ಎಸ್‌ಡಿಟಿಯು ಯುನಿಯನ್‌ನಿಂದ ‘ಬ್ರೇಕ್ ದ ಚೈನ್’ ಆಂದೋಲನ: ದರ್ಬೆ, ಗಾಂಧಿ ಕಟ್ಟೆ ಬಳಿ ಕೈ ತೊಳೆಯುವ ಬೇಸಿನ್ ಅಳವಡಿಕೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಎಸ್ಡಿಟಿಯು ನೇತೃತ್ವದ ಸೋಷಿಯಲ್ ಡೆಮೊಕ್ರೆಟಿಕ್ ಆಟೋ ಚಾಲಕರ ಯೂನಿಯನ್ ಪುತ್ತೂರು ತಾಲೂಕು ಸಮಿತಿ ವತಿಯಿಂದ ಮಾರಕ ಕೋವಿಡ್ -19(ಕೊರೋನಾ) ವೈರಾಣು ಹರಡುವುದನ್ನು ತಡೆಗಟ್ಟಲು “ಬ್ರೇಕ್ ದ ಚೈನ್” ಆಂದೋಲನ, ಇದರ ಅಂಗವಾಗಿ ಪುತ್ತೂರು ಗಾಂಧಿಕಟ್ಟೆ ಮತ್ತು ದರ್ಬೆ ಜಂಕ್ಷನ್ ಬಳಿ ಎರಡು ಕಡೆ ಕೈ ಮುಖ ಶುಚಿಗೊಳಿಸಲು ಬೇಸಿನ್ ಅಳವಡಿಸಲಾಯಿತು.

ಎಸ್‌ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಕಾರ್ಯದರ್ಶಿ ಅಶ್ರಫ್ ಬಾವು ಕೈ ತೊಳೆಯುವ ಬೇಸಿನ್‌ನನ್ನು ಉದ್ಘಾಟನೆ ಮಾಡಿದರು, ಎಸ್‌ಡಿಟಿಯು ಪುತ್ತೂರು ತಾಲೂಕು ಅಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ “ವೈರಾಣು ಹರಡುವುದನ್ನು ತಡೆಗಟ್ಟಲು ಅಳವಡಿಸಿದ ಕೈ ತೊಳೆಯುವ ಬೇಸಿನ್ ನನ್ನು ಸದುಪಯೋಗ ಪಡಿಸಿಕೊಳ್ಳಲು ಸಾರ್ವಜನಿಕರಿಗೆ ಕರೆ ನೀಡಿದರು”. ಸಿವಿಲ್ ಇಂಜಿನಿಯರ್ ಕಬೀರ್ ಬಡಕ್ಕೊಡಿ ಅವರು ದರ್ಬೆ ಜಂಕ್ಷನ್‌ನಲ್ಲಿ ಅಳವಡಿಸಿದ ಬೇಸಿನ್‌ನ್ನು ಉದ್ಘಾಟನೆ ಮಾಡಿದರು, ಇ-ಫ್ರೆಂಡ್ಸ್ ಪುತ್ತೂರು ಅಧ್ಯಕ್ಷರಾದ ದಂತ ವೈದ್ಯ ಡಾ. ಸರ್ಫಾರಾಝ್ ಈ ಸಂದರ್ಭಲ್ಲಿ ಕೊವಿಡ್-೧೯ (ಕೋರೋನ ವೈರಸ್) ನ ಬಗ್ಗೆ ಜಾಗೃತಿ ಮೂಡಿಸಿದರು, ಈ ಸಂದರ್ಭದಲ್ಲಿ ಪಿ.ಸಿ ಪೈ ಪೆಟ್ರೋಲಿಯಮ್ ಮಾಲಕ ಕೇಶವ ಪೈ, ಸೋಷಿಯಲ್ ಡೆಮೊಕ್ರೆಟಿಕ್ ಆಟೋ ಚಾಲಕರ ಯೂನಿಯನ್ ಪುತ್ತೂರು ತಾಲೂಕು ಅಧ್ಯಕ್ಷ ಶಮೀರ್ ನಾಜೂಕು ಕೂರ್ನಡ್ಕ, ಪಿಎಫ್‌ಐ ಪುತ್ತೂರು ಸಿಟಿ ಡಿವಿಷನ್ ಅಧ್ಯಕ್ಷ ಉಮ್ಮರ್ ಕೆಎಸ್, ಕಾರ್ಯದರ್ಶಿ ಬಾತಿಶ್ ಬಡಕೋಡಿ, ಅಲಿ ನಾಜೂಕು, ಬಶೀರ್ ಬಡಕೋಡಿ, ಹಮೀದ್ ಕೆ ಎಸ್, ಸುಲೈಮಾನ್ ಉರಿಮಜಲ್, ಉಮ್ಮರ್ ಸಂಪ್ಯ, ಮೊಹಮ್ಮದ್ ಕುಞ ಬಾಬಾ, ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.