Breaking News

ಉಪ್ಪಿನಂಗಡಿ ಪೇಟೆಯಲ್ಲಿ ಲಾಕ್‌ಡೌನ್ ಆದೇಶ ಪಾಲನೆಯ ನಿರ್ಲಕ್ಷ

Puttur_Advt_NewsUnder_1
Puttur_Advt_NewsUnder_1
  • ತೆರೆದಿದ್ದ ಅಂಗಡಿಗಳನ್ನು ಮುಚ್ಚುವಂತೆ ಪೊಲೀಸ್, ಪಂಚಾಯಿತಿ ಸೂಚನೆ
  • ವಾಹನಗಳ ದಟ್ಟನೆ, ಟ್ರಾಫಿಕ್ ಜಾಮ್.

 

ಉಪ್ಪಿನಂಗಡಿ: ಕೊರೋನಾ ವೈರಸ್ ಮುಂಜಾಗ್ರತಾ ಸಲುವಾಗಿ ದ.ಕ. ಜಿಲ್ಲೆಯಲ್ಲಿ ಲಾಕ್‌ಡೌನ್ ಆದೇಶ ಇದ್ದಾಗ್ಯೂ, ಉಪ್ಪಿನಂಗಡಿ ಪೇಟೆಯಲ್ಲಿ ವ್ಯಾಪಾರ, ವ್ಯವಹಾರ ಎಂದಿನಂತೆ ಆರಂಭ ಆಗಿದ್ದು, ಜಿಲ್ಲಾಧಿಕಾರಿ ಆದೇಶದಂತೆ ಪೊಲೀಸ್ ಮತ್ತು ಗ್ರಾಮ ಪಂಚಾಯಿತಿ ಅಂಗಡಿಗಳನ್ನು ಮುಚ್ಚುವಂತೆ ಸೂಚನೆ ನೀಡಿದ್ದು, ಆ ಬಳಿಕ ಅಂಗಡಿಗಳನ್ನು ಮುಚ್ಚಲ್ಪಟ್ಟಿತು.

ಉಪ್ಪಿನಂಗಡಿ ಪೇಟೆಯಲ್ಲಿ ಬೆಳಿಗ್ಗಿನಿಂದಲೇ ಒಂದೊಂದೇ ಅಂಗಡಿಗಳು ತೆರೆಯಲಾರಂಭಿಸಿ, 10-30ರ ಗಂಟೆಯ ಹೊತ್ತಿಗೆ ಬಹುತೇಕ ಅಂಗಡಿಗಳು ತೆರೆದುಕೊಂಡವು. ಪೇಟೆಯಲ್ಲಿ ಜನಜಾತ್ರೆ ಕಂಡು ಬಂದವು. ಈ ಬೆಳವಣಿಗೆ ಬಗ್ಗೆ ಸಾರ್ವಜನಿಕರಿಂದ ಜಿಲ್ಲಾಧಿಕಾರಿಗೆ ದೂರು ಹೋಗಿದ್ದು, ಅದರಂತೆ ಜಿಲ್ಲಾಧಿಕಾರಿ ಅಂಗಡಿಗಳನ್ನು ಬಂದ್ ಮಾಡಿಸುವಂತೆ ಪೊಲೀಸ್ ಮತ್ತು ಗ್ರಾಮ ಪಂಚಾಯಿತಿಗೆ ಆದೇಶ ನೀಡಿದ್ದಾರೆ.

ಜಿಲ್ಲಾಧಿಕಾರಿ ಆದೇಶದಂತೆ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಮೈಕ್ ಪ್ರಚಾರ ಮಾಡಿ ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಿದ್ದು, ಜೊತೆಗೆ ಪೊಲೀಸರೂ ರಸ್ತೆಗೆ ಇಳಿದು ಅಂಗಡಿಗಳನ್ನು ಬಂದ್ ಮಾಡಿ ಸಹಕರಿಸುವಂತೆ ತಿಳಿಸಿದರು. ಅದರಂತೆ ಅಂಗಡಿ ವರ್ತಕರು ತೆರೆದಿದ್ದ ಅಂಗಡಿಗಳನ್ನು ಮತ್ತೆ ಬಂದ್ ಮಾಡಿ ತೆರಳಿದ್ದಾರೆ.

ಟ್ರಾಫಿಕ್ ಜಾಮ್:
ಅಂಗಡಿ ತೆರದಿರುವ ಸುದ್ದಿ ಹರಡುತ್ತಿದ್ದಂತೆ ಗ್ರಾಮೀಣ ಪ್ರದೇಶದಲ್ಲಿರುವ ಸಣ್ಣಪುಟ್ಟ ಅಂಗಡಿಗಳವರು ರಖಂ ಅಂಗಡಿಗಳಿಂದ ಸಾಮಾಗ್ರಿ ಖರೀದಿಗಾಗಿ ವಾಹನ ಸಮೇತ ಬಂದಿದ್ದು, ಅದಾಗ್ಯೂ ಕೂಲಿ ಕಾರ್ಮಿಕರೂ ಅಂಗಡಿ ತೆರೆದಿರುವ ಬಗ್ಗೆ ತಿಳಿದುಕೊಂಡು ದಿನಸಿ ಸಾಮಾಗ್ರಿ ಖರೀದಿಗೆ ಬಂದಿದ್ದು, ಹೀಗಾಗಿ ಪೇಟೆಯಲ್ಲಿರುವ ಬೇಂಕ್ ರಸ್ತೆಯಲ್ಲಿ ವಾಹನ ಸಂಚಾರ ಅಧಿಕಾವಾಗಿ ಟ್ರಾಫಿಕ್ ಜಾಮ್ ಆಗಿರುವುದು ಕಂಡು ಬಂತು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.