ಜನತಾ ಕರ್ಫ್ಯೂ ಇದ್ದರೂ ಕಾರ್ಜಾಲು ಮೈದಾನದಲ್ಲಿ ಕ್ರಿಕೆಟ್ ಪಂದ್ಯ..!

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದೇಶದೆಲ್ಲೆಡೆ ಕೊರೊನಾವೈರಸ್ ಭೀತಿ ಆವರಿಸಿದ್ದು, ಜನತೆಯ ಆತಂಕ ದೂರಾಗಿಸಲು ಪ್ರಧಾನಿ ಮೋದಿಯವರು ಮಾ.22ರಂದು ಒಂದು ದಿನದ ಜನತಾ ಕರ್ಫ್ಯೂಗೆ ಕರೆ ನೀಡಿದ್ದು ಇಡೀ ತಾಲೂಕು ನಿಶ್ಯಬ್ಧಗೊಂಡಿದ್ದರೂ ಕಾರ್ಜಾಲಿನಲ್ಲಿ ಯುವಕರ ತಂಡವೊಂದು ಅದ್ಯಾವುದರ ಪರಿವೇ ಇಲ್ಲದೇ ಎಂದಿನಂತೆ ಕ್ರಿಕೆಟ್ ಆಟದಲ್ಲಿ ತೊಡಗಿಸಿಕೊಂಡಿತ್ತು.

ಹೌದು. ಇದು ನಡೆದಿರುವುದು ನಗರದ ಹೊರ ವಲಯದ ಕಾರ್ಜಾಲು ಮೈದಾನದಲ್ಲಿ. ಕಾರ್ಜಾಲು ಮೈದಾನದಲ್ಲಿ ಪ್ರತಿದಿನ ಸಂಜೆ ಯುವಕರ ತಂಡವೊಂದು ಒಟ್ಟು ಸೇರಿ ಕ್ರಿಕೆಟ್ ಆಡುವುದು ಸಾಮಾನ್ಯ. ಆದಿತ್ಯವಾರ ಬೆಳಗ್ಗಿನಿಂದಲೇ ಕ್ರಿಕೆಟ್ ಆಡುವುದು ಯುವಕರ ಹವ್ಯಾಸ. ಅದರಂತೆ ಮಾ.22ರಂದು ಯುವಕರ ತಂಡ ಮಧ್ಯಾಹ್ನದ ವೇಳೆಗೆ ಮೈದಾನಕ್ಕೆ ಆಗಮಿಸಿ ಆಟದಲ್ಲಿ ನಿರತವಾಗಿದೆ. ಕೆಲ ಸಮಯದ ಬಳಿಕ ಆಟ ಸ್ಥಗಿತಗೊಳಿಸಿ ಮನೆಗೆ ಹೋಗಿದ್ದ ತಂಡ ಸಂಜೆಯಾಗುತ್ತಲೇ ಮತ್ತೆ ಮೈದಾನದಲ್ಲಿ ಹಾಜರಾಗಿ ಎಂದಿನಂತೆ ಕ್ರಿಕೆಟ್ ಆಟದಲ್ಲಿ ನಿರತವಾಗಿದ್ದರು.

ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಕೊರೋನಾ ವೈರಸ್‌ನ್ನು ತಡೆಯುವ ನಿಟ್ಟಿನಲ್ಲಿ ಸರಕಾರದ ಸೂಚನೆಯಂತೆ ಬಹುತೇಕ ಕಾರ್ಯಕ್ರಮಗಳು ರದ್ದುಗೊಂಡಿದೆ. ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದಲ್ಲದೆ, ಜನ ಗುಂಪು ಸೇರದಂತೆ ಕಟ್ಟು ನಿಟ್ಟಿನ ಸೂಚನೆಗಳನ್ನು ಹೊರಡಿಸಿದೆ. ಅಲ್ಲದೆ ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ವ್ಯಕ್ತಿಯಿಂದ ವ್ಯಕ್ತಿ ಮಧ್ಯೆ ಅಂತರ ಕಾಯ್ದುಕೊಳ್ಳುವ ಸಂಕಲ್ಪ ಮಾಡಬೇಕು. ಹೀಗಾಗಿ ಜನತಾ ಕರ್ಫ್ಯೂ ಆಚರಣೆಯಿಂದ ಸೋಂಕು ತಡೆಗಟ್ಟಬಹುದು. ಇದಕ್ಕಾಗಿ ಪ್ರತಿಯೊಬ್ಬರು ಸ್ವಯಂ ನಿರ್ಬಂಧ ಹೇರಿಕೊಂಡು ಮಾ.22ರಿಂದ ಒಂದು ವಾರ ಮನೆಯಲ್ಲಿದ್ದರೆ ಉತ್ತಮ ಎಂದು ಪ್ರಧಾನಿಯವರು ಕರೆ ನೀಡಿದ್ದರೂ ಕಾರ್ಜಾಲು ಮೈದಾನದಲ್ಲಿ ಸುಮಾರು 30 ಮಂದಿ ಯುವಕರು ಇದ್ಯಾವುದೂ ತಮಗೆ ಸಂಬಂಧಿಸಿz ಅಲ್ಲ ಎಂಬಂತೆ ಆಟದಲ್ಲಿ ನಿರತರಾಗಿದ್ದ ಬಗೆ ಸಾರ್ವಜನಿಕವಾಗಿ ಆಕ್ಷೇಪ ವ್ಯಕ್ತವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.