Breaking News

ಪ್ರಧಾನಮಂತ್ರಿಯವರ ಸೂಚನೆಗಳನ್ನು ನಮ್ಮ, ಹಾಗೂ ರಾಷ್ಟ್ರದ ಸ್ವಾಸ್ಥ್ಯಕ್ಕಾಗಿ ಕಟ್ಟುನಿಟ್ಟಾಗಿ ಪಾಲಿಸೋಣ-ಪ್ರವೀಣ್ ನೆಟ್ಟಾರು ಅಧ್ಯಕ್ಷರು ಯುವವಾಹಿನಿ (ರಿ.) ಘಟಕ, ಸುಳ್ಯ

Puttur_Advt_NewsUnder_1
Puttur_Advt_NewsUnder_1

ಕೋವಿಡ್ 19 ಎಂಬ ಮಾರಕ ರೋಗಕ್ಕೆ ಕಾರಣ ಯಾರು ಅಂಥ ಹುಡುಕುವ ಸಮಯವಿದಲ್ಲ. ಗಂಡಾಂತರ ಬರುವುದು ಬಂದಾಗಿದೆ. ಇನ್ನು ಇದರಿಂದ ಪಾರಾಗಲು ಶತಪ್ರಯತ್ನ ಪಡುವುದೇ ನಮ್ಮ ಮುಂದಿರುವ ಏಕೈಕ ದಾರಿ.

ಇಡೀ ಪ್ರಪಂಚವೇ ಇಲ್ಲಿಯವರೆಗೆ ವ್ಯವಹಾರಿಕ ಸ್ವಾರ್ಥದ ದೃಷ್ಟಿಕೋನ ಮತ್ತು ಮೇಲು-ಕೀಲು, ವರ್ಣಬೇಧ,ಜಾತಿ-ಧರ್ಮ,ಗಡಿವಿವಾದ, ಭಯೋತ್ಪಾದನೆ,ಶೋಷಣೆ, ಅತ್ಯಾಚಾರ-ಅನಾಚಾರ,ಭ್ರಷ್ಟಾಚಾರ, ಶ್ರೀಮಂತಿಕೆಯ ಅಫೀಮುಗಳೆಲ್ಲವೂ ಭೂಮಿ ಮೇಲೆ ನರಕಸದೃಷ್ಯವಾಗಿ ತಾಂಡವ ನೃತ್ಯವನ್ನಾಡುತ್ತಿತ್ತು. ಆದರೆ ಪ್ರಕೃತಿಯ ಮುನಿಸಿನ ಮುಂದೆ ಇಂದು ಎಲ್ಲವನ್ನೂ ಬಿಟ್ಟು ಕೇವಲ ಮಾನವಜಾತಿಯ ಉಳಿವಿಗಾಗಿ ಕಣ್ಣಿಗೆ ಕಾಣದ ವೈರಸ್ ವಿರುದ್ಧವಾಗಿ ಕಣ್ಣಿಗೆ ಕಾಣದ ದೇವರಿಗಾಗಿ ಪ್ರಾರ್ಥಿಸುತ್ತಿದ್ದೇವೆ.

ಕಾಣದ ದೇವರು ಇರುವಿಕೆಯ ಬಗ್ಗೆ ಸಾಕ್ಷಿ ಕೇಳುತ್ತಿದ್ದ ಜನಗಳು ಈಗ ಕಾಣದ ವೈರಸಿಗೆ ಅದೇ ದೇವರ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.  ಏನೇ ಆಗಲಿ ನಮ್ಮ ದೇಹದ ಮತ್ತು ದೇಶದ ಸ್ವಾಸ್ಥ್ಯಕ್ಕಾಗಿ ಅವಿರತವಾಗಿ ತನ್ನ ಸಂಸಾರ, ಮನೆ,ಮಠ,ಆರೋಗ್ಯ, ಸ್ವಾರ್ಥ ಎಲ್ಲವನ್ನೂ ಲೆಕ್ಕಿಸದೆ ನಮಗಾಗಿ ಶ್ರಮಿಸುತ್ತಿರುವ ವೈದ್ಯರುಗಳಿಗೆ-ಆರೋಗ್ಯ ಯೋಧರುಗಳಿಗೆ, ಪೋಲೀಸ್ ಸಿಬ್ಬಂದಿಗಳಿಗೆ ಮನೆಯಲ್ಲೇ ಕೂತು ಗೌರವ ಸಲ್ಲಿಸೋಣ. ಆಸ್ತಿ ಅಂತಸ್ತು ಸ್ಥಾನಮಾನಗಳನ್ನೆಲ್ಲಾ ಬಿಟ್ಟು ನಮ್ಮ ಜೀವಮಾತ್ರವನ್ನು ಉಳಿಸಿಕೊಳ್ಳಲು ಪ್ರಯತ್ನ ಪಡೋಣ. ಪ್ರಧಾನಮಂತ್ರಿಯವರ ಸೂಚನೆಗಳನ್ನು ನಮ್ಮ, ಹಾಗೂ ರಾಷ್ಟ್ರದ ಸ್ವಾಸ್ಥ್ಯಕ್ಕಾಗಿ ಕಟ್ಟುನಿಟ್ಟಾಗಿ ಪಾಲಿಸೋಣ.
-ಪ್ರವೀಣ್ ನೆಟ್ಟಾರು
ಅಧ್ಯಕ್ಷರು
ಯುವವಾಹಿನಿ (ರಿ.) ಘಟಕ, ಸುಳ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.