ಕಡಬದಲ್ಲಿ ದಿನಸಿ ಸಾಮಾಗ್ರಿಗಳಿಗೆ ನೂಕುನುಗ್ಗಲು: ಸಾಮಾಗ್ರಿ ಖರೀದಿ ಅನಿವಾರ್ಯ ಹೌದಾದರೂ, ಮುಂಜಾಗ್ರತೆ ಯಾಕಿಲ್ಲ?

Puttur_Advt_NewsUnder_1
Puttur_Advt_NewsUnder_1
  • ಮಾ.26ರಿಂದ ಮಾಸ್ಕ್ ಧರಿಸದಿದ್ದರೆ ಸಾಮಾಗ್ರಿ ಇಲ್ಲ-ದಯಾನಂದ ಪ್ರಭು

 

ಕಡಬ: ಈಗಾಗಲೇ ಕೊರೋನಾ ಮುಂಜಾಗ್ರತಾ ಕ್ರಮವಾಗಿ ಇಡೀ ದೇಶವನ್ನೆ ಲಾಕ್ ಡೌನ್ ಮಾಡಲಾಗಿದೆ, ಏನಿದ್ದರೂ ಜನರೂ ಸ್ವಯಂಪ್ರೇರಿತರಾಗಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಪ್ರಧಾನಿ ಮೋದಿಯವರು ಈಗಾಗಲೇ ಕರೆ ನೀಡಿದ್ದಾರೆ, ಆದರೇ ಇದೀಗ ಸಮಸ್ಯೆ ಬೇರೆ ರೀತಿಯಲ್ಲಿ ಮುಂದುವರಿಯುತ್ತಿದೆ, ಜನರು ದಿನನಿತ್ಯದ ಸಾಮಾಗ್ರಿಗಳಿಗಾಗಿ ಅಂಗಡಿಯಲ್ಲಿ ಮುಗಿಬೀಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ, ಈ ರೀತಿ ಆದರೆ ಎಲ್ಲಿದೆ ಮುಂಜಾಗ್ರತೆ ? ಏನಾಗಬಹುದು ಪರಿಸ್ಥಿತಿ ಎಂಬುದೇ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ.

ಮಾಸ್ಕ್ ಇಲ್ಲ, ಒಬ್ಬರಿಂದೊಬ್ಬರಿಗೆ ಅಂತರವೇ ಇಲ್ಲ!
ಅಂಗಡಿಯಲ್ಲಿ ಸಾಮಾನು ಖರೀದಿಗೆ ಬರುವವರು ಕನಿಷ್ಠ ಮಾಸ್ಕ್ ಧರಿಸದೇ ಗುಂಪಲ್ಲಿ ಇರುವುದು ಕಂಡು ಬರುತ್ತಿದೆ, ಅಲ್ಲದೆ ನೂಕು ನುಗ್ಗಲು ಬೇರೆ, ಇದೇ ರೀತಿ ಮುಂದುವರಿದರೆ ಪರಿಸ್ಥಿತಿ ಸುಧಾರಿಸುವುದು ಕಷ್ಟ ಸಾಧ್ಯವಾಗಿದೆ ಎಂದು ಹೇಳಲಾಗುತ್ತಿದೆ.

ನಾಳೆಯಿಂದ ಮಾಸ್ಕ್ ಧರಿಸದಿದ್ದರೆ ಸಾಮಾಗ್ರಿ ಇಲ್ಲ-ದಯಾನಂದ ಪ್ರಭು
ಈಗಾಗಲೇ ಕಡಬದ ಪ್ರತಿಷ್ಠಿತ ದಿನಸಿ ಸಾಮಾಗ್ರಿ ಮಳಿಗೆಯ ಮಾಲಕ ದಯಾನಂದ ಪ್ರಭು ಅವರು ಹೇಳಿಕೆ ನೀಡಿದ್ದು, ಸಾಮಾನು ಖರೀದಿಸಲು ಬರುತ್ತಿರುವ ಗ್ರಾಹಕರು ನಮ್ಮ ಮಾತನ್ನು ಕೇಳುತ್ತಿಲ್ಲ, ನೂರಾರು ಜನರ ಮದ್ಯೆ ಸಾಮಾನು ಕೊಡಲು ನಮ್ಮ ಸಿಬ್ಬಂದಿಗಳಿಗೂ ಭಯ ಆಗುತ್ತಿದೆ, ನಮಗೆ ಹಣ ಮಾಡುವ ಉದ್ದೇಶವೇ ಮುಖ್ಯ ಅಲ್ಲ, ಸಮಾಜದ ಆರೋಗ್ಯ ನಮಗೆ ಮುಖ್ಯ ಆದುದರಿಂದ ನಾಳೆಯಿಂದ ಮಾಸ್ಕ್ ಧರಿಸಿ ಕ್ಯೂ ನಲ್ಲಿ ಬಂದವರಿಗೆ ಮಾತ್ರ ಅವಕಾಶ. ನಿಯಮ ಮೀರಿ ಬರುವವರಿಗೆ ಸಾಮಾಗ್ರಿ ನೀಡುವುದಿಲ್ಲ ಎಂದು ದಯಾನಂದ ಪ್ರಭು ಸ್ವಷ್ಪವಾಗಿ ಹೇಳಿದ್ದಾರೆ.

12 ಗಂಟೆಯ ಮೊದಲೇ ಕಡಬ ಸಂಪೂರ್ಣ ಬಂದ್
ಮಾ.24ರಂದು ಕಡಬದಲ್ಲಿ ಅಂಗಡಿ ಮಾಲಕರು ಸಾರ್ವಜನಿಕರು ಸರಕಾರ ಆದೇಶಗಳನ್ನು ಅಷ್ಟಾಗಿ ಗಮನಕ್ಕೆ ತೆಗೆದುಕೊಳ್ಳದೆ ಇದ್ದಾಗ ಪೋಲಿಸರು ಲಾಠಿ ರುಚಿ ತೋರಿಸಿದ್ದು ಅದರ ಪರಿಣಾಮ ಇಂದು ಕಡಬದಲ್ಲಿ  ೧೨ ಗಂಟೆಯ ಮೊದಲೇ ಬಂದ್ ಆಗಿದ್ದು ವಿಶೇಷವಾಗಿತ್ತು. ಕಡಬ ಎಸ್.ಐ. ರುಕ್ಮ ನಾಕ್ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.