಿ ನಿತ್ಯ ಸಂಚರಿಸುವ ೩ಸಾವಿರಕ್ಕೂ ಆಟೋ ರಿಕ್ಷಾಗಳು ಬೆಳಗ್ಗೆ ೭ ಗಂಟೆಯಿಂದ ರಾತ್ರಿ ೯ ಗಂಟೆಯವರೆಗೆ ಸಂಚರಿಸುವುದಿಲ್ಲ.

ಹಾಲು ಪೂರೈಕೆ : ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಒಕ್ಕೂಟದಿಂದ ಪೂರೈಕೆಯಾಗುವ ಹಾಲು ಮತ್ತು ಮೊಸರು ಯಥಾ ಸ್ಥಿತಿಯಲ್ಲಿ ಬರಲಿದೆ.

ಆಸ್ಪತ್ರೆ, ಮೆಡಿಕಲ್ ಬಂದ್ : ತುರ್ತು ಚಿಕಿತ್ಸೆ ಹೊರತು ಉಳಿದೆಲ್ಲಾ ಚಿಕಿತ್ಸೆಗಳಿಗೆ ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ವಿಭಾಗ ಇಡೀ ದಿನ ಬಂದ್. ಮೆಡಿಕಲ್ ಅಂಗಡಿಗಳು ಬಂದ್ ಇರುತ್ತವೆ ಎಂದು ವೈದ್ಯರುಗಳು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.