ನೂಜಿಬಾಳ್ತಿಲದಲ್ಲಿ ಮದ್ಯ ಮಾರಾಟದ ಅಂಗಡಿ ಕೊನೆಗೂ ಬಂದ್

Puttur_Advt_NewsUnder_1
Puttur_Advt_NewsUnder_1

ಕಡಬ: ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯಲ್ಲಿ ಕಾರ್ಯಾಚರಿಸುತ್ತಿರುವ ಡಯಾನ ವೈನ್ ಶಾಪ್ ಮಾ.22ರ ಮಧ್ಯಾಹ್ನದ ಬಳಿಕ ಮದ್ಯ ಮಾರಾಟವನ್ನು ಸ್ಥಗಿತಗೊಳಿಸಿದೆ.

ಕೊರೋನಾ ಮುಂಜಾಗ್ರತಾ ಕ್ರಮವಾಗಿ ಪ್ರಧಾನ ಮಂತ್ರಿಯವರ ಜನತಾ ಕರ್ಫ್ಯೂ ಇದ್ದರೂ ಅಲ್ಲದೆ ಎಲ್ಲೆಡೆ ಪ್ರತಿಯೊಂದು ಅಂಗಡಿ, ವಾಹನಗಳು ಬಂದ್ ಆಚರಿಸಿದ್ದರೂ ಕಲ್ಲುಗುಡ್ಡೆಯಲ್ಲಿ ಮದ್ಯಮಾರಾಟ ನಡೆಯುತ್ತಿದ್ದುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿತ್ತು, ಈ ಬಗ್ಗೆ ಸಾರ್ವಜನಿಕರೂ ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಿದ್ದು ಕೂಡಲೇ ಕಾರ್ಯಪ್ರವೃತ್ತರಾದ ಅಬಕಾರಿ ಇಲಾಖೆಯ ಅಧಿಕಾರಿಗಳ ಸೂಚನೆ ಮೇರೆಗೆ ವೈನ್ ಶಾಪ್ ಬಂದ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ವೈನ್ ಶಾಪ್ ಬಂದ್ ಮಾಡುವಂತೆ ಈ ಮೊದಲೇ ಅಬಕಾರಿ ಅಧಿಕಾರಿಗಳು ನೋಟಿಸು ನೀಡಿದ್ದರೂ ಅದನ್ನು ವೈನ್ ಶಾಪ್ ಮಾಲಕರು ಗಣನೆಗೆ ತೆಗೆದುಕೊಂಡಿಲ್ಲ ಎಂದು ಹೇಳಲಾಗಿದೆ 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.