ಕೊಣಾಲು: ಕಡೆಂಬಿಲತ್ತಾಯ ಗುಡ್ಡೆ ದೈವಸ್ಥಾನದ ಪ್ರತಿಷ್ಠಾ ಮಹೋತ್ಸವ, ನೇಮೋತ್ಸವ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಕೊಣಾಲು ಗ್ರಾಮದ ಕಡೆಂಬಿಲತ್ತಾಯ ಗುಡ್ಡೆ ಚಕ್ರವರ್ತಿ ಕೊಡಮಣಿತ್ತಾಯಿ ಮತ್ತು ಪರಿವಾರ ದೈವಗಳ 7ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವ ಮಾ.2೦ ಮತ್ತು 21ರಂದು ನಡೆಯಿತು.
ತಂತ್ರಿಗಳಾದ ಕೆಮ್ಮಿಂಜೆ ಬ್ರಹ್ಮಶ್ರೀ ವೇದಮೂರ್ತಿ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ನೇತೃತ್ವದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಹೆಬ್ಬಾರ್ ಹಾಗೂ ಅರ್ಚಕರ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮ ನಡೆಯಿತು. ಮಾ.೨೦ರಂದು ಬೆಳಿಗ್ಗೆ ಕಡೆಂಬಿಲ ನಾಗಬನದಲ್ಲಿ ನಾಗತಂಬಿಲ, ಬಳಿಕ ಕಡೆಂಬಿಲತ್ತಾಯ ಗುಡ್ಡೆಯಲ್ಲಿ ಗಣಪತಿ ಹೋಮ, ದೈವಗಳಿಗೆ ಕಲಶಾಭಿಷೇಕ, ತಂಬಿಲ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ತೋರಣಮುಹೂರ್ತ, ಗ್ರಾಮಸ್ಥರಿಂದ ದೈವಗಳಿಗೆ ಪ್ರಾರ್ಥನೆ, ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ ಮಾಪಲ್ತರಮಜಲಿನಿಂದ ಚಕ್ರವರ್ತಿ ಕೊಡಮಣಿತ್ತಾಯಿ, ದೈವಂಕುಲು, ಮೈಸಂತಾಯ, ರುದ್ರಾಂಡಿ ದೈವಗಳ, ಹೊಸಮನೆಯಿಂದ ಕಡೆಂಬಿಲತ್ತಾಯ, ಪಂಜುರ್ಲಿ ದೈವಗಳ, ಎಣ್ಣೆತ್ತೋಡಿಯಿಂದ ಶಿರಾಡಿ ದೈವದ, ಕಾಯರ್ತಡ್ಕದಿಂದ ಕಲ್ಕುಡ, ಕಲ್ಲುರ್ಟಿ, ಗುಳಿಗ ದೈವಗಳ ಭಂಡಾರ ತರುವ ಕಾರ್ಯಕ್ರಮ ನಡೆಯಿತು. ರಾತ್ರಿ ಅನ್ನಸಂತರ್ಪಣೆ ನಡೆಯಿತು.

ಬಳಿಕ ಚಕ್ರವರ್ತಿ ಕೊಡಮಣಿತ್ತಾಯಿ, ದೈವಂಕ್ಲು, ಮೈಸಂತಾಯ, ರುದ್ರಾಂಡಿ, ಕಡೆಂಬಿಲತ್ತಾಯ, ಪಂಜುರ್ಲಿ, ಶಿರಾಡಿ ದೈವ, ಕಲ್ಕುಡ, ಕಲ್ಲುರ್ಟಿ, ಗುಳಿಗ ದೈವಗಳ ನೇಮೋತ್ಸವ ನಡೆಯಿತು. ಓಬಯ್ಯ ಹಳೆನೇರೆಂಕಿ, ಯಾದವ, ಲೋಕಯ್ಯ, ಗಣೇಶ, ನೀಲಯ್ಯ ಕೊಕ್ಕಡ, ಶರತ್ ಕೊಕ್ಕಡ, ಸಂದೇಶ್ ಪಂಜರವರು ದೈವಗಳ ನರ್ತನ ಸೇವೆ ನೆರವೇರಿಸಿದರು. ಮಾ.೨೧ರಂದು ಮಧ್ಯಾಹ್ನದ ವೇಳೆಗೆ ದೈವಗಳ ನರ್ತನ ಸೇವೆ ಸಂಪನ್ನಗೊಂಡಿತು. ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ರೈ ಕೊಣಾಲುಗುತ್ತು, ಕಾರ್ಯದರ್ಶಿ ಪದ್ಮನಾಭ ಗೌಡ ಹೊಸಮನೆ, ಕೋಶಾಧಿಕಾರಿ ಚಂದಪ್ಪ ಗೌಡ, ಆಡಳಿತ ಸಮಿತಿ ಸದಸ್ಯರಾದ ಜಗದೀಶ ಶೆಟ್ಟಿ ಕಡೆಂಬಿಲ, ದಿನೇಶ್ ಗೌಡ ಕೋಲ್ಪೆ, ವಿಶ್ವನಾಥ ಪೂಜಾರಿ ಕಲಾಯಿ, ಪ್ರಕಾಶ್ ಸುವರ್ಣ ಕುರೊಂಬೊಟ್ಟು, ಪ್ರಮುಖರಾದ ಬಾಲಕೃಷ್ಣ ರೈ ತೋಟ, ಭಾಸ್ಕರ ರೈ ತೋಟ, ಮುತ್ತಪ್ಪ ಗೌಡ ಎಣ್ಣೆತ್ತೋಡಿ, ಕೊರಗಪ್ಪ ಗೌಡ ಎಣ್ಣೆತ್ತೋಡಿ, ಡೊಂಬಯ್ಯ ಗೌಡ ಎಣ್ಣೆತ್ತೋಡಿ, ಸಾಂತಪ್ಪ ಗೌಡ ಎಣ್ಣೆತ್ತೋಡಿ, ರಘುರಾಮ ಶೆಟ್ಟಿ ಕಡೆಂಬಿಲ, ಲಿಂಗಪ್ಪ ಗೌಡ ದರ್ಖಾಸು, ಎಂ.ಪಿ. ಜತ್ತಪ್ಪ ಗೌಡ ಮಣ್ಣಮಜಲು, ಅಣ್ಣಿ ಗೌಡ ಮಣ್ಣಮಜಲು, ಎಂ.ಎಸ್, ಜತ್ತಪ್ಪ ಗೌಡ, ತ್ಯಾಂಪಣ್ಣ ದೇವಾಡಿಗ, ಬಾಬು ಪೂಜಾರಿ ಅಂಬರ್ಜೆ, ಆನಂದ ಪೂಜಾರಿ ಅಂಬರ್ಜೆ, ಗಣೇಶ ಪಾಂಡಿಬೆಟ್ಟು, ಶ್ರೀಧರ ಪಾಂಡಿಬೆಟ್ಟು, ಶಂಕರ್ ಹೊಸಮನೆ, ಪ್ರಭಾನಂದ ಗೌಡ ಹೊಸಮನೆ, ರಾಜ್‌ಶೇಖರ್ ಗೌಡ ಹೊಸಮನೆ, ಕಮಲಾಕ್ಷ ಗೌಡ ಹೊಸಮನೆ, ಕಿರಣ್ ಗೌಡ ಹೊಸಮನೆ, ಜಯಂತ ಗೌಡ ಹೊಸಮನೆ, ನೀಲಯ ಗೌಡ ಕೋಲ್ಪೆ, ಲಿಂಗಪ್ಪ ಪೂಜಾರಿ ಮುಡಿಪಿನಡ್ಕ, ರತ್ನಾಕರ ಕಾರ್ಯತ್ತಡ್ಕ, ಶೇಖರ್ ಗೌಡ ಕಾರ್ಯತ್ತಡ್ಕ, ಸುಂದರ ಗೌಡ ಸುರಕ್ಷ ನಿಲಯ, ರಮೇಶ ಗೌಡ ಕಾರ್ಯತಡ್ಕ, ನಾಗೇಶ ಗೌಡ ಮರಂದೆ, ಬಾಲಪ್ಪ ಪೂಜಾರಿ ಕಲಾಯಿ, ಜನಾರ್ದನ ಪೂಜಾರಿ ಕಲಾಯಿ, ನೋಣಯ್ಯ ಗೌಡ ಡೆಬ್ಬೇಲಿ, ಸದಾನಂದ ಗೌಡ ಡೆಬ್ಬೇಲಿ, ಮೋನಪ್ಪ ಗೌಡ ಎಣ್ಣೆತ್ತೋಡಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.