ಮಾ.23-31: ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿ ರದ್ದು – ಪತ್ರಕರ್ತರ ಸಂಘದ ಅಧ್ಯಕ್ಷ ಸಂಶುದ್ದೀನ್ ಸಂಪ್ಯ

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ಪುತ್ತೂರು ಪತ್ರಕರ್ತರ ಸಂಘದ ವತಿಯಿಂದ ಪುತ್ತೂರಿನ ಪತ್ರಿಕಾ ಭವನದಲ್ಲಿ ನಡೆಸಲಾಗುವ ಪತ್ರಿಕಾಗೋಷ್ಠಿಗಳನ್ನು ಮಾ.23ರಿಂದ 31ರ ತನಕ ರದ್ದುಪಡಿಸಲಾಗಿದೆ.

ಪ್ರೆಸ್ ಮೀಟ್‌ನಲ್ಲಿ ಹಲವು ಮಂದಿ ಒಟ್ಟಾಗಿ ಸೇರುವ ಜಾಗವಾಗುವ ಕಾರಣ ಪತ್ರಕರ್ತರ ಆರೋಗ್ಯದ ದೃಷ್ಠಿಯಿಂದ ಈ ಅನಿವಾರ್ಯ ಕ್ರಮವನ್ನು ಪತ್ರಕರ್ತ ಸಂಘದ ಸದಸ್ಯರ ಒಪ್ಪಿಗೆ ಮೇರೆಗೆ ಹಾಗೂ ಸುದ್ದಿ ಮಾಡುವ ಸಂದರ್ಭದಲ್ಲಿ ಪತ್ರಕರ್ತರು ಸರಕಾರ ನೀಡಿರುವ ಎಚ್ಚರಿಕೆಯನ್ನು ಪಾಲಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಪತ್ರಕರ್ತರ ಸಂಘದ ಅಧ್ಯಕ್ಷ ಸಂಶುದ್ದೀನ್ ಸಂಪ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.