ಕೊರೊನಾ ವೈರಸ್ ಸೋಂಕು ಹರಡದಂತೆ ದಿನಸಿ ವ್ಯಾಪಾರಸ್ಥರೊಬ್ಬರ ಮುನ್ನೆಚ್ಚರಿಕೆ ಕ್ರಮ

  • ಅಂತರ ಕಾಯ್ದು ಕೊಂಡು ದಿನಸಿ ವಿತರಣೆ ಮಾಡುವ ದಿನಸಿ ಉದ್ಯಮಿ
  • ಫೋನ್ ಮಾಡಿದರೆ ದಿನಸಿ ವಸ್ತುಗಳ ಪ್ಯಾಕ್ ಸಿದ್ಧ
  • ಲಾಕ್‌ಡೌನ್ ಉದ್ದೇಶವೂ ಈಡೇರಬೇಕು- ಜನರಿಗೂ ತೊಂದರೆ ಆಗಬಾರದು

ಪುತ್ತೂರು: ಕೊರೊನಾ ವೈರಸ್ ಸೋಂಕು ಹರಡದಂತೆ ದೇಶಾದ್ಯಂತ ಲಾಕ್‌ಡೌನ್ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ಮಾ.೨೪ರಂದು ರಾತ್ರಿ ಘೋಷಣೆ ಮಾಡಿದ್ದಾರೆ. ಅವರ ಈ ಘೋಷಣೆಗೆ ಸರಿಯಾಗಿ ಪಾಲಿಸುವ ನಿಟ್ಟಿನಲ್ಲಿ ಜನರು ದಿನ ನಿತ್ಯದ ಅಗತ್ಯ ವಸ್ತುಗಳಿಗೆ ಅಂಗಡಿಗಳಿಗೆ ಮುಗಿ ಬೀಳದಂತೆ ಗ್ರಾಹಕರು ಫೋನ್ ಕರೆ ಮಾಡಿ ಅವರ ವಸ್ತುಗಳ ಪ್ಯಾಕ್ ಸಿದ್ಧಗೊಂಡ ಬಳಿಕ ಗ್ರಾಹಕರು ಅಂಗಡಿಗೆ ಬಂದು ಕೊಂಡೊಯ್ಯುವಂತೆ ಮಾಡುವ ಮೂಲಕ ಕೊರೊನಾ ವೈರಸ್ ಹರಡದಂತೆ ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದನ್ನು ಪೆರ್ಲಂಪಾಡಿಯ ಕುಂಟಿಕಾನದ ದಿನಸಿ ವ್ಯಾಪಾರಸ್ಥರೊಬ್ಬರು ಇತರರಿಗೆ ಮಾದರಿಯಾಗಿದ್ದಾರೆ.

ಇತ್ತೀಚೆಗೆ ಪ್ಲಾಸ್ಟಿಕ್ ಮುಕ್ತಗೊಳಿಸುವ ಆಂದೋಲನದಲ್ಲಿ ಎಲ್ಲರಿಗೂ ಮಾದರಿಯಾದ ಪೆರ್ಲಂಪಾಡಿಯ ಪ್ರಸಾದ್ ಕುಂಟಿಕಾನ ಎಂಬವರು ತನ್ನ ಪ್ರಸಾದ್ ದಿನಸಿ ವ್ಯಾಪಾರದ ಮಳಿಗೆ ಜನರು ಬಂದು ಮುಗಿ ಬೀಳದಂತೆ ಈ ಕ್ರಮ ಕೈಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ವೈರಸ್ ದೇಶದಾದ್ಯಂತ ಹರಡದಂತೆ ೨೧ ದಿನಗಳ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ. ಅವರ ಈ ಲಾಕ್‌ಡೌನ್ ಘೋಷಣೆ ಸರಿಯಾಗಿ ಪಾಲಿಸಬೇಕಾದರೆ ಜನರು ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು. ಆದರೆ ಬೆಳಿಗ್ಗೆ ಗಂಟೆ ೬ ರಿಂದ ಮಧ್ಯಾಹ್ನ ಗಂಟೆ ೧೨ರ ತನಕ ದಿನಸಿ ಅಗತ್ಯ ವಸ್ತುಗಳ ಖರೀದಿಗೆ ಸಮಯವಕಾಶ ನೀಡಿದಾಗ ಜನರು ಒಮ್ಮೆಲೆ ದಿನ ನಿತ್ಯದ ಸಾಮಾಗ್ರಿಗಳಿಗೆ ಅಂಗಡಿಗಳ ಮೊರೆ ಹೋಗಿ ದಿನಸಿ ಅಂಗಡಿಗಳಿಗೆ ಮುಗಿ ಬೀಳುವ ಪರಿಸ್ಥಿತಿಯಿಂದ ಕೊರೊನಾ ನಿಯಂತ್ರಿಸಲು ಅಸಾಧ್ಯ ಎಂದು ಮನಗಂಡ ದಿನಸಿ ವ್ಯಾಪಾರಸ್ಥ ಪ್ರಸಾದ್ ಕುಂಟಿಕಾನ ಅವರು ತನ್ನ ದಿನಸಿ ಅಂಗಡಿಗೆ ಗ್ರಾಹಕರು ಮುಗಿ ಬೀಳದಂತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗ್ರಾಹಕರು ಅವರಿಗೆ ಫೋನ್ ಮಾಡಿ ಅವಶ್ಯಕ ವಸ್ತುಗಳ ಪಟ್ಟಿ ತಿಳಿಸಿದರೆ ತಕ್ಷಣ ಅದನ್ನು ಸಿದ್ದಪಡಿಸಿ ಪ್ಯಾಕ್ ಮಾಡಿ ಇಟ್ಟು ಗ್ರಾಹಕರಿಗೆ ಫೋನ್ ಮಾಡಲಾಗುತ್ತದೆ. ಗ್ರಾಹಕರ ಅಂಗಡಿಗೆ ಬಂದು ಕಾಯುವ ಪರಿಸ್ಥಿತಿ ಇಲ್ಲದೆ ತನ್ನ ಸಾಮಾಗ್ರಿಗಳನ್ನು ಕೊಂಡೊಯ್ಯುತ್ತಾನೆ. ಈ ಮೂಲಕ ಗ್ರಾಹಕರು ಹೆಚ್ಚು ಅಂಗಡಿಯಲ್ಲಿ ಮುಗಿ ಬೀಳದಂತೆ ಅಂತರ ಕಾಯ್ದು ಕೊಳ್ಳುವ ಕೆಲಸ ಮಾಡುತ್ತಿರುವ ಮೂಲಕ ಅವರು ಇತರರಿಗೆ ಮಾದರಿಯಾಗಿದ್ದಾರೆ.

ನೋ ಕ್ಯಾಶ್ – ಎಲ್ಲವೂ ಕ್ರೆಡಿಟ್ ವ್ಯವಹಾರ
ನಮ್ಮ ಅಂಗಡಿಗೆ ನಿತ್ಯ ಬರುವ ಗ್ರಾಹಕರೇ ಬರುವುದು. ಹಾಗಾಗಿ ಅವರು ನನಗೆ ಪೋನ್ ಮಾಡಿ ವಸ್ತುಗಳ ಪಟ್ಟಿ ತಿಳಿಸಿದರೆ ಸಾಕು. ನಾನು ಎಲ್ಲವನ್ನು ಪ್ಯಾಕ್ ಮಾಡಿ ಇಟ್ಟು ಅವರಿಗೆ ಫೋನ್ ಮಾಡಿ ತಿಳಿಸುತ್ತೇನೆ. ಅವರು ತಕ್ಷಣ ಬಂದು ಸಾಮಾಗ್ರಿಗಳನ್ನು ಕೊಂಡೊಯ್ಯುತ್ತಾರೆ. ಅದೂ ಅಲ್ಲದೆ ಯಾರಲ್ಲೂ ಹಣವನ್ನು ಪಡೆದಿಲ್ಲ. ಎಲ್ಲವೂ ಕ್ರೆಡಿಟ್ ಮೂಲಕ ಕೊಡಲಾಗುತ್ತಿದೆ. ಜೊತೆಗೆ ಅಂಗಡಿಗೆ ಬರುವವರು ತಮ್ಮ ಸ್ವಚ್ಛತೆ ಕಾಪಾಡಿಕೊಳ್ಳಲು ಅಂಗಡಿಯ ಮುಂದೆ ಸಾಬೂನು ಮತ್ತು ನೀರು ಇಡಲಾಗಿದೆ – ಪ್ರಸಾದ್ ಕುಂಟಿಕಾನ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.