ಪ೦ಚೋಡಿ-ಕೇರಳ ಸ೦ಪರ್ಕ ರಸ್ತೆ ಬ೦ದ್ ಮಾಡಿದ ಪೊಲೀಸರು! ಸುದ್ದಿ ವೆಬ್ ಸೈಟ್ ವರದಿ ಫಲಶ್ರುತಿ

ಪುತ್ತೂರು: ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಈಶ್ವರಮಂಗಲ ಗಡಿ ಪ್ರದೇಶದ ಮೂಲಕ ಕೇರಳ ಸಂರ್ಕಿಸುವ ನಾಲ್ಕು ರಸ್ತೆಗಳನ್ನು ಪೊಲೀಸರು ಮಾ.21ರಿಂದ ಬಂದ್ ಮಾಡಿದ್ದರೂ ಕೂಡಾ ಪಂಚೋಡಿ-ಮಯ್ಯಾಳ ಕೇರಳ ಒಳ ರಸ್ತೆಯನ್ನು ಬಂದ್ ಮಾಡಿರಲಿಲ್ಲ. ಪರಿಣಾಮ ಸದ್ರಿ ರಸ್ತೆ ಮೂಲಕ ಕೇರಳದಲ್ಲಿ ಕೆಲಸಕ್ಕಿದ್ದ ಹಲವರು ಮಾ.23ರಂದು ಕರ್ನಾಟಕಕ್ಕೆ ಆಗಮಿಸಿರುವ ಶಂಕೆ ಇರುವ ಬಗ್ಗೆ ಮಾ.24ರಂದು ಸುದ್ದಿ ವೆಬ್‌ಸೈಟ್ ವರದಿ ಪ್ರಕಟಿಸಿದ್ದು ವರದಿಗೆ ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಪಂಚೋಡಿ-ಮಯ್ಯಾಳ ಮಧ್ಯೆ ರಸ್ತೆಗೆ ಅಡ್ಡವಾಗಿ ಜೆಸಿಬಿ ಮೂಲಕ ಮಣ್ಣು ಹಾಕಿ ರಸ್ತೆಯನ್ನು ಬಂದ್ ಮಾಡಿದ್ದಾರೆ.

ಕೇರಳದ ಪರಪ್ಪೆ ರಸ್ತೆಯಾಗಿ ದೇಲಂಪಾಡಿ, ಮಯ್ಯಾಳ ಮೂಲಕ ಈಶ್ವರಮಂಗಲ ಸಮೀಪದ ಪಂಚೋಡಿ ರಸ್ತೆಯನ್ನು ಉಪಯೋಗಿಸಿ ಹಲವಾರು ಮಂದಿ ಆಗಮಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತಲ್ಲದೇ ಇದು ಜನರ ಆತಂಕ್ಕೂ ಕಾರಣವಾಗಿತ್ತು.

ಈ ಬಗ್ಗೆ ಸುದ್ದಿ ಜೊತೆ ಮಾತನಾಡಿದ ಸಂಪ್ಯ ಪೊಲೀಸ್ ಠಾಣಾ ಎಸ್ಸೈ ಉದಯರವಿ ಅವರು ಪಂಚೋಡಿ-ಮಯ್ಯಳ ರಸ್ತೆ ಮಧ್ಯೆ ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಿದ್ದವೆ. ಇತರ ಕಡೆಗಳಲ್ಲೂ ಕಟ್ಟೆಚ್ಚರ ವಹಿಸಿದ್ದೇವೆ ಎಂದು ತಿಳಿಸಿದ್ದಾರೆ. ಸುದ್ದಿ ವರದಿಯನ್ನು ಗಮನಿಸಿದ ಜಿಲ್ಲಾ ಎಸ್.ಪಿ ಅವರೂ ಕೂಡಾ ಸದ್ರಿ ರಸ್ತೆಯನ್ನು ತಕ್ಷಣವೇ ಮುಚ್ಚುವ ಬಗ್ಗೆ ಸುದ್ದಿಗೆ ಸಂದೇಶ ರವಾನೆ ಮಾಡಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.