HomePage_Banner
HomePage_Banner
HomePage_Banner
HomePage_Banner

ಕೊರೊನಾ ಎಫೆಕ್ಟ್ – ಅಂತರ ಕಾಯ್ದು ಕೊಳ್ಳಲು ದಿನಸಿ, ಮೆಡಿಕಲ್, ತರಕಾರಿ ಅಂಗಡಿಗಳ ಮುಂದೆ ಮಾರ್ಕಿಂಗ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ನಗರಸಭೆ ವಿಶೇಷ ಕಾಳಜಿ

ಪುತ್ತೂರು: ಕೊರೊನಾ ಎಫೆಕ್ಟ್‌ನಿಂದಾಗಿ ದೇಶದಾದ್ಯಂತ ಲಾಕ್‌ಡೌನ್ ಮಾಡಲಾಗಿದ್ದು, ಜನರು ದಿನ ನಿತ್ಯದ ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಗ್ಗೆ ಲಾಕ್‌ಡೌನ್ ಸಡಿಲೀಕರಣದ ವೇಳೆ ಜನರು ಅಂಗಡಿಗಳಿಗೆ ನೂಕುನುಗ್ಗಲು, ಮುಗಿ ಬೀಳುವುದನ್ನು ತಪ್ಪಿಸಲು ಗ್ರಾಹಕರಲ್ಲಿ ನಿಗದಿತ ಅಂತರ ಕಾಯ್ದು ಕೊಳ್ಳುವ ನಿಟ್ಟಿನಲ್ಲಿ ದಿನಸಿ, ಮೆಡಿಕಲ್, ತರಕಾರಿ ಅಂಗಡಿಗಳ ಮುಂದೆ ನಗರಸಭೆ ಅಧಿಕಾರಿಗಳು ವೃತ್ತದ ಮಾರ್ಕ್ ಹಾಕಿದ್ದಾರೆ.

ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಅಂಗಡಿಗಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಈ ವೇಳೆ ಜನಸಂದಣಿ ಹೆಚ್ಚಾದರೆ ವೈರಸ್ ಹರಡೋ ಲಕ್ಷಣ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜನರು ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕೆಂದು ೧ ಮೀಟರ್ ಅಂತರದಲ್ಲಿ ಬಿಳಿ ಸುಣ್ಣದಿಂದ ವೃತ್ತದ ಮಾರ್ಕ್ ಮಾಡಲಾಗಿದ್ದು, ಗ್ರಾಹಕರು ಆಯಾ ವೃತ್ತದಲ್ಲೇ ನಿಂತು ಮುಂದಿನ ವೃತ್ತಕ್ಕೆ ಹೋಗಬೇಕು. ಬಳಿಕ ವಸ್ತುಗಳನ್ನು ಖರೀದಿಸಬೇಕು. ಜನರು ಒಟ್ಟಿಗೆ ಸೇರುವುದನ್ನು ತಡೆಯಲು ಈ ಮಾರ್ಗ ನಗರಸಭೆ ಕಂಡು ಕೊಂಡಿದೆ. ಇದರ ಜೊತೆ ಅಂಗಡಿಯ ಗೋಡೆಯಲ್ಲಿ ಮುನ್ನೆಚ್ಚರಿಕೆ ಭಿತ್ತಿ ಪತ್ರವನ್ನು ನಗರಸಭೆ ಅಂಟಿಸಿದೆ. ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಪೌರಾಯುಕ್ತೆ ರೂಪಾ ಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ, ನಗರಸಭೆ ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ, ರಾಜೇಶ್ ನಾಕ್ ಸೇರಿದಂತೆ ನಗರಸಭೆ ಸಿಬಂದಿಗಳು ಕಾರ್ಯಾಚರಣೆ ನಡೆಸಿದರು.

ಭಿತ್ತಿ ಪತ್ರದಲ್ಲೇನಿದೆ……
ತಮ್ಮ ಉದ್ಯಮದಲ್ಲಿರುವ ಉದ್ಯೋಗಿಗಳು ಕಡ್ಡಾಯವಾಗಿ ಮುಖಕವಚವನ್ನು ಧರಿಸಿ ಸಾರ್ವಜನಿಕರೊಂದಿಗೆ ವ್ಯವಹರಿಸತಕ್ಕದ್ದು, ತಮ್ಮ ಉದ್ಯಮ ಸ್ಥಳದ ಮುಂಭಾಗದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಅಥವಾ ಹ್ಯಾಂಡ್ ವಾಷ್,/ ಸೋಪು ಮತ್ತು ನೀರನ್ನು ಕಡ್ಡಾಯವಾಗಿ ಇಡತಕ್ಕದ್ದು, ಗ್ರಾಹಕರು ಅಂಗಡಿ ಮುಂಭಾಗದಲ್ಲಿ ಸಾಮಾಜಿಕ ದೂರವನ್ನು ಕಾಯ್ದುಕೊಂಡು ನಿಲ್ಲುವುದು ಮತ್ತು ಕಡ್ಡಾಯವಾಗಿ ಮುಖಗವಚ ಅಥವಾ ಬಟ್ಟೆಯಿಂದ ತಮ್ಮ ಮುಖವನ್ನು ಮುಚ್ಚುವಂತೆ ಕ್ರಮವಹಿಸುವುದು. ತಪ್ಪಿದಲ್ಲಿ ಅಂತಹ ಗ್ರಾಹಕರಿಗೆ ಅಂಗಡಿಗಳಿಂದ ಅಗತ್ಯ ಸಾಮಾಗ್ರಿಗಳನ್ನು ನೀಡಕೂಡದು ಎಂದು ಭಿತ್ತಿ ಪತ್ರದಲ್ಲಿ ಉಲ್ಲೇಖಸಿದ್ದು, ಈ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು, ತಪ್ಪಿದಲ್ಲಿ ನಿಯಮಾನುಸಾರ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಲಾಗಿದೆ.


ಮಾರ್ಕ್ ಮಾಡಲಾಗಿರುವ ವೃತ್ತದಲ್ಲೇ ಗ್ರಾಹಕರು ನಿಲ್ಲಬೇಕು. ಒಂದು ವೃತ್ತದಿಂದ ಮತ್ತೊಂದು ವೃತ್ತಕ್ಕೆ ಅಂತರವಿದ್ದು, ಅದರ ಮೂಲಕವೇ ಮುಂದೆ ಸಾಗಬೇಕು. ಮುಂದಿನ ದಿನಗಳ್ಲಿ ಮಾರ್ಕ್ ಮಾಸಿ ಹೋದರೆ ಅಂಗಡಿಯವರೇ ಬಾಕ್ಸ್ ಹಾಕಿಕೊಳ್ಳಬೇಕು – ರೂಪಾ ಶೆಟ್ಟಿ, ಪೌರಾಯುಕ್ತರು ನಗರಸಭೆ

About The Author

Related posts

1 Comment

  1. Dr Praveen Kumar Rai

    ಇಡೀ ದೇಶವೇ ಲಾಕ್ ಡೌನ್ ಆಗಿರುವ ಈ ಸಂದರ್ಭ ದಲ್ಲಿ ದಿನಸಿ ವಸ್ತು, ಔಷಧಿ ಮುಂತಾದ ಅಗತ್ಯ ವಸ್ತು ಗಳನ್ನು ಪಡೆಯುವುದು ಜನರ ಹಕ್ಕು ಹಾಗೂ ಸುಸೂತ್ರವಾಗಿ ನೀಡುವುದು ಆಡಳಿತ ದವರ ಕರ್ತವ್ಯ.
    ಕೇವಲ ದಿನದ ಒಂದು ಅವಧಿ ಯನ್ನು ನಿಗದಿ ಪಡಿಸು ವುದರಿಂದ ಒಮ್ಮೆಲೇ ಜನಸಂದಣಿ ಉಂಟಾಗಿದೆ. ಇದರಿಂದ ಲಾಕ್ ಡೌನ್ ಮಾಡುತ್ತಿರುವ ಮುಖ್ಯ ಕಾರಣಕ್ಕೆ ಬೆಲೆ ಇಲ್ಲದಂತಾಗಿದೆ. ದಿನಕ್ಕೆ ಕೇವಲ 6 ರಿಂದ 12 ಗಂಟೆ ಜನರಿಗೆ ಖರೀದಿ ಮಾಡಲು ಬಿಟ್ಟು, ಬೇರೆ ಸಮಯ ದಲ್ಲಿ ಕೊರೊನ ಹರಡುವುದಿಲ್ಲ ಎಂದಲ್ಲ. ಅದರ ಬದಲಿಗೆ ಆಯಾ ಆಯಾ ವಾರ್ಡ್ ನವರಿಗೆ ಇಂತಿಷ್ಟು ಸಮಯ ನಿಗದಿ ಪಡಿಸಿ ಆ ಸಮಯ ದಲ್ಲಿ ಮಾತ್ರ ಹೊರಗೆ ಬಂದು ಅಗತ್ಯ ವಸ್ತು ಗಳನ್ನು ಖರೀದಿ ಮಾಡಲು ಅವಕಾಶ ಕೊಡುವುದರಿಂದ ಅನಗತ್ಯ ಜನ ಸಂದಣಿ, ನೂಕು ನುಗ್ಗಲು ಅನ್ನು ಹತ್ತಿಕ್ಕಬಹುದು. ಈ ಜವಾಬ್ದಾರಿಯನ್ನು ಆಯಾ ವಾರ್ಡ್ ನ, ಪಂಚಾಯಿತಿ ಸದಸ್ಯರು ಹೊತ್ತುಕೊಂಡು ಸಮಯ ನಿಗದಿ ಪಡಿಸಬಹುದು.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.