HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

‘ಹೈಡ್ರಾಕ್ಸಿ ಕ್ಲೋರೊಕ್ವೈನ್’ ಕೊರೊನಾ ಎಫೆಕ್ಟ್ ತಡೆಗಟ್ಟಬಲ್ಲುದು – ಡಾ. ಜೆ.ಸಿ. ಅಡಿಗ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಹೈಡ್ರಾಕ್ಸಿ ಕ್ಲೊರೋಕ್ವಿನ್ ಎಂಬ ಔಷಧಿ ಮನುಷ್ಯ ದೇಹದಲ್ಲಿ ಕೊರೊನಾ ವೈರಾಣು ಉಂಟುಮಾಡುವ ಪರಿಣಾಮಗಳನ್ನು ತಡೆಗಟ್ಟಬಲ್ಲುದು ಎಂಬ ಕುತೂಹಲಕಾರಿ ವಿಷಯ ಇದೀಗ ಪ್ರಚಲಿತದಲ್ಲಿದೆ. ಈ ಮಾತನ್ನು ಪುತ್ತೂರಿನ ಚೇತನಾ ಆಸ್ಪತ್ರೆಯ ವೈದ್ಯಕೀಯ ತಜ್ಞರಾದ ಡಾ. ಜೆ.ಸಿ. ಅಡಿಗರವರೂ ಸ್ಪಷ್ಟಪಡಿಸಿದ್ದಾರೆ. ಸಾಮಾನ್ಯವಾಗಿ ಯುವಕರು, ಮಕ್ಕಳು ಮತ್ತು ಗರ್ಭಿಣಿ ಹೆಂಗಸರಿಗೆ ಈ ಔಷಧಿ ಉಪಯುಕ್ತವಾಗಲಿದೆ. ಇದರಲ್ಲಿ ಎಚ್‌ಸಿಕ್ಯುಎಸ್ ರಲ್ಲಿ 2೦೦ ಮತ್ತು 4೦೦ ಮಿ.ಗ್ರಾಂ. ಮತ್ತು ಎಚ್‌ಐಕ್ಯು ರಲ್ಲಿ 400 ಮಿ.ಗ್ರಾಂ. ಲಭ್ಯವಿರುತ್ತದೆ. 2೦೦ ಮಿ.ಗ್ರಾಂ. ಮಕ್ಕಳಲ್ಲಿ ಮತ್ತು 4೦೦ ಮಿ.ಗ್ರಾಂ. ದೊಡ್ಡವರು ತೆಗೆದುಕೊಳ್ಳಬಹುದು. ಇದನ್ನು ದೀರ್ಘಕಾಲದವರೆಗೆ ಸೇವಿಸುವುದರಿಂದ ಸಾಮಾನ್ಯವಾಗಿ ಸಂಧಿವಾತ, ಮಧುಮೇಹದಂತಹ ಖಾಯಿಲೆಗಳು ಬರುವುದಿಲ್ಲ. ಅದೇ ರೀತಿಯಾಗಿ ಕೊರೊನಾ ವೈರಾಣು ಸೋಂಕದಂತೆಯೂ ಇದನ್ನು ಸೇವಿಸಬಹುದಾಗಿದೆ. ಈಗಾಗಲೇ ಅಮೆರಿಕಾದಲ್ಲಿ ಈ ಔಷಧಿ ಬಹು ಬೇಡಿಕೆಯನ್ನು ಪಡೆದಿದೆ. ಇಂತಹ ಔಷಧಿಯ ಬಳಕೆ ದ್ವಿತೀಯವಾಗಿರುತ್ತದೆ. ಮುಖ್ಯವಾಗಿ ಈಗ ಕೊರೊನಾ ಬಾರದಂತೆ ತಡೆಗಟ್ಟಲು ವ್ಯಾಕ್ಸಿನ್ ತಯಾರಿಕೆ ಕೇವಲ ಪ್ರಾಯೋಗಿಕ ಹಂತದಲ್ಲಿರುವುದರಿಂದ ವೈಯುಕ್ತಿಕ ಕಾಳಜಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಕೋವಿಡ್ 19 ವೇಗವಾಗಿ ಹರಡದಿರಲು ಪ್ರಧಾನ ಸೂತ್ರ ಎಂದು ಡಾ. ಜೆ.ಸಿ. ಅಡಿಗ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.