Breaking News

ಕೊರೊನಾ ವೈರಾಣು ಖಾಯಿಲೆ – ಜಿಲ್ಲೆಯಲ್ಲಿ ಲಾಕ್‌ಔಟ್: ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆಯಲ್ಲಿ ಫುಲ್ ವರ್ಕ್ ಆರೋಪ- ತಹಸೀಲ್ದಾರ್‌ಗೆ ದೂರು

Puttur_Advt_NewsUnder_1
Puttur_Advt_NewsUnder_1
  • ಡಿವೈಎಸ್ಪಿಯಿಂದ ಐಬಿಯಲ್ಲಿ ಕ್ಯಾಂಪ್ಕೋ ಡಿಜಿಎಮ್‌ ಜೊತೆ ಮಾತುಕತೆ – ನೌಕರರಿಗೆ ರಜೆ ನೀಡಿದ ಕ್ಯಾಂಪ್ಕೋ

ಪುತ್ತೂರು: ಜಗತ್ತಿನಾದ್ಯಂತ ಹರಡಿರುವ  ಕೊರೊನಾ ವೈರಾಣು ಖಾಯಿಲೆಯಿಂದ ರಾಜ್ಯದಲ್ಲಿ ಲಾಕ್‌ಔಟ್ ಆಗಿದ್ದರೂ ಪ್ರತಿಷ್ಠಿತ ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆ ಮಾತ್ರ ತನ್ನ ನೌಕರರಿಗೆ ರಜೆ ನೀಡದೆ ಕೆಲಸ ಮಾಡಿಸುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಡಿವೈಎಸ್ಪಿ ದಿನಕರ್ ಶೆಟ್ಟಿಯವರು ಕ್ಯಾಂಪ್ಕೋ ಡಿಜಿಎಮ್ ಜೊತೆ ಮಾತಕುತೆ ನಡೆಸಿದ್ದು ಮತ್ತು ಬೆಳವಣಿಗೆಯಲ್ಲಿ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಬಂದ್ ಮಾಡಿದ ಘಟನೆ ಮಾ.24ರಂದು ಮಧ್ಯಾಹ್ನದ ವೇಳೆ ನಡೆದಿದೆ.

ಕ್ಯಾಂಪ್ಕೋ ಚಾಕಲೇಟ್ ಪ್ಯಾಕ್ಟರಿಯಲ್ಲಿ ಇರುವ ನೌಕರರ ಶೇ.೫೦ರಷ್ಟು ಮಂದಿಯಿಂದ ಕೆಲಸ ಮಾಡಿಸಬಹುದೆಂಬ ಜಿಲ್ಲಾಡಳಿತ ಆದೇಶದಂತೆ ಕೆಲಸ ಮುಂದುವರಿದಿತ್ತು. ಆದರೆ ಶೇ.೫೦ಕ್ಕಿಂತ ಮೇಲ್ಪಟ್ಟು ಕಾರ್ಮಿಕರನ್ನು ದುಡಿಸುತ್ತಿದ್ದಾರೆಂಬ ಸಾರ್ವಜನಿಕ ದೂರಿಗೆ ಸಂಬಂಧಿಸಿ ಮಾ.೨೩ರಂದು ಮಧ್ಯಾಹ್ನ ತಹಶಿಲ್ದಾರ್ ಸೂಚನೆಯಂತೆ ಕಸಬಾ ಹೋಬಳಿ ಕಂದಾಯ ನಿರೀಕ್ಷಕ ರವಿಕುಮಾರ್ ಹಾಗೂ ಗ್ರಾಮಲೆಕ್ಕಿಗರ ಜೊತೆ ಕ್ಯಾಂಪ್ಕೋ ಫ್ಯಾಕ್ಟರಿಗೆ ಭೇಟಿ ನೀಡಿ ಪರಿಶೀಲಿಸಿದರು.

ಆ ಸಂದರ್ಭ ೭೫೦ ಕಾರ್ಮಿಕರ ಪೈಕಿ ಪ್ರತೀ ಪಾಳಿಯಲ್ಲಿ ೫೦ ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ ಸಾರ್ವಜನಿಕರ ದೂರಿನ ಪ್ರಕಾರ ಪ್ರತೀ ಪಾಳಿಯಲ್ಲ ೨೫೦ ರಿಂದ ೩೦೦ ಜನ ಕಾರ್ಮಿಕರು ಕೆಲಸ ಮಾಡುತ್ತಿರುವುದಿಲ್ಲ. ಒಂದೊಂದು ಯೂನಿಟ್ ನಲ್ಲಿ ನಾಲ್ಕರಿಂದ ಐದು ಜನ ಕಾರ್ಮಿಕರು ಎರಡು ಮೀಟರ್ ಅಂತರದಲ್ಲಿ ನಿಂತುಕೊಂಡು ಕೆಲಸ ಮಾಡುತ್ತಿದ್ದಾರೆ ಹಾಗೂ ಕ್ಯಾಂಟೀನ್ ನಲ್ಲೂ ಸಹ ಒಬ್ಬರಿಂದ ಇನ್ನೊಬ್ಬರು ಊಟ ಮಾಡುವಾಗ ಒಂದು ಮೀಟರ್ ಅಂತರದಲ್ಲಿ ಊಟ ಮಾಡಲು ಕಾರ್ಮಿಕರಿಗೆ ಕ್ಯಾಂಪ್ಕೋ ಫ್ಯಾಕ್ಟರಿಯ ಆಡಳಿತ ಮಂಡಳಿಯವರು ವ್ಯವಸ್ಥೆ ಮಾಡಿರುತ್ತಾರೆ.

ಈ ಕ್ಯಾಂಪ್ಕೋ ಫ್ಯಾಕ್ಟಯಲ್ಲಿ ತಯಾರಿಸುವ ಆಹಾರ ( ಬಿಸ್ಕೇಟ್) ಸೈನಿಕರಿಗೆ ಕಳುಹಿಸುವ ಆಹಾರವಾಗಿರುತ್ತದೆ. ಸಾರ್ವಜನಿಕರು ನೀಡಿರುವ ದೂರಿನಲ್ಲಿ ಯಾವುದೇ ರೀತಿ ಸತ್ಯಾಂಶ ಇಲ್ಲ ಎಂದು ಅವರ ವರದಿಯಲ್ಲೂ ಇತ್ತು. ಆದರೆ ಮಾ.24ರಂದು ಮತ್ತೆ ಸಾರ್ವಜನಿಕ ವಲಯದಿಂದ ದೂರು ಬಂದ ಹಿನ್ನೆಲೆಯಲ್ಲಿ ಪುತ್ತೂರು ಡಿವೈಎಸ್ಪಿ ದಿನಕರ್ ಶೆಟ್ಟಿಯವರು ಫ್ಯಾಕ್ಟರಿಯ ಡಿಜಿಎಮ್ ಫ್ರಾನ್ಸಿಸ್ ಅವರ ಜೊತೆ ಪುತ್ತೂರು ದರ್ಬೆ ನಿರೀಕ್ಷಣಾ ಮಂದಿರದಲ್ಲಿ ಮಾತಕತೆ ನಡೆಸಿದರು. ಬೆಳವಣಿಗೆಯಲ್ಲಿ ನೌಕರರ ಆರೋಗ್ಯದ ದೃಷ್ಟಿಯಿಂದ ಮಾ.31ರ ತನಕ ರಜೆ ನೀಡಿರುವುದಾಗಿ ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.