ಮಂಗಳೂರು ಸಂಪರ್ಕ ರಸ್ತೆ ಬಂದ್: ಕ್ಯಾರೇ ಅನ್ನದ ಆಟೋ ಚಾಲಕರು-ಪೊಲೀಸರಿಂದ ಧ್ವನಿವರ್ಧಕ ದ ಮೂಲಕ ಎಚ್ಚರಿಕೆ

Puttur_Advt_NewsUnder_1
Puttur_Advt_NewsUnder_1

ಬಂಟ್ವಾಳ: ಕೊರೊನಾ ವೈರಸ್‌ ಭೀತಿ ಹಿನ್ನಲೆಯಲ್ಲಿ ದ.ಕ.ಜಿಲ್ಲೆಯನ್ನೂ “ಲಾಕ್ ಡೌನ್” ಎಂದು ಘೋಷಿಸಿದ್ದರೂ,ನಿಯಮ‌ಮೀರಿ ತೆರೆದ ಅಂಗಡಿಗಳನ್ನು ಬಂಟ್ವಾಳದಲ್ಲಿ ಅಧಿಕಾರಿಗಳೇ ಮುಚ್ಚಿಸುತ್ತಿದ್ದಾರೆ. ವೈರಸ್ ಹರಡದಂತೆ ಅಂಗಡಿಗಳನ್ನು ಬಂದ್ ಮಾಡಿ, ಎಲ್ಲಾ ಜನರು ಮನೆಯಲ್ಲಿಯೇ ಇರುವಂತೆ, ರಸ್ತೆಯಲ್ಲಿ ತಿರುಗಾಡದಂತೆ ಧ್ವನಿವರ್ಧಕದ ಮೂಲಕ ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಹೆಚ್ ಅವರು ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ.

ತಾಲೂಕಿನ ಬಿಸಿರೋಡು , ಬಂಟ್ವಾಳ, ಕೈಕಂಬ ಸೇರಿದಂತೆ ಜನರು ಗುಂಪಾಗಿ ಸೇರುವ ಕಡೆಗಳಲ್ಲಿ ಈ ಪ್ರಯತ್ನದ ಮೂಲಕ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅಗತ್ಯ ವಸ್ತುಗಳ ಅಂಗಡಿಗಳ ಹೊರತು ಬೇರೆ ಅಂಗಡಿಗಳನ್ನು ಮುಚ್ಚಿ ಜಾಗ್ರತೆ ವಹಿಸುವಂತೆ ಮನವಿ ಮಾಡುತ್ತಿದ್ದಾರೆ.

ವಾಹನಗಳೂ ಸಂಚಾರ ಮಾಡದಂತೆ ಜಿಲ್ಲಾಧಿಕಾರಿ ಆದೇಶಿಸಿದ್ದು ಈ ಆದೇಶಕ್ಕೆ ಕ್ಯಾರೇ ಅನ್ನದ ಆಟೋ ಚಾಲಕರು ಆಟೋ ಚಲಾಯಿಸುತ್ತಿದ್ದು ಪೊಲೀಸರು ಆಟೋ ಚಾಲಕರಿಗೆ ಮನವಿ ಮಾಡಿ ಮನೆಯ ಕಡೆ ತೆರಳುವಂತೆ ವಿನಂತಿ ಮಾಡುತ್ತಿದ್ದಾರೆ.

ನಗರದ ಹಲವು ಭಾಗಗಳಲ್ಲಿ ಪೊಲೀಸರು ಜನಜಾಗೃತಿ ಮಾಡುವ ಕಾರ್ಯ ನಿರ್ವಹಿಸುತ್ತಿದ್ದು ಸಾರ್ವಜನಿಕರು, ವಾಹನ ಸವಾರರು ರಸ್ತೆಗಿಳಿಯದಂತೆ ಮನವಿ ಮಾಡಿದ್ದು 144 ಸೆಕ್ಷನ್ ಜಾರಿಯಿರುವ ಬಗ್ಗೆ ಎಚ್ಚರಿಸುತ್ತಿದ್ದಾರೆ. ಆದರೆ ಪೊಲೀಸರ ಮನವಿಗೂ ಕಿವಿಗೊಡದ ಸಾರ್ವಜನಿಕರು ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದಾರೆ. ಕೆಲವು ಅಂಗಡಿಗಳು ಇನ್ನೂ ತೆರದಿವೆ.

ಮಂಗಳೂರು‌  ಪ್ರವೇಶಿಸುವಂತಿಲ್ಲ..
ಬೆಳಿಗ್ಗೆ ಯಿಂದಲೇ ಬಿಸಿರೋಡಿನಿಂದ ಮಂಗಳೂರು ಕಡೆಗೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಬಿಸಿರೋಡಿನಿಂದ ಹೋದವರನ್ನು ಪೊಲೀಸರು ಪರಂಗಿಪೇಟೆಯಲ್ಲಿ ತಡೆದು ವಾಪಾಸು ಕಳುಹಿಸುತ್ತಿದ್ದರು. ಮಂಗಳೂರಿನಲ್ಲಿ ಕೊರೊನೊ ಪ್ರಕರಣ ಪತ್ತೆಯಾದ ಬಳಿಕ ಹೆಚ್ಚು ಭದ್ರತೆಯನ್ನು ಮಾಡಲಾಗುತ್ತಿದೆ. ಈಗಾಗಲೇ ಜಿಲ್ಲೆಯ ಲ್ಲಿ ನಿಷೇಧಾಜ್ಞೆಯನ್ನು ಜಿಲ್ಲಾಡಳಿತ ಹಾಕಿದ್ದು ಜನರನ್ನು ಜಾಗೃತಗೊಳಿಸುತ್ತಿದೆ.

ತಹಶೀಲ್ದಾರ್ ರಶ್ಮಿ ಎಸ್. ಆರ್.ನೇತೃತ್ವದಲ್ಲಿ ಬಂಟ್ವಾಳ ವೃತ್ತ  ಪೋಲೀಸರು ಅಂಗಡಿಗಳನ್ನು ಬಂದ್ ಮಾಡುವಂತೆ ಧ್ವನಿವರ್ಧಕ ದ ಮೂಲಕ ಎಚ್ಚರಿಕೆ ನೀಡುತ್ತಿದ್ದಾರೆ. ಬಂಟ್ವಾಳ, ಬಿಸಿರೋಡು , ಪರಂಗಿಪೇಟೆ, ಕೈಕಂಬ, ವಿಟ್ಲ, ಕಲ್ಲಡ್ಕ ಸೇರಿದಂತೆ ಎಲ್ಲಾ ಪೇಟೆ ಗಳನ್ನು ಸಂಪೂರ್ಣ ಬಂದ್ ಮಾಡಲು ಅವರು ಧ್ವನಿ ವರ್ಧಕ ಬಳಸಿದ್ದಾರೆ. ಬಂಟ್ವಾಳ ವೃತ್ತದ ಡಿ.ವೈ.ಎಸ್.ಪಿ.ವೆಲಂಟೈನ್ ಡಿ.ಸೋಜ, ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್, ನಗರ ಠಾಣಾ ಎಸ್. ಐ.ಅವಿನಾಶ್, ಗ್ರಾಮಾಂತರ ಠಾಣಾ ಎಸ್. ಐ.ಪ್ರಸನ್ನ, ಟ್ರಾಫಿಕ್ ಠಾಣಾ ಎಸ್. ಐ.ರಾಜೇಶ್, ವಿಟ್ಲ ಠಾಣಾ ಎಸ್. ಐ.ವಿನೋದ್, ಪುಂಜಾಲಕಟ್ಟೆ ಎಸ್. ಐ.ಸೌಮ್ಯ ಅವರು ಸೇರಿದಂತೆ ಪೋಲೀಸರು ತಹಶೀಲ್ದಾರ್ ಅವರ ಜೊತೆಯಲ್ಲಿ ಅಂಗಡಿಗಳನ್ನು ಬಂದ್ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.