HomePage_Banner
HomePage_Banner
HomePage_Banner
HomePage_Banner

‘ಚಪ್ಪಾಳೆಗೆ ಪರಂಪರಾನುಗತವಾದ ಮಹತ್ವವಿದೆ’ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ

Puttur_Advt_NewsUnder_1
Puttur_Advt_NewsUnder_1


ಕಡಬ: ಸಂಜೆ 5ಗಂಟೆಯಿಂದ 5 ನಿಮಿಷಗಳ ಕಾಲ ಚಪ್ಪಾಳೆ ಬಡಿಯುವ ಮೂಲಕ ಕೊರೋನಾ ವಿರುದ್ಧ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಬೇಕು ಅನ್ನುವುದು ಪ್ರಧಾನಿಯವರ ಆಶಯ. ಅದರಂತೆ ನಾವು ಚಪ್ಪಾಳೆಯ ಮೂಲಕ ಕೃತಜ್ಞತೆ ಸಮರ್ಪಿಸಿದ್ದೇವೆ. ಚಪ್ಪಾಳೆಗೆ ಪರಂಪರಾನುಗತವಾದ ಮಹತ್ವವಿದೆ. ಅನೇಕ ಮಂದಿ ಜಪಾದಿಗಳನ್ನು ಮಾಡುವಾಗ ಕೂಡಾ ಚಪ್ಪಾಳೆ ಹೊಡೆಯುವುದನ್ನು ನಾವು ಕಾಣುತ್ತೇವೆ. ಯಾಗ-ಯಜ್ಞಾಧಿಗಳ ಕಾಲದಲ್ಲಿ ಚಪ್ಪಾಳೆ ಬಡಿಯುವ ಸಂಪ್ರದಾಯವಿದೆ. ದುಷ್ಟರನ್ನು ಮತ್ತು ದುಷ್ಟ ರೋಗಗಳನ್ನು ದೂರ ಮಾಡಲು ಕೂಡಾ ಚಪ್ಪಾಳೆ ಬಡಿಯಲಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಚಪ್ಪಾಳೆ ಬಡಿಯುವುದು ಅತ್ಯಂತ ಮಹತ್ವಪೂರ್ಣವಾದುದು. ಅಂಗೈಯಲ್ಲಿ ಸಮಸ್ತ ಇಂದ್ರಿಯಗಳ ಪ್ರಭಾವವಿರುವುದರಿಂದ ಸಮಸ್ತ ಇಂದ್ರಿಯಗಳ ಜಾಗೃತಿಗೆ ಚಪ್ಪಾಳೆ ಪ್ರಶಸ್ತವಾದುದು ಎಂದು ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಪ್ರಧಾನ ಮಂತ್ರಿಗಳ ಆಶಯದಂತೆ ಭಾನುವಾರ ಸುಬ್ರಹ್ಮಣ್ಯ ಮಠದಲ್ಲಿ ಕರೋನಾ ವೈರಸ್ ರೋಗ ನಿಯಂತ್ರಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸೇವಾ ಸಂಸ್ಥೆಗಳಿಗೆ ಕೃತಜ್ಞತಾ ಪೂರ್ವಕ ಕರತಾಡಣ ಸಮರ್ಪಿಸಿ ಶ್ರೀಗಳು ಮಾತನಾಡಿದರು. ಈ ಕಾಯಿಲೆಯ ವಿರುದ್ದ ಸೇನೆ, ವೈದ್ಯಕೀಯ ಸಿಬ್ಬಂಧಿ, ಪೋಲಿಸ್ ಸಿಬ್ಬಂದಿ, ಸ್ವಯಂಸೇವಾ ಸಂಘಟನೆಗಳು ಇತ್ಯಾದಿಗಳು ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆಯನ್ನು ಮಾಡುತ್ತಿವೆ. ಅವರ ಕಾರ್ಯವನ್ನು ಶ್ಲಾಸುವ ನಿಟ್ಟಿನಲ್ಲಿ ಪ್ರಧಾನಿಯವರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿ ಅಭಿನಂದಿಸಲು ವಿನಂತಿಸಿದ್ದಾರೆ. ಅದೇ ರೀತಿ ನಾವೆಲ್ಲರೂ ಚಪ್ಪಾಳೆ ತಟ್ಟುವ ಮೂಲಕ ಅವರ ನಿಸ್ವಾರ್ಥ ಸೇವೆಯನ್ನು ಪ್ರೋತ್ಸಾಹಿಸಿದ್ದೇವೆ. ಅವರೆಲ್ಲರಿಗೂ ಶುಭವಾಗಲಿ. ಅಲ್ಲದೆ ರೋಗ ಪೀಡಿತರೆಲ್ಲರೂ ಆರೋಗ್ಯವಂತರಾಗಲಿ, ಆರೋಗ್ಯವಂತರೆಲ್ಲರೂ ಸುರಕ್ಷಿತವಾಗಿರಲಿ, ಸರ್ವರಿಗೂ ಒಳಿತಾಗಲಿ, ಜನ ನಾಯಕರಿಗೂ ಶ್ರೀ ದೇವರ ಆಶೀರ್ವಾದ ಸದಾ ಇರಲಿ ಎಂದು ಈ ಸಂದರ್ಭದಲ್ಲಿ ಹಾರೈಸುತ್ತೇವೆ ಎಂದು ಶ್ರೀಗಳು ಹೇಳಿದರು.

ಶ್ರೀ ಮಠದಲ್ಲಿ ಭಜನೆ ಮತ್ತು ಶಂಖನಾದ: ಶ್ರೀ ಮಠದಲ್ಲಿ ಭಾನುವಾರ 5 ಗಂಟೆಗೆ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಮಠದಲ್ಲಿ ಕರತಾಡಣದ ಮೂಲಕ ಕೃತಜ್ಞತೆ ಸಮರ್ಪಿಸಲಾಯಿತು. ಅಲ್ಲದೆ ಈ ಸಂದರ್ಭದಲ್ಲಿ ಭಜನೆ, ಶಂಖ, ಜಾಗಟೆ ನಿನಾದವನ್ನು ಮೊಳಗಿಸಿ ಅಭಿನಂದನೆ ಸಮರ್ಪಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.