ನೀರ್ಕಜೆ : ಕ್ಷುಲ್ಲಕ ವಿಚಾರ ಯುವಕನಿಗೆ ತಿವಿತ! ವಿಟ್ಲ ಠಾಣಾ ಪೊಲೀಸರ ಕಾರ್ಯಾಚರಣೆ – ಇಬ್ಬರ ಬಂಧನ

Puttur_Advt_NewsUnder_1
Puttur_Advt_NewsUnder_1


ವಿಟ್ಲ: ಯುವಕನೋರ್ವನ ಮೇಲೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಮಾರಕಾಯುಧಗಳಿಂದ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಿಟ್ಲ ಠಾಣಾ ಎಸ್.ಐ ವಿನೋದ್ ರೆಡ್ಡಿಯವರ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.

ಕೇಪು ನೀರ್ಕಜೆ ನಿವಾಸಿ ಅಜಯ್ ಯಾನೇ ಅಜಯ್ ಪ್ರಸಾದ್ (23 ವ.) ಹಾಗೂ ಅಳಿಕೆ ಮಿತ್ತಳಿಕೆ ನಿವಾಸಿ ಪ್ರಖ್ಯಾತ್ (23 ವ.)ರವರು ಬಂಧಿತ ಆರೋಪಿಗಳಾಗಿದ್ದಾರೆ. ಶನಿವಾರ ರಾತ್ರಿ ನವೀನ್ ಎಂಬವರು ಕೇಪು ಗ್ರಾಮದ ನೀರ್ಕಜೆ ಬಸ್ಸು ತಂಗುದಾಣದಲ್ಲಿ ನಿಂತುಕೊಂಡಿದ್ದಾಗ, ಅಜಯ್ ಮತ್ತು ಆತನೊಂದಿಗಿದ್ದ ಕೆಲವರು ಬಂದು ಮಾರಕಾಯುಧದಿಂದ ನವೀನನ ಹೊಟ್ಟೆಗೆ ಮತ್ತು ದೇಹದ ವಿವಿಧ ಕಡೆಗಳಿಗೆ ಕಡಿದಿದ್ದರು ಎಂದು ಆರೋಪಿಸಲಾಗಿದೆ. ಈ ವೇಳೆ ತಡೆಯಲು ಬಂದ ಗಣೇಶ ಎಂಬವರ ಕೈ ಬೆರಳಿಗೂ ಗಾಯವಾಗಿದೆ. ಗಂಭೀರ ಸ್ಥಿತಿಯಲ್ಲಿ ಗಾಯಗೊಂಡಿರುವ ನವೀನ್ ರವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್, ಡಿವೈಎಸ್‌ಪಿ ವೆಲೆಂಟನ್ ಡಿಸೋಜ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್‌ರವರ ನೇತೃತ್ವದಲ್ಲಿ ವಿಟ್ಲ ಪಿ ಎಸ್.ಐ. ವಿನೋದ್ ರೆಡ್ಡಿ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಜಯಕುಮಾರ್, ಪ್ರಸನ್ನ, ಲೋಕೇಶ್, ಪ್ರತಾಪ ರೆಡ್ಡಿ, ವಿನಾಯಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.