Home_Page_Advt
Home_Page_Advt
Breaking News

ಮಾ.23ರಿಂದ ರಾಜ್ಯದಾದ್ಯಂತ ಶಿಕ್ಷಕರು, ಬೋಧಕೇತರ ಸಿಬಂದಿಗಳಿಗೂ ರಜೆ

ಪುತ್ತೂರು:ಕೊರೋನಾ ವೈರಸ್ ಹರಡುವ ಭೀತಿಯ ಹಿನ್ನೆಲೆಯಲ್ಲಿ ಮಾ.23ರಿಂದ ಮಾ.31ರ ತನಕ ರಾಜ್ಯ ಎಲ್ಲಾ ಶಾಲಾ ಶಿಕ್ಷಕರಿಗೆ ರಜೆ ಘೋಷಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ರಾಜ್ಯದ ಎಲ್ಲಾ ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿನ ಶಿಕ್ಷಕರು, ಬೋಧಕೇತರರು, ಸಂಶೋಧಕರು ಹಾಗೂ ಇತರ ಎಲ್ಲಾ ಸಿಬಂದಿಗಳಿಗೆ ಮನೆಯಿಂದಲೇ ಶಾಲಾ ಕೆಲಸ ನಿರ್ವಹಿಸಲು ಅನುಮತಿ ನೀಡಲಾಗಿದೆ. ಅಲ್ಲದೆ ಶಿಕ್ಷಕರು, ಬೋಧಕ, ಸಿಬಂದಿಗಳು ಈ ಅವಧಿಯಲ್ಲಿ ಆನ್‌ಲೈನ್ ಮೂಲಕ ಬೋಧನೆ, ಮೌಲ್ಯ ಮಾಪನ, ಮಾಡಲು ಅಗತ್ಯವಿರುವ ಪಠ್ಯವಸ್ತುವನ್ನು ಅಭಿವೃದ್ಧಿ ಪಡಿಸುವುದು, ಮುಂದಿನ ಶೈಕ್ಷಣಿಕ ವರ್ಷಕ್ಕೆ ಅಗತ್ಯವಿರುವ ಪಠ್ಯ ಯೋಜನೆ, ಟಿಪ್ಪಣಿಯನ್ನು ಸಿದ್ದಪಡಿಸುವುದು ಹಾಗೂ ತಾವು ಬೋಧಿಸುವ ವಿಷಯದ ಪಠ್ಯವಸ್ತುವನ್ನು ಅಭಿವೃದ್ಧಿ ಪಡಿಸುವಂತೆ ಸೂಚಿಸಲಾಗಿದೆ. ಮಾ.31ರ ತನಕ ಶಿಕ್ಷಕರು, ಬೋಧಕೇತರ ಸಿಬಂದಿ, ಸಂಶೋಧಕರು, ಗುತ್ತಿಗೆ, ಗೌರವ ಶಿಕ್ಷಕರು ಸೇರಿದಂತೆ ಎಲ್ಲಾ ಸಿಬಂದಿ ವರ್ಗದವರ ರಜಾ ಅವಧಿಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸುವುದು.

ಹಾಸ್ಟೆಲ್ ಹಾಗೂ ಸನಿವಾಸ ಶಾಲೆಗಳಲ್ಲಿ ಉಳಿದುಕೊಂಡಿರುವ ವಿದೇಶಿ ವಿದ್ಯಾರ್ಥಿಗಳು ಸದರಿ ಹಾಸ್ಟೆಲ್, ಸನಿವಾಸ ಶಾಲೆಗಳಲ್ಲಿ ಉಳಿದುಕೊಳ್ಳಲು ಅಗತ್ಯ ಸೌಲಭ್ಯಗಳ್ನು ಒದಗಿಸುವುದು. ಹಾಗೂ ಅವರ ಸುರಕ್ಷತೆಗಾಗಿ ಎಲ್ಲಾ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವುದು. ಶಿಕ್ಷಕರು, ಬೋಧಕೇತರ ಸಿಬಂದಿ, ಸಂಶೋಧಕರು, ಗುತ್ತಿಗೆ, ಗೌರವ ಶಿಕ್ಷಕರು ಸೇರಿದಂತೆ ಎಲ್ಲಾ ಸಿಬಂದಿ ವರ್ಗದವರನ್ನು ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಲು ಅವರ ದೂರವಾಣಿ ಸಂಖ್ಯೆಗಳು, ಇ.ಮೇಲ್ ವಿಳಾಸಗಳ್ನು ಶಾಲಾ ಆಡಳಿತ ಮಂಡಳಿ ಮುಖ್ಯಶಿಕ್ಷಕರು ಪಡೆದುಕೊಳ್ಳುವುದು. ಈ ರಜಾ ಅವಧಿಯಲ್ಲಿ ಶಿಕ್ಷಕರು, ಬೋಧಕೇತರ ಸಿಬಂದಿಗಳು ಯಾವುದೇ ಕಾರಣಕ್ಕೂ ಕೇಂದ್ರ ಸ್ಥಾನವನ್ನು ಬಿಡತಕ್ಕದಲ್ಲ. ಸರಕಾರಕ್ಕೆ ಶಿಕ್ಷಕರ, ಬೋಧಕೇತರ ಸಿಬಂದಿಯವರ ಸೇವೆ ಅಗತ್ಯವಿದ್ದಾಗ ಕಡ್ಡಾಯವಾಗಿ ಸೇವೆ ಹಾಜರಾಗತಕ್ಕದ್ದು ಎಂದು ಶಿಕ್ಷಣ ಇಲಾಖೆಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.