ಕೊರೊನ ಎಫೆಕ್ಟ್: ಯಕ್ಷಗಾನ ಕಲಾವಿದರಿಗೆ ಪಟ್ಲ ಫೌಂಡೇಶನ್ ವತಿಯಿಂದ ತುರ್ತು ಸ್ಪಂದನೆ

Puttur_Advt_NewsUnder_1
Puttur_Advt_NewsUnder_1

ಮಂಗಳೂರು:  ಕೊರೊನ ವೈರಸ್ ನಿಂದಾಗಿ ಪ್ರಪಂಚವೇ ಸಂಕಷ್ಟಕ್ಕೀಡಾಗಿದೆ. ಯಕ್ಷಗಾನ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಲಾವಿದರ ಪರಿಸ್ಥಿತಿಯಂತೂ ಶೋಚನೀಯ. ದಿನದ ಒಂದು ಆಟವನ್ನೇ ನಂಬಿ ವೃತ್ತಿ ಇಲ್ಲದಿರುವುದರಿಂದ ಪ್ರತಿಯೊಬ್ಬರ ಪರಿಸ್ಥಿತಿಯು ಹದಗೆಟ್ಟಿದೆ.

ಪ್ರಸ್ತುತ ಸನ್ನಿವೇಶದ ಗಂಭೀರತೆಯನ್ನು ಗಣನೆಗೆ ತೆಗೆದುಕೊಂಡ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇಂದು ತುರ್ತು ಸಭೆ ಸೇರಿ ಸರಕಾರದ ಆದೇಶಗಳನ್ನು ಪಾಲಿಸಿಕೊಂಡು ಯಕ್ಷಗಾನ ಕಲಾವಿದರ ಕುಟುಂಬದವರಿಗೆ ಅಗತ್ಯ ಹಾಗೂ ಆವಶ್ಯಕವಾಗಿ ಸಹಕರಿಸುವ ನಿರ್ಧಾರವನ್ನು ಕೈಗೊಂಡಿತು.

ಇಂದಿನ ಈ ಪರಿಸ್ಥಿತಿಯಲ್ಲಿ ಯಾವನೇ ಕಲಾವಿದ ಹಾಗೂ ಅವರ ಮನೆಯವರು ಹಸಿವಿನಿಂದ ಇರಬಾರದೆಂಬ ಉದ್ದೇಶದಿಂದ, ತೆಂಕುತಿಟ್ಟು ಹಾಗೂ ಬಡಗುತಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿರುವ ಅಗತ್ಯವಿರುವ ಕಲಾವಿದರಿಗೆ ಆಹಾರ ಸಾಮಗ್ರಿಗಳನ್ನು (25 ಕೆ.ಜಿ ಅಕ್ಕಿ ಹಾಗೂ ರೇಶನ್ ಐಟಂಗಳನ್ನು) ತಲುಪಿಸುವಂತಹ ಕಾರ್ಯವನ್ನು ಟ್ರಸ್ಟ್ ಕೈಗೆತ್ತಿಕೊಳ್ಳುವುದೆಂದು ಸಭೆಯಲ್ಲಿ ನಿರ್ಧರಿಸಲಾಯಿತು .

ಇದರ ಪ್ರಯೋಜನ ಪಡೆಯಲಿಚ್ಚಿಸುವ ಕಲಾವಿದರು ತಮ್ಮ ಹೆಸರು/ವಿಳಾಸ, ಮೊಬೈಲ್ ಸಂಖ್ಯೆ, ಮೇಳದ ಹೆಸರು ವಿವರಗಳೊಂದಿಗೆ ತಿಳಿಸಬಹುದಾಗಿದೆ.

ಪಟ್ಲ ಸತೀಶ್ ಶೆಟ್ಟಿ – +919900371441

ಪುರುಷೋತ್ತಮ ಭಂಡಾರಿ – ಪ್ರಧಾನ ಕಾರ್ಯದರ್ಶಿ – +919845172865

CA ಸುದೇಶ್ ಕುಮಾರ್ ರೈ – ಕೋಶಾಧಿಕಾರಿ
+918197737575

ಪಟ್ಲ ಸತೀಶ್ ಶೆಟ್ಟಿ – ಸ್ಥಾಪಕಾಧ್ಯಕ್ಷರು ಹಾಗೂ ಕೇಂದ್ರ ಸಲಹಾ ಮಂಡಳಿ
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ)

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.