ಸಾರಡ್ಕದಲ್ಲಿ ಪೊಲೀಸರ ಕರ್ತವ್ಯಕ್ಕೆ ತಡೆ: ಓರ್ವನ ಬಂಧನ

Puttur_Advt_NewsUnder_1
Puttur_Advt_NewsUnder_1


ವಿಟ್ಲ: ಕೊರೋನ ಹರಡುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರ ಆದೇಶದನುಸಾರ ವಿಟ್ಲ ಠಾಣಾ ವ್ಯಾಪ್ತಿಯ ಸಾರಡ್ಕ ಚೆಕ್ಕಪೋಸ್ಟ್ ನಲ್ಲಿ ರಸ್ತೆ ಬಂದ್ ಮಾಡಿ ಕೇರಳ- ಕರ್ನಾಟಕದ ಮಧ್ಯೆ ಸಂಚಾರ ನಿಷೇಧಿಸಿರುವ ಪೊಲೀಸ್ ಸಿಬಂದಿಗಳಿಗೆ ಬೆದರಿಕೆ ಹಾಕಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ವ್ಯಕ್ತಿಯೋರ್ವರನ್ನು ವಿಟ್ಲ ಠಾಣಾ ಎಸ್.ಐ ವಿನೋದ್ ರೆಡ್ಡಿಯವರ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.

ಪೆರ್ಲ ಸಮೀಪದ ನಲ್ಕ ನಿವಾಸಿ ರಾಘವೇಂದ್ರ ರಾವ್ (5೦ ವ.) ಬಂಧಿತ ಆರೋಪಿಯಾಗಿದ್ದಾರೆ. ಕೇರಳದ ಕಾಸರಗೋಡು ಭಾಗದಲ್ಲಿ ತೀವ್ರ ರೀತಿಯಲ್ಲಿ ಕೊರೊನಾ ಹರಡುತ್ತಿರುವ ಹಿನ್ನಲೆಯಲ್ಲಿ ಮಾ.21ರ ಮಧ್ಯಾಹ್ನ 2ಗಂಟೆಯಿಂದ ದಕ್ಷಿಣ ಕನ್ನಡ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲು ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಪೊಲೀಸ್ ಇಲಾಖೆಯೂ ಚೆಕ್ ಪೋಸ್ಟ್ ಗಳನ್ನು ಬಂದ್ ಮಾಡಿ ವಾಹನಗಳನ್ನು ವಾಪಾಸ್ ಕಳುಹಿಸುವ ಪ್ರಯತ್ನ ಮಾಡಿತ್ತು. ಬೆಳಗ್ಗಿನಿಂದಲೇ ಅಡ್ಯನಡ್ಕ ಕಡೆಯಿಂದ ಕೇರಳಕ್ಕೆ ಪ್ಯಾಕೆಟ್ ಹಾಲು ವಿತರಣೆ ಮಾಡುವ ನೆಪದಲ್ಲಿ ಸ್ಕೂಟರ್‌ನಲ್ಲಿ ಹಲವು ಬಾರಿ ಸಂಚರಿಸಿದ ರಾಘವೇಂದ್ರ ಅವರಿಗೆ ಮಧ್ಯಾಹ್ನ ೨ರ ಬಳಿಕ ವಾಹನ ಸಂಚಾರ ಇಲ್ಲ ಎಂದು ಪೊಲೀಸರು ತಿಳಿಸಿದ್ದರು. ಆದರೆ ಅದನ್ನು ನಿರ್ಲಕ್ಷಿಸಿ ಸಂಚರಿಸಿದ್ದ ರಾಘವೇಂದ್ರ ಅವರು ಗೇಟ್ ಬಂದ್ ಮಾಡಿದ ಬಳಿಕ ಅಡ್ಯನಡ್ಕಕ್ಕೆ ಬಿಡಬೇಕೆಂದು ಅಲ್ಲಿದ್ದ ಪೊಲೀಸರೊಂದಿಗೆ ಪಟ್ಟಹಿಡಿದಿದ್ದರು.

ಸಾಯಂಕಾಲ ವಿಟ್ಲ ಪೊಲೀಸ್ ಠಾಣಾ ಎಸ್.ಐ. ವಿನೋದ್ ರೆಡ್ಡಿಯವರು ಸಾರಡ್ಕಕ್ಕೆ ಬಂದಾಗ ಅವರ ಜೊತೆಗೂ ತಗಾದೆ ತೆಗೆದು ಅಡ್ಯನಡ್ಕದಲ್ಲಿ ಅಂಗಡಿ ಇರುವುದರಿಂದ ವಾಹನ ಸಂಚಾರಕ್ಕೆ ಅನುವು ಮಾಡಬೇಕೆಂದು ಹೇಳಿದ್ದರು. ಹಿರಿಯ ಅಧಿಕಾರಿಗಳ ಆದೇಶದ ಪ್ರಕಾರ ಕ್ರಮಕೈಗೊಂಡಿದ್ದೇವೆ ಎಂದರೂ ಒಪ್ಪದ ರಾಘವೇಂದ್ರ ರಾವ್ ಎಸ್.ಐ ಅವರೊಂದಿಗೆ ಜಗಳಕ್ಕಿಳಿದು ಅಲ್ಲಿದ್ದ ಕೆಲವರನ್ನು ಪೊಲೀಸರ ವಿರುದ್ದವೇ ಎತ್ತಿಕಟ್ಟುವ ಪ್ರಯತ್ನ ಮಾಡಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ ಅಲ್ಪಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಆತನನ್ನು ವಶಕ್ಕೆ ಪಡೆದುಕೊಂಡ ಪೊಲೀಸರ ತಂಡ ಆತನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.